ಭಾರತ ದೇಶ ಪ್ರಜಾಪ್ರಭುತ್ವ ರಾಷ್ಟ್ರ ನಾವೆಲ್ಲರೂ ಭಾರತೀಯರು .!! ಸಂವಿಧಾನದ ಪಿಠೀಕೆಯನ್ನು ಎಲ್ಲರೂ ಓದಬೇಕು : ಪರಶುರಾಮ ಕಟ್ಟಿಮನಿ

ಲಿಂಗಸುಗೂರು,ಸೆ.೧೫-
ಕರ್ನಾಟಕ ಸರ್ಕಾರದ ಆದೇಶದಂತೆ ಜಿಲ್ಲಾಡಳಿತ, ತಾಲೂಕಾಡಳಿತ, ಸಮಾಜ ಕಲ್ಯಾಣ ಇಲಾಖೆ ಆದೇಶದಂತೆ ಇಂದು ನಡೆದ ಅಂತರಾಷ್ಟೀಯ ಪ್ರಜಾಪ್ರಭುತ್ವ ದಿನಾಚರಣೆ ನಿಮಿತ್ಯ ಪ್ರತಿಯೊಬ್ಬ ಪ್ರಜೆಯು ಕೂಡ ಇಂದು ಏಕ ಧ್ವನಿಯಲ್ಲಿ ಮೊಳಗಿದ ಸಂವಿದಾನದ ಪಿಠೀಕೆಯ ಜಾಗತಿಕ ವಾಚನೇ ಮೂಲಕ ಪಟ್ಟಣದ ನಗರ ಯೋಜನಾ ಪ್ರಾಧಿಕಾರ ಕಛೇರಿಯಲ್ಲಿ ಡಾ: ಅಂಬೇಡ್ಕರ್ ಭಾವ ಚಿತ್ರಕ್ಕೆ ಮಾಲಾ ಅರ್ಪಣೆ ಮಾಡಿ ಸಂವಿಧಾನದ ಪ್ರಸ್ತಾವನೆ ಎನ್ನು ಓದು ಮೂಲಕ ಪ್ರಜಾಪ್ರಭುತ್ವ ಸಮಾನತೆ ಬಗ್ಗೆ ಯೋಜನಾ ಪ್ರಾಧಿಕಾರದ ಅಧಿಕಾರಿ ಪರಶುರಾಮ ಕಟ್ಟಿಮನಿ ಅಭಿಪ್ರಾಯ ಪಟ್ಟರು. ಹಾಗೂ ಇದೆ ಸಂದರ್ಭದಲ್ಲಿ ಮಾತನಾಡಿದ ಅವರು
ಭಾರತ ದೇಶ ಪ್ರಜಾಪ್ರಭುತ್ವ ರಾಷ್ಟ್ರ ನಾವೆಲ್ಲರೂ ಭಾರತೀಯರು ಇಲ್ಲಿ ಸಮಾನತೆ ಸ್ವಾತಂತ್ರ್ಯ ದೊರಕಿಸಿಕೊಟ್ಟ ಮಹಾತ್ಮಾ ಸಂವಿಧಾನದ ಪಿತಾಮಹ ಡಾ ಬಿ ಆರ್ ಅಂಬೇಡ್ಕರ್ ಅವರ ರಚಿಸಿದ ಸಂವಿಧಾನ ಇಂದು ಪ್ರಜಾಪ್ರಭುತ್ವ ದಿನಾಚರಣೆ ಆಚರಣೆ ಮಾಡುವುದು ನಮ್ಮೆಲ್ಲರ ಕರ್ತವ್ಯ ಎಂದು ಪರುಶುರಾಮ ಕಟ್ಟಿಮನಿ ಇವರು ಹೇಳಿದರು.
ಈ ಸಂದರ್ಭದಲ್ಲಿ ದೀಪಕ್ , ಕುಮಾರ ಸೇರಿದಂತೆ ಇದ್ದರು.