
ದೇವದುರ್ಗ,ಆ.೧೫- ಐಕ್ಯತೆ,ಭಾವೈಕ್ಯತೆ,ಸಂಸ್ಕಾರ,ಸಂಪದ್ಭರಿತದಂತಹ ಗುಣಗಳಿಂದ ನಮ್ಮ ದೇಶ ಜಗತ್ತಿನ ಗಮನ ಸೆಳೆದಿದ್ದು,ಇಂಥ ಪವಿತ್ರ ದೇವರ ಮನೆಯಲ್ಲಿ ನಾವು-ನೀವೆಲ್ಲರೂ ಜನಿಸಿದ್ದು ಪುಣ್ಯದ ಫಲ.ಪ್ರಜಾಭುತ್ವದ ಆಶಯಗಳ ಜಾರಿಗೆ ಎಲ್ಲರೂ ಶ್ರಮಿಸಬೇಕೆಂದು ಶಾಸಕಿ ಕರೆಮ್ಮ ಗೋಪಾಲಕೃಷ್ಣ ನಾಯಕ ತಿಳಿಸಿದರು.
ಪಟ್ಟಣದ ಸಾರ್ವಜನಿಕ ಕ್ಲಬ್ ಆವರಣದಲ್ಲಿ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಸೋಮವಾರ ತಾಲೂಕು ಆಡಳಿತ ಆಯೋಜಿಸಿದ್ದ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಚಾಲನೆ ನೀಡಿ ಮಾತನಾಡಿದರು.
ಮಕ್ಕಳು ಭವಿಷ್ಯದ ಕುಡಿಗಳಾಗಿದ್ದು ಆರೋಗ್ಯ ಮತ್ತು ಶಿಕ್ಷಣ ನೀಡುವದು ಎಲ್ಲರ ಹೊಣೆಯಾಗಿದೆ.ತಾಲೂಕಿನಲ್ಲಿ ಉತ್ತಮ ಸೌಲಭ್ಯಗಳನ್ನು ಅಗತ್ಯಕ್ಕೆ ತಕ್ಕಂತೆ ಒದಗಿಸುವಲ್ಲಿ ಅಧಿಕಾರಿಗಳ ವರ್ಗದ ಪಾತ್ರ ತುಂಬಾ ಮಹತ್ವ.
ಇತ್ತೀಚಿಗೆ ಕೆಲ ಶಾಲೆಗಳಲ್ಲಿ ಶಿಕ್ಷಣದ ಪ್ರಗತಿ ಕಾಣುತ್ತಿದೆ.ಆದರೆ ಎಲ್ಲಾ ಶಾಲೆಗಳಲ್ಲಿ ಈ ವಾತಾವರಣ ನಿರ್ಮಾಣವಾಗಬೇಕಾಗಿದೆ.ಈ ನಿಟ್ಟಿನಲ್ಲಿ ಶಿಕ್ಷಕರು ಮತ್ತು ಪಾಲಕರು ಹೆಚ್ಚಿನ ಗಮನ ನೀಡಬೇಕಾಗಿದೆ.
ದೇಶಕ್ಕೆ ಸ್ವಾತಂತ್ರ್ಯ ದೊರಕಿ ೭೬ವರ್ಷ ಕಳೆದರೂ ಇನ್ನೂ ಮೂಲ ಸೌಕರ್ಯಗಳಿಗೆ ಪರದಾಡುವ ಸ್ಥಿತಿ ಇರುವದು ಶೋಚನೀಯ.ಆಗಾಗ್ಗೆ,ಅಲ್ಲಲ್ಲಿ ಇನ್ನೂ ಮಹಿಳೆಯರ ಮೇಲೆ ಅತ್ಯಚಾರ,ದೌರ್ಜನ್ಯ ಪ್ರಕರಣಗಳು ಕಾಣುತ್ತಿರುವದು ದುರಂತದ ಸಂಗತಿ.ನಾಗರಿಕ ಸಮಾಜ ಹಾಗೂ ಸರಕಾರಗಳು ಕಾನೂನು ರಕ್ಷಣೆಗೆ ಬದ್ಧವಾಗಿದ್ದು,ಮಹಿಳೆಯರು ಅಳುಕದೇ ಸಮಾಜದ ಮುಖ್ಯವಾಹಿನಿಗೆ ಬರಬೇಕು ಎಂದು ಶಾಸಕಿ ಕರೆಮ್ಮ ಜಿ.ನಾಯಕ ಕರೆ ನೀಡಿದರು.
