ಭಾರತ- ನೇಪಾಳ ‌ಬಾಂಧವ್ಯ ಬೆಸುಗೆಗೆ ಯತ್ನ: ನ.5 ರ‌ ‌ಸಭೆ ನಿರ್ಣಾಯಕ

ನವದೆಹಲಿ, ನ.2-ಕಡಿತಗೊಂಡಿರುವ‌ ಭಾರತ- ನೇಪಾಳದ ಬಾಂಧವ್ಯ ಬೆಸುಗೆಗೆ ನವಂಬರ್ 5 ರಂದು ನಿರ್ಣಾಯಕ ದಿನವಾಗಿದೆ.

ಸೇನಾ ಮುಖ್ಯಸ್ಥ ಎಂ.ಎಂ ನರವಣೆ ಅವರು ನವೆಂಬರ್ 5 ರಂದು ಕಠ್ಮಂಡ್ ನಲ್ಲಿ ಪ್ರಧಾನಿ ಕೆ.ಪಿ ಶರ್ಮಾ ಓಲಿ ಅವರ ಜೊತೆ ಮಾತುಕತೆ ನಡೆಯಲಿದ್ದು ಅದರ ಆದಾರದ ಮೇಲೆ‌ ಉಭಯ ದೇಶಗಳ‌‌ ವಿದೇಶಾಂಗ ಕಾರ್ಯದರ್ಶಿಗಳ ಮಾತುಕತೆ ನಡೆಯಬೇಕೇ ಅಥವಾ ಬೇಡವೇ ಎನ್ನುವ ಬಗ್ಗೆ ಅಂತಿಮ‌ ನಿರ್ದಾರಕ್ಕೆ ಬರುವ ಎಲ್ಲಾ ಸಾದ್ಯಗಳಿವೆ.

ಭಾರತದ ಭೂಭಾಗವನ್ನು ನಮ್ಮದು ಎಂದು ತನ್ನ ಭೂಪಟದಲ್ಲಿ ತೋರಿಸಿದ ಆರೋಪದ‌ ಹಿನ್ನಲೆಯಲ್ಲಿ ನೇಪಾಳದ ಜೊತೆ ಭಾರತ ಸಂಬಂಧ ಕಡಿತ ಮಾಡಿಕೊಂಡಿತ್ತು.

ಚೀನಾ‌ ಜೊತೆ‌ ಸೇರಿಕೊಂಡು ಭಾರತದ ವಿರುದ್ದ ಕತ್ತಿ ಮಸೆಯುತ್ತಿದ್ದ ನೇಪಾಳ‌‌ ಮತ್ತು ಪ್ರಧಾನಿ ಕೆ.ಪಿ‌ ಶರ್ಮಾ ಓಲಿ ಅವರಿಗೆ ಪಾಠ ಕಲಿಸಲು ಭಾರತ ನೇಪಾಳದ ಜೊತೆಗೆ ಎಲ್ಲಾ ರೀತಿಯ ಭಾಂಧವ್ಯ ಕಡಿತ ಮಾಡಿಕೊಂಡಿತ್ತು.

ರಕ್ಷಣಾ ಸಚಿವ ಸ್ಥಾನದಿಂದ ವಜಾ:

ಭಾರತದ ಮೇಲೆ ಪದೇ ಪದೇ ಆರೋಪ ಮಾಡುತ್ತಿದ್ದ ನೇಪಾಳದ ಉಪ‌ ಪ್ರಧಾನಿಯೂ ಆಗಿರುವ ರಕ್ಷಣಾ ಸಚಿವ‌ ಈಶ್ವರ್ ಪೋಕ್ರೆಲ್ ಅವರನ್ನು ಅವರ ಸ್ಥಾನದಿಂದ ವಜಾ ಮಾಡಲಾಗಿದ್ದು ಸದ್ಯ ರಕ್ಷಣಾ ಖಾತೆಯನ್ನು ಪ್ರಧಾನಿ‌‌ ಕೆ.ಪಿ ಶರ್ಮಾ ಓಲಿಯೆ ವಹಿಸಿಕೊಂಡಿದ್ದಾರೆ.

ಸೇನಾ ಮುಖ್ಯಸ್ಥ ಎಂ.ಎಂ‌ ನರವಣೆ ಅವರು ನವಂಬರ್ 4 ರಿಂದ ಮೂರು ದಿನಗಳ ನೇಪಾಳ ಭೇಟಿಗೆ ಪ್ರದಾನಿ ಕೆ.ಪಿ ಶರ್ಮಾ ಓಲಿ ಹಸಿರು‌‌ ನಿಶಾನೆ ತೋರಿದ್ದರು.

ಮಾತುಕತೆ ಮೇಲೆ ಮುಂದಿನ ನಿರ್ದಾರ:

ಪ್ರಧಾನಿ ಕೆ.ಪಿ ಶರ್ಮಾ ಮತ್ತು ಸೇನಾ ಮುಖ್ಯಸ್ಥ ಎಂ.ಎಂ ನರವಣೆ ಅವರ ಮಾತುಕತೆ ಯಶಸ್ವಿಯಾದರೆ ಉಭಯ ದೇಶಗಳ ವಿದೇಶಾಂಗ ಕಾರ್ಯದರ್ಶಿ ಮಟ್ಟದ ಮಾತುಕತೆ ಸೇರಿದಂತೆ ಮುಂದಿನ ಭಾಂಧವ್ಯ ದ ಮುಂದಿನ ನಿರ್ದಾರದ ಮೇಲೆ ಅವಲಿಂಬಿಸಿದೆ.

ಮಾತುಕತೆ ಯಶಸ್ವಿಯಾದರೆ ಭಾರತಕ್ಕಿಂತ ನೇಪಾಳಕ್ಕೆ ಹೆಚ್ಚು ಅನುಕೂಲ.‌ಹೀಗಾಗಿ ನವಂಬರ್ 5 ಮಾತುಕತೆ ಮಹತ್ವ‌ಪಡೆದುಕೊಂಡಿದೆ.