
ಹುಬ್ಬಳ್ಳಿ,ನ.15: ವಿಶ್ವಕಪ್ ಸೆಮಿಫೈನಲ್ ನ ಭಾರತ ಹಾಗೂ ನ್ಯೂಜಿಲೆಂಡ್ ರೋಚಕ ಕ್ರಿಕೆಟ್ ಪಂದ್ಯಾವಳಿ ಇಂದು ಜರುಗಲಿದ್ದು, ಭಾರತ ತಂಡ ಹುಬ್ಬಳ್ಳಿಯಲ್ಲಿ ಕ್ರಿಕೆಟ್ ಪ್ರೇಮಿಗಳು ಶುಭ ಹಾರೈಸಿದ್ದಾರೆ.
ಕಳೆದ ಬಾರಿ ವಿಶ್ವಕಪ್ ಕ್ರಿಕೆಟ್ ನಲ್ಲಿ ನ್ಯೂಜಿಲೆಂಡ್ ತಂಡದ ವಿರುದ್ಧ ಸೋಲನ್ನಪ್ಪಿದ ಭಾರತ ತಂಡ ಫೈನಲ್ ಗೆ ಲಗ್ಗೆ ಇಡುವಲ್ಲಿ ವಿಫಲವಾಗಿತ್ತು. ಅದರಂತೆ ಈ ಬಾರಿ ಮತ್ತೆ ವಿಶ್ವಕಪ್ ಸೆಮಿಫೈನಲ್ ನಲ್ಲಿ ಭಾರತ ಹಾಗೂ ನ್ಯೂಜಿಲೆಂಡ್ ತಂಡಗಳು ಮುಖಾಮುಖಿಯಾಗಿವೆ.
ನಾಯಕ ರೋಹಿತ್ ಶರ್ಮಾ ಪಡೆ ಇಂದು ನಡೆಯುವ ರೋಚಕ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ ರೋಚಕ ಜಯ ಗಳಿಸುವ ಮೂಲಕ ಫೈನಲ್ ಗೆ ಲಗ್ಗೆ ಇಟ್ಟು 1983 ಹಾಗೂ 2011 ರ ವಿಶ್ವಕಪ್ ಗೆದ್ದ ಅಸ್ಮರಣೀಯ ಕ್ಷಣಗಳು ಮತ್ತೇ ಮರುಕಳಿಸಲಿ ಈ ಮೂಲಕ ಭಾರತ ಅಜೇಯ ಓಟವನ್ನು ಮುಂದುವರಿಸಿ ವಿಶ್ವಕಪ್ ಕಿರೀಟ್ ವನ್ನು ಮುಡಿಗೇರಿಸಿಕೊಳ್ಳಲಿ ಎಂಬುದೇ ಅಭಿಮಾನಿಗಳ ಆಶಯವಾಗಿದೆ.