ಭಾರತ ತಂಡದ ನ್ಯೂಜೆರ್ಸಿ ಅನಾವರಣ

ಮುಂಬೈ, ಅ.12-ದುಬೈನಲ್ಲಿ ನಡೆಯಲಿರುವ ಟಿ20 ವಿಶ್ವಕಪ್‍ಗೆ ದಿನಗಣನೇ ಆರಂಭವಾಗಿರುವ ಬೆನ್ನಲ್ಲೇ, ಟೀಂ ಇಂಡಿಯಾ ಟಿ20 ವಿಶ್ವಕಪ್‍ಗೆ ಹೊಸ ಜೆರ್ಸಿಯೊಂದಿಗೆ ಕಣಕ್ಕಿಳಿಯಲಿದ್ದು, ಇಂದು ನೂತನ ಜೆರ್ಸಿ ಅನಾವರಣ ಗೊಂಡಿದೆ.
ಭಾರತ ತಂಡ ಧರಿಸುವ ನೂತನ ಜೆರ್ಸಿಯನ್ನು ಬಿಸಿಸಿಐ ತನ್ನ ಸಾಮಾಜಿಕ ಜಾಲತಾಣದ ಮೂಲಕ ಅನಾವರಣಗೊಳಿಸಿದೆ. ಕೋಟ್ಯಂತರ ಜನರ ಚೀಯರ್ಸ್‍ನಿಂದ ಪ್ರೇರಿತಗೊಂಡು ಸಿದ್ಧವಾದ ಜೆರ್ಸಿ ಎಂದು ಬರೆದುಕೊಂಡಿದೆ.
ಜೆರ್ಸಿ ಕಡು ನೀಲಿ ಬಣ್ಣ ಮಿಶ್ರಿತವಾಗಿದ್ದು, ಈ ಹಿಂದಿನ ಜೆರ್ಸಿ ಶೈಲಿಯನ್ನು ಹಾಗೆ ಮುಂದುವರಿಸಿದಂತಿದೆ. ತಂಡದ ನೂತನ ಜೆರ್ಸಿ ಕಿಟ್‍ಗಳನ್ನು ಪ್ರಾಯೋಜಕತ್ವ ಹೊಂದಿರುವ ಎಂಪಿಎಲ್ ಸ್ಪೋರ್ಟ್ಸ್ ಸಂಸ್ಥೆ ಸಿದ್ಧಪಡಿಸಿದೆ.
ಟಿ20 ವಿಶ್ವಕಪ್ ಅಕ್ಟೋಬರ್ 17ರಿಂದ ನವೆಂಬರ್ 14ರಂದು ಮುಕ್ತಾಯಗೊಳ್ಳಲಿದೆ. ಭಾರತ ತಂಡ ಅಕ್ಟೋಬರ್ 24ರಂದು ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನವನ್ನು ಎದುರಿಸುವ ಮೂಲಕ ತನ್ನ ಅಭಿಯಾನ ಆರಂಭಿಸಲಿದೆ.