ಭಾರತ ದೇಶ ಭಾವೈಕ್ಯತೆ ತವರು: ಹಾಸಿಂಪೀರ ವಾಲಿಕಾರ

ಕೊಲ್ಹಾರ:ಫೆ.15: ಭಾರತ ಬಹು ಧಮಿ9ಯರ, ಬಹುಭಾಷಿಕರ ಹಾಗು ಬಹು ಸಂಸ್ಕøತಿಯ ದೇಶವಾಗಿದ್ದರಿಂದ ಇಂದು ಧಾಮಿ9ಕ ಭಾವೈಕ್ಯತೆಯ ಅವಶ್ಯಕತೆ ಇದೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಹಾಸಿಂಪೀರ ವಾಲಿಕಾರ ಅಭಿಪ್ರಾಯ ವ್ಯಕ್ತಪಡಿಸಿದರು.
ಸಮೀಪದ ಹಳ್ಳದ ಗೆಣ್ಣೂರ ಗ್ರಾಮದಲ್ಲಿ ಬೀರಲಿಂಗೇಶ್ವರ ಹಾಗೂ ಜಟ್ಟಿಂಗೇಶ್ವರ ಜಾತ್ರಾ ಮಹೋತ್ಸವ ನಿಮಿತ್ತ ಭಾವೈಕ್ಯತಾ ಸಮಾವೇಶ ಉದ್ಘಾಟಿಸಿ ಮಾತನಾಡುತ್ತಾ ನಾವೆಲ್ಲರೂ ದೇವರ ಸಂತಾನ. ಜಾತಿ, ಮತ, ಪಂಥ, ಭಾಷೆ, ಲಿಂಗ, ವಣ9, ಎನ್ನದೇ ವಿಶ್ವವೇ ಒಂದು ಕುಂಟುಂಬ ಎಂದು ಅರಿತು ಭಾವೈಕ್ಯತೆಯ ನೀತಿಯನ್ನು ಅನುಸರಿಸಬೇಕೆಂದರು.
ಚಿಂತಕ ಮೋಹನ ಮೇಟಿ ಮಾತನಾಡಿ ಮಾನವ ಮಾನವೀಯ ಮೌಲ್ಯ ಕಾಪಾಡಿ ಸಾಮರಸ್ಯ ಜೀವನಕ್ಕೆ ಮಹತ್ವ ನೀಡಬೇಕು. ಎಲ್ಲ ಧಮ9ದ ತಿರುಳು ಮಾನವೀಯ ಧಮ9 ಆಧರಿಸಿವೆ ದೇವನ ಕುಟುಂಬವಿದು ಎಂದರು.
ಹುಲಜಂತಿ ಸುಕ್ಷೇತ್ರದ ಜಗದ್ಗುರು ಮಾಳಿಂಗರಾಯ ಮಹಾರಾಜರು ಸಾನ್ನಿಧ್ಯ ವಹಿಸಿ ಮಾತನಾಡಿ ನಾವೆಲ್ಲರು ಸಹೊದರತೆಯ ಭಾವನೆಯಿಂದ ಬದುಕಿ ಬಾಳಬೇಕು. ಭಾವೈಕ್ಯತೆಯ ಸಮಾಜ ನಿರ್ಮಾಣ ಮಾಡುವದು ಅತ್ಯವಶ್ಯ ಎಂದರು.
ಕೊಲ್ಹಾರದ ಪ್ರಭುಕುಮಾರ ಶಿವಾಚಾರ್ಯ,ನ್ಯಾಯವಾದಿ ಮಹಮ್ಮದ ಗೌಸ ಹವಾಲ್ದಾರ ಮಾತನಾಡಿದರು
ಸಾನ್ನಿಧ್ಯ ವಹಿಸಿದ್ದ ಹುಲಜಂತಿ ಜಕರಾಯ ಮಹಾರಾಜರು ನಾಗಠಾಣ ಗುಳಪ್ಪಮುತ್ತ್ಯಾ ಪೂಜಾರಿ
ಸಿದ್ದಪ್ಪ ಪೂಜಾರಿ ಬ್ಲಾಕ ಕಾಂಗ್ರೆಸ್ ಅಧ್ಯಕ್ಷ ರಫೀಕ ಪಕಾಲಿ ಮಹಮ್ಮದ ಹನೀಪ ಮಕಾಂದರ ರಶೀದ ಅಹಮ್ಮದ ಹವಾಲ್ದಾರ ಸಿದ್ದನಗೌಡ ಪಾಟೀಲ ಸಹಿತ ಅನೇಕರು ಉಪಸ್ಥಿತರಿದ್ದರು