ತಹಸೀಲ್ದಾರ ಚನ್ನಮಲ್ಲಪ್ಪ ಘಂಟಿ ಅಧ್ಯಕ್ಷತೆ ವಹಿಸಿದ್ದರು.ಸ್ವಾತಂತ್ರ್ಯ ಹೋರಾಟಗಾರ ಆದಿ ರಾಜಶೇಖರಪ್ಪ ಪತ್ನಿ ಆದಿ ಕಮಲಮ್ಮರನ್ನು ತಾಲೂಕು ಆಡಳಿತದ ಪರವಾಗಿ ಗೌರವಿಸಲಾಯಿತು.ಅತಿ ಹೆಚ್ಚು ಅಂಕಗಳನ್ನು ಪಡೆದ ಮಕ್ಕಳಿಗೆ ಪ್ರಶಸ್ತಿ ನೀಡಿ ಪುರಸ್ಕರಿಸಲಾಯಿತು.
ತಾ.ಪಂ ಇಓ ರಾಮರೆಡ್ಡಿ ಪಾಟೀಲ್,ಪುರಸಭೆ ಮುಖ್ಯಧಿಕಾರಿ ಹಂಪಯ್ಯ ಕೆ.,ಕ್ಷೇತ್ರ ಶಿಕ್ಷಣಧಿಕಾರಿ ಸುಖದೇವ,ಕ್ಷೇತ್ರ ಸಮನ್ವಯ ಅಧಿಕಾರಿಶಿವರಾಜ ಪೂಜಾರಿ,ಜಿ.ಪಂ ಸಹಾಯಕ ಎಂಜನೀಯರ್ ಅಲ್ಲಾಬಕ್ಷ ಬನಹಟ್ಟಿ,ಶಿಶು ಅಭಿವೃದ್ಧಿ ಅಧಿಕಾರಿ ವೆಂಕಟಪ್ಪ,ಸಹಾಯಕ ಕೃಷಿ ನಿರ್ದೇಶಕ ಬಸವರಾಜ ಸಿದ್ದಾರೆಡ್ಡಿ,ಸಿಪಿಐ ಹೊಸಕೇರಪ್ಪ,ಗುಂಡುರಾವ್ ವೈ.ಎನ್ ಸೇರಿದಂತೆ ಇತರೆ ಅಧಿಕಾರಿಗಳು ಪಾಲ್ಗೊಂಡಿದ್ದರು.
೦೦೦೦೦೦೦೦೦೦೦೦೦೦೦೦೦೦೦೦೦೦೦
ಜನಬಲಕ್ಕೆ ಮನ್ನಣೆ
ತಾಲೂಕಿನಲ್ಲಿ ಬದಲಾವಣೆ ಗಾಳಿ ಬೀಸಿದೆ.ತೋಳ್ಬಲ,ಹಣಬಲದ ಮುಂದೆ ಜನಬಲಕ್ಕೆ ಜಯದೊರಕಿದೆ.ಮಹಿಳೆ ಶಾಸಕಿಗೆ ಕ್ಷೇತ್ರದ ಮತದಾರರು ಆರ್ಶೀವಾದ ಮಾಡಿದ್ದು,ಉತ್ತಮ ಆಡಳಿತದ ಗುರಿ ಹೊಂದಿರುವೆ.ಅಧಿಕಾರಿಗಳು ಯಾವುದೇ ಪ್ರಭಾವಕ್ಕೆ ಒಳಗಾಗಬೇಡಿ.ಉತ್ತಮ ಸೇವೆ ನೀಡಲು ನನ್ನೊಂದಿಗೆ ಸಹಕರಿಸಿ.ಬ್ರಷ್ಠಾಚಾರದ ವಿರುದ್ಧ ಹೋರಾಡುವದೇ ನನ್ನ ಗುರಿಯಾಗಿದ್ದು,ಜನರ ನಿರೀಕ್ಷೆಗೆ ತಕ್ಕಂತೆ ಪ್ರಾಮಾಣಿಕ ಸೇವೆ ಮಾಡಲಿದ್ದು,ನಾನೇನು ಶಾಸಕಿ ಎಂದು ಬೀಗುವದಿಲ್ಲ.ಎಂದಿಗೂ ನಿಮ್ಮ ಸೇವಕಿ.-ಕರೆಮ್ಮ ಗೋಪಾಲಕೃಷ್ಣ ನಾಯಕ