ಭಾರತ ಜೀವ ವೈವಿಧ್ಯದಲ್ಲಿ ಶ್ರೀಮಂತ ದೇಶ

ಹುಮನಾಬಾದ :ಸೆ.16: ವಿಶ್ವದಲ್ಲಿಯೆ ಭಾರತ ಜೀವವೈವಿಧ್ಯದಲ್ಲಿ ಶ್ರೀಮಂತ ದೇಶವಾಗಿದೆ ಜೀವ ವೈವಿಧ್ಯಗಳ ಸಂರಕ್ಷಣೆ ಮಾಡಿದರೆ ನಮಗೆ ಉಳಿಗಾಲವಿದೆ ಎಂದು ಬೀದರ ಸಹಕಾರ ಪ್ರಥಮ ದರ್ಜೆ ಕಾಲೇಜಿನ ಪ್ರಾಧ್ಯಾಪಕರಾದ ಪೂಜಾ ಸೂರ್ಯವಂಶಿ ತಾಲ್ಲೂಕ ಹುಡುಗಿ ಗ್ರಾಮದ ಹನುಮಾನ ಮಂದಿರದಲ್ಲಿ ಪರಿಸರ ವಾಹಿನಿ ಬೀದರ ಹಮ್ಮಿಕೊಂಡಿದ ಲಿಂ. ವೇದಮೂರ್ತಿ ಗದಗಯ್ಯಾ ಕಾವಡಿ ಮಠ ಇವರ 9ನೇ ಪುಣ್ಯ ಸ್ಮರಣೋತ್ಸವ ಅಂಗವಾಗಿ ಪರಿಸರೋತ್ಸವ ಕಾಂiÀರ್iಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿ ಮಾತನಾಡತ್ತÀ ತಿಳಿಸಿದರು. ಪರಿಸರ ಅಸಮತೋಲನದಿಂದ ಭೂತಾಪಮಾನ ಹೆಚ್ಚಳವಾಗಿ ಅನೇಕ ಪ್ರಕೃತಿ ವಿಕೋಪಗಳು ಸಂಭವಿಸಲಾರಂಭಿಸ್ಸಿವೆ. ಭೂತಾಪಮಾನ ಕಡಿಮೆ ಮಾಡಲು ಪ್ರತಿಯೋಬ್ಬರು ವಿಶೇಷ ಕಾಳಜಿ ವಹಿಸಿ ಎಂದು ತಿಳಿಸಿದರು. ವಿಧ್ಯಾರ್ಥಿಗಳು ಪರಿಸರ ಸಂರಕ್ಷಣೆ ವಿಶೇಷ ಆಸಕ್ತಿ ವಹಿಸಿ ಮರ ಗಿಡ ಬೆಳೆಸಿದರೆ ನಮಗೆ ಮುಂದಿನ ದಿನಗಳಲ್ಲಿ ಶುದ್ಧಗಾಳಿ ಪಡೆಯ ಬಹುದು. ಪರಿಸರವಾದಿ ಶೈಲೇಂದ್ರ ಕಾವಡಿಯವರ