ಭಾರತ ಜೋಡೋ ಯಾತ್ರೆ: ಕಾಂಗ್ರೆಸ್ ಮಹಿಳಾ ಘಟಕದಿಂದ ಸಕಲ ಸಿದ್ಧತೆ – ಡಾ. ನಾಗವೇಣಿ

ರಾಯಚೂರು,ಸೆ.೫- ಭಾರತ ಜೋರೋ ಯಾತ್ರೆ ಅಂಗವಾಗಿ ರಾಯಚೂರು ಜಿಲ್ಲಾ ಕಾಂಗ್ರೇಸ ಮಹಿಳಾ ಘಟಕದಿಂದ ಸಕಲ ಸಿದ್ಧತೆಗಳನ್ನು ಕೈಗೊಳ್ಳುವ ನೀಟಿನಲ್ಲಿ ಇದೆ ತಿಂಗಳು ೩ನೇ ವಾರದಲ್ಲಿ ಜಿಲ್ಲಾ ಪ್ರವಾಸ ಕೈಗೊಳ್ಳಲಾಗುತ್ತದೆ ಎಂದು ಜಿಲ್ಲಾ ಕೆಂಗ್ರೆಸ್ ಮಹಿಳಾ ಘಟಕದ ಜಿಲ್ಲಾಧ್ಯಕ್ಷ ಡಾ. ನಾಗವೇಣಿ ಎಸ್ . ಪಾಟೀಲ್ ಹೇಳಿದರು.
ಅವರಿಂದು ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿ,
ಭಾರತ ಜೋಡೋ ಯಾತ್ರೆ ಮುಂದಿನ ತಿಗಳಿಂದ ಅರಣವಾಗಲಿದ್ದು ಈ ಯಾತ್ರೆ ಕನ್ಯಾಕುಮಾರಿಯಿಂದ ಕಾಶ್ಮೀರ ವರೆಗೆ ನಡೆಯಲಿದೆ.ಈ ಯಾತ್ರೆಯಲ್ಲಿ ನಮ್ಮ ಪಕ್ಷದ ಕೇಂದ್ರ ದುರೀಣರಾದ ಸೋನಿಯಗಾಂಧಿ ಹಾಗೂ ರಾಹುಲ್‌ಗಾಂಧಿ ಸೇರಿದಂತೆ ಅನೇಕ ಮಹಾನ ನಾಯಕರು ಯಾತ್ರೆಯಲ್ಲಿ ಭಾಗವಹಿಸಲಿದ್ದಾರೆ ಎಂದರು.
ಮುಂದಿನ ತಿಂಗಳು ಆರಂಭವಾಗಲಿರುವ ಯಾತ್ರೆ ೩ ಸಾವಿರ ೫೭೦ ಕಿ.ಮೀ ನಡೆಯಲ್ಲಿದ್ದು ಕರ್ನಾಟಕದ ಬಳ್ಳಾರಿ ಮತ್ತು ರಾಯಚೂರು ಜಿಲ್ಲೆಗಳಲ್ಲಿ ಯಾತ್ರೆ ಸಂಚಾರಿಸಲಿದ್ದು ರಾಯಚೂರು ತಾಲ್ಲೂಕಿನ ಗಿಲ್ಲೇಸೂಗೂರ ನಿಂದ ಶಕ್ತಿನಗರದ ವರೆಗೆ ಸಾಗಲಿದ್ದು,ಜಿಲ್ಲೆಯ ಪಕ್ಷದ ಪ್ರಮುಖರು ಪದಾಧಿಕಾರಿಗಳು ಶಾಸಕರು ಮಾಜಿ ಶಾಸಕರು ವಿಧಾನ ಪರಿಷತ ಸದ್ಯಸರು ಮಾಜಿ ಸಂಸದರು ಮುಂಚೂಣಿ ಘಟಕಗಳ ಅಧ್ಯಕ್ಷರುಗಳು ಪದಾಧಿಕಾರಿಗಳು ಭಾಗವಹಿಸಲಿದ್ದಾರೆ ಎಂದು ಹೇಳಿದರು.
ಭಾರತ ಜೋಡೊ ಯಾತ್ರೆ ಉದ್ದೇಶ ಕೇಂದ್ರ ಸರ್ಕಾರದ ಬೆಲೆ ಏರಿಕೆ ನೀತಿ ಪೆಟ್ರೋಲ್ ಡಿಸೇಲ್ ದಿನನಿತ್ಯ ಬಳಸುವ ಅಗತ್ಯ ವಸ್ತುಗಳ ಬೆಲೆ ಏರಿಕೆ ಮತ್ತು ಶೇ ೪೦ ಕಮೀಶ ದಂಡೆ ಬಗ್ಗೆ ಯಾತ್ರೆಯುದ್ದಕ್ಕೂ ಜನರ ಬಳಿ ತೆರಳಿ ಜಾಗೃತಿ ಮೂಡಿಸುವ ಯಾತ್ರೆ ಉದ್ದೇಶ ವಾಗಿದೆ. ನಾನು ಕಾಂಗ್ರೆಸ್ ಪಕ್ಷದಲ್ಲಿ ಸಕ್ರಿಯುವಾಗಿ ಗುರಿತಿಸಿಕೊಂಡು ಜನರ ಸೇವೆ ಮಾಡಿದ್ದನ್ನು ನಮ್ಮ ಜಿಲ್ಲೆಯ ಪಕ್ಷದ ಹಿರಿಯರೆಲ್ಲಾ ಸೇರಿ ನನ್ನನ್ನು ಮಹಿಳಾ ಘಟಕದ ಜಿಲ್ಲಾ ಅಧ್ಯಕ್ಷರನ್ನಾಗಿ ಮಾಡಿದ್ದರೆ. ನನ್ನ ಮೇಲೆ ನಂಬಿಕೆ ಇಟ್ಟು ಬಹುದೊಡ್ಡ ಜವಾಬ್ದಾರಿ ಸ್ಥಾನ ನೀಡಿದ್ದಾರೆ ಅದನ್ನು ಸರಿಯಾಗಿ ಬಳಿಸಿಕೊಳ್ಳುತ್ತಾ ಹಿರಿಯರ ಮಾರ್ಗದರ್ಶನದ ಮೇರೆಗೆ ಪಕ್ಷವನ್ನು ಬಲಗೊಳಿಸುತ್ತೇನೆ ಎಂದರು.
ಇದೆ ತಿಂಗಳು ೩ನೇ ವಾರದಲ್ಲಿ ಜಿಲ್ಲಾ ಅಧ್ಯಕ್ಷರಾದ ಬಿ.ವಿ.ನಾಯಕ ಹಾಗೂ ಮಹಿಳಾ ಘಟಕದ ರಾಜ್ಯ ಅಧ್ಯಕ್ಷ ಪುಷ್ಪ ಅಮರನಾಥ ಅವರ ಸೂಚನೆಯಂತೆ ಜಿಲ್ಲಾ ಪ್ರವಾಸ ಕೈಗೊಂಡು ತಾಲ್ಲೂಕ ಮಟ್ಟದಲ್ಲಿ ಮಹಿಳಾ ಘಟಕದ ಸಭೆ ಕರೆದು ಹೊಸ ಪದಾಧಿಕಾರಿಗಳ ಬಗ್ಗೆ ಚರ್ಚಿಸಿ ಅಲ್ಲಿನ ಪಕ್ಷದ ಹಿರಿಯರ ಮತ್ತು ಶಾಸಕರು ಮಾಜಿ ಶಾಸಕರ ಅಪ್ಪಣೆ ಮೇರೆಗೆ ಹೊಸ ಅಧ್ಯಕ್ಷರ ಅಯ್ಕೆ ಮಾಡಿ ಕೊಳ್ಳಲಾಗುವುದು.ಒಟ್ಟಾರೆ ಭಾರತ ಜೋಡೋ ಯಾತ್ರೆ ಆರಂಭಕ್ಕೂ ಮುನ್ನಾ ಎಲ್ಲವು ಸಿದ್ಧತೆಗಳನ್ನು ಮಾಡಿಕೊಂಡು ಯಾತ್ರೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಭಾಗವಹಿಸುವಂತೆ ಶ್ರಮ ಪಡುತ್ತೇನೆ ಎಂದರು.
ಈ ಸಂದರ್ಭದಲ್ಲಿ ಶ್ರೀದೇವಿ ನಾಯಕ,ಈರಮ್ಮ,ಮಂಜುಳಾ,ಶಶಿಕಲಾ ಭೀಮರಾಯ ಸೇರಿದಂತೆ ಇತರರು ಇದ್ದರು.