ಭಾರತ ದೇವತೆಗಳ ತಾಣವಾಗಿದೆ:ಡಾ.ವೀರುಪಾಕ್ಷದೇವರು

ತಾಳಿಕೋಟೆ:ಅ.2: ದೇವಾದ ದೇವತೆಗಳು ಹಾಗೂ ಋಷಿಮುನಿಗಳು ಮಹಾ ಯೋಗಿಗಳು ನಮ್ಮ ಭಾರತ ದೇಶದಲ್ಲಿ ವಾಸ ಮಾಡಿ ಹೋಗಿದ್ದಾರೆ ಅಂತಹ ಮಹಾ ದೇಶದಲ್ಲಿಯ ಒಳ್ಳೆಯ ವಿಚಾರ ಒಳ್ಳೆಯ ಸಂಸ್ಕøತಿಯನ್ನು ಪಾಲಿಸದೇ ವಿದೇಶಿ ಸಂಸ್ಕøತಿಯ ವ್ಯಾಮೋಹಕ್ಕೆ ಒಳಗಾಗುತ್ತಿರುವದನ್ನು ನೋಡಿದರೆ ಅತೀವ ಖೇದವೆನಿಸುತ್ತದೆ ಎಂದು ಇಂಡಿ ತಾಲೂಕಿನ ಗೋರನಾಳ ಹಿರೇಮಠದ ಪೂಜ್ಯಶ್ರೀ ಡಾ.ವೀರುಪಾಕ್ಷದೇವರು ಹಿರೇಮಠ ನುಡಿದರು.

    ರವಿವಾರರಂದು ಅಕ್ಟೋಬರ್ 3 ರಂದು ಆಚರಿಸಲಾಗುವ ಶ್ರೀ ಖಾಸ್ಗತೇಶ್ವರರ 127ನೇ ಹಾಗೂ ಶ್ರೀ ವಿರಕ್ತ ಮಹಾಸ್ವಾಮಿಗಳವರ 9ನೇ ವರ್ಷದ ಪುಣ್ಯಸ್ಮರಣೋತ್ಸವ ಕುರಿತು ಶ್ರೀ ಮಠದಲ್ಲಿ ಏರ್ಪಡಿಸಲಾದ ಆದ್ಯಾತ್ಮೀಕ ಪ್ರವಚನದ 4ನೇ ದಿನದಂದು ಮಾತನಾಡುತ್ತಿದ್ದ ಅವರು ಮಾನವನ ದೇಹ ಅನ್ನುವದನ್ನು ಸೃಷ್ಠಿ ಮಾಡಿದಂತಹ ಪರಮಾತ್ಮನ ಲೀಲೆ ಅಪಾರವಾಗಿದೆ ಈ ಮಾನವನ ದೇಹಕ್ಕಿಂತ ದೊಡ್ಡ ಜಾಧು ಯಾವುದು ಇಲ್ಲಾವೆಂದರು. ಜಾಧುಗಾರನಾದವನು ಆತ ಜಾಧು ತೋರಿಸುವದು ಕೇವಲ ಹಣದಾಸೆಗಾಗಿ ತೋರಿಸುತ್ತಾನೆ ಆದರೆ ಈ ನಮ್ಮ ಮಾನವನ ದೇಹದಲ್ಲಿದ್ದ ದೊಡ್ಡ ಜಾಧು ಪರಮಾತ್ಮ ರೂಪಿಸಿದ್ದಾನೆಂದರು. ಮಾನವರಾದ ನಾವು ದಿನದ ಊಟದಲ್ಲಿ ತಿನ್ನುತ್ತಿದ್ದ ರೋಟ್ಟಿಯಾಗಲಿ ಕುಡಿಯುತ್ತಿದ್ದ ನೀರಾಗಲಿ ಉಸಿರಾಡುತ್ತಿದ್ದ ಉಸಿರಾಗಲಿ ಈ ಎಲ್ಲವನ್ನು ಚಿಕ್ಕವರಿರುವಾಗಲಿಂದ ಹಿಡಿದು ಈಗಿದ್ದ ವಯೋಮಿತಿ 60 ಆಗಲಿ 70 ಆಗಲಿ ಇಷ್ಟು ವರ್ಷದ ವರೆಗೆ ಲೆಕ್ಕಹಾಕಿದರೆ ನಾವು ತಿಂದ ಊಟ ನಾವು ಕುಡಿದ ನೀರು ನಾವು ಉಸಿರಾಡಿಸಿದ ಆಕ್ಷೀಜನ್ ಇವೇಲ್ಲವೂ ಒಂದೆಡೆ ಕೂಡಿ ಹಾಕಿದರೆ ಎಷ್ಟು ಇದೆಲ್ಲವೂ ಲೆಕ್ಕ ಮಾಡಲು ಬಾರದಂತಾಗಿರುತ್ತದೆ ಮತ್ತು ವಿಚಿತ್ರವೆನಿಸುತ್ತದೆ ಇಂತಹ ಅದ್ಭುತ್ ದೇಹ ಅನ್ನುವದು ಸೃಷ್ಠಿಮಾಡಿದಂತಹ ಪರಮಾತ್ಮನ ಕುರಿತು ವಿಚಾರ ಮಾಡಬೇಕಾಗಿದೆ ಎಂದರು. ಧರ್ಮ, ಕರ್ಮವೆಂಬವುಗಳು ಸೂಕ್ಷ್ಮವಾಗಿವೆ ನಾವು ಮಾಡಿದ್ದೇ ನಮಗೆ ಪ್ರಾಪ್ತಿಯಾಗುತ್ತದೆ ಸುಖಃ ದುಖಃ ಕೊಡುವದೇ ನಾವು ಮಾಡಿದ ಕರ್ಮವೇ ಕಾರಣ ಇವೇಲ್ಲವು ಶುದ್ದಿ ಮಾಡುವದೇ ಆದ್ಯಾತ್ಮೀಕ ಪ್ರವಚನವಾಗಿದೆ ಎಂದರು. ಅಂದಕಾರದಲ್ಲಿ ದೀಪದ ಅವಶ್ಯಕತೆ ಇರುತ್ತದೆ ಹಾಗೆ ನಮ್ಮಲ್ಲಿಯ ಮೋಹ ಹೋಗಬೇಕಾದರೆ ಜ್ಞಾನದ ಅವಶ್ಯಕತೆ ಇದೆ ನಾವೇಲ್ಲರೂ ಅನ್ಯರು ಮಾಡಿದ್ದನ್ನು ನೋಡಿ ಮಾಡುತ್ತಾ ಸಾಗಿದ್ದೇವೆ ಅವರು ಮಾಡುತ್ತಿರುವದು ಪಾಪದ್ದಿದೆಯೋ ಪುಣ್ಯದಿದ್ದೇಯೋ ಎಂಬುದು ತಿಳಿದುಕೊಳ್ಳುವದಿಲ್ಲಾ ದುಡ್ಡಿಗಾಗಿ ಚಾರಿತ್ರ್ಯವನ್ನೇ ಕಳೆದುಕೊಳ್ಳುತ್ತಾರೆ ಇಡೀ ಮನೆತನವನ್ನೇ ಹಾಳು ಮಾಡಿಕೊಳ್ಳುತ್ತಾರೆ ಕಾರಣ ನಾವೇಲ್ಲರೂ ಭಾರತೀಯರಾದ ನಾವು ನಮ್ಮ ದೇಶದ ಸಂಸ್ಕಾರ ಬಿಟ್ಟು ವಿದೇಶದ ಸಂಸ್ಕøತಿಗೆ ಬೆನ್ನು ಹತ್ತುವದು ಸರಿ ಅಲ್ಲಾವೆಂದರು. ಭಾರತೀಯರ ಹಿಂದಿನ ಇಂದಿನ ಉಡುಪುಗಳನ್ನು ನೋಡಿದರೆ ಇವರು ಭಾರತೀಯರೋ ವಿದೇಶಿಯರೋ ಎಂಬುದು ತಿಳಿಯದಂತಾಗುತ್ತದೆ ಕಾರಣ ಇಂತಹ ಪವಿತ್ರಭೂಮಿಯಲ್ಲಿ ಜನ್ಮ ತಾಳಿದ ನಾವುಗಳು ಅರ್ಥೈಸಿಕೊಂಡು ನಡೆಯಬೇಕೆಂದರು.

ನಾವೇಲ್ಲರೂ ಭೋಗ ಭಾಗ್ಯವನ್ನು ಪಡೆದವರಲ್ಲಾ ಹಿಂದೆ ಮಾಡಿದ ಕರ್ಮ ಇಂದು ಉಣ್ಣಬೇಕಾಗಿದೆ ಕರ್ಮ ಶುದ್ದಿಯಾಗಿ ಹೋದರೆ ಚಂಚಲತೆ ಕಳೆದು ಜ್ಞಾನ ಉಳಿದು ಬದ್ರವಾಗಿಡಲು ಸಾಧ್ಯವಾಗುತ್ತದೆ ಎಂದರು. ನಾವು ಮಾಡಿದಂತಹ ಕರ್ಮಗಳನ್ನು ಶುದ್ದಿಕರಣ ಮಾಡಿಕೊಳ್ಳಬೇಕು ಈ ಕುರಿತು ತಿಳುವಳಿಕೆ ಎಂಬುದು ಬೇಕು ಸುಖಃದಲ್ಲಿದ್ದಾಗ ಪರಮಾತ್ಮನನ್ನು ನೆನೆಸುತ್ತೇವೆಂದು ಹೇಳಿದ ಶ್ರೀಗಳು ಆಧಿತಾಪ, ವ್ಯಾಧಿತಾಪ ಎಂಬವುಗಳ ಕುರಿತು ವಿವರಿಸಿದ ಶ್ರೀಗಳು ಚಿಂತನೆ ಮಾಡುವದೇ ಆಧಿತಾಪದ್ದಾಗಿದೆ ಪ್ರಕೃತಿಯೊಳಗೆ ಬದಲಾವಣೆಯಾದಾಗ ದೇಹದ ಪ್ರಕೃತಿ ಕೆಟ್ಟಾಗ ಅವಾಗ ವ್ಯಾಧಿತಾಪ ಅನ್ನುತ್ತಾರೆ ಕಾರಣ ನಾವು ಮಾಡಿದ ಹಿಂದಿನ ಕರ್ಮ ಭೋಗಿಸಲೇ ಬೇಕು ಕಾರಣ ಶರಣರ ಮಾತಿನಂತೆ ಇಲ್ಲಿ ಸಲ್ಲುವವರು ಅಲ್ಲಿ ಸಲ್ಲುತ್ತಾರೆ ಇಲ್ಲಿ ಸಲ್ಲದವರು ಅಲ್ಲಿ ಸಲ್ಲುವದಿಲ್ಲಾ ಎಂಬುದನ್ನು ಅರ್ಥೈಸಿಕೊಂಡು ಪ್ರತಿಯೊಬ್ಬರಲ್ಲಿದ್ದ ಆಸೆಯನ್ನು ಆಧ್ಯಾತ್ಮೀಕ ವಿಚಾರವನ್ನು ನಾವು ಅಳವಡಿಸಿಕೊಂಡು ಇಡೇರಿಸಿಕೊಳ್ಳಲು ಮುಂದಾಗಬೇಕೆಂದು ಶ್ರೀಗಳು ಹೇಳಿದರು.

ವೇ.ಚಂದ್ರಶೇಖರ ಶಾಸ್ತ್ರೀಗಳು, ಶ್ರೀ ಖಾಸ್ಗತೇಶ್ವರ ಮಠದ ವೇ.ಮುರುಘೇಶ ವಿರಕ್ತಮಠ, ವೇ.ವಿಶ್ವನಾಥ ವಿರಕ್ತಮಠ, ಹಾಗೂ ಗವಾಯಿಗಳಾದ ದೀಪಕಸಿಂಗ್ ಹಜೇರಿ, ಲಕ್ಷ್ಮಣಸಿಂಗ್ ವಿಜಾಪೂರ, ಪಿಠೀಲ್‍ವಾದಕ ಯಲ್ಲಪ್ಪ ಗುಂಡಳ್ಳಿ, ಹಣಮಂತಕುಮಾರ ಬಳಗಾನೂರ, ತಬಲಾವಾದಕ ಬಸನಗೌಡ ಬಿರಾದಾರ, ಪರಶುರಾಮ ಚಟ್ನಳ್ಳಿ, ಉಮಾಪತಿ ಹಿರೇಮಠ, ಕುಮಾರ ಕುದರಗುಂಡ, ರಾಜು ಗುಬ್ಬೇವಾಡ, ಹಣಮಂತ ಭಂಟನೂರ, ಅಂಬ್ರಯ್ಯ ಹಿರೇಮಠ, ಯಲ್ಲಾಲಿಂಗ, ವಿನೋದ ಚಿಕ್ಕಮಠ, ಶಾರದಾ ವಿಜಾಪೂರ, ಹಾಗೂ ಮೋಹನ ಅಂಬಿಗೇರ, ಮೊದಲಾದವರು ಉಪಸ್ಥಿತರಿದ್ದರು.

ದೀಪಕಸಿಂಗ್ ಸ್ವಾಗತಿಸಿ ವಂದಿಸಿದರು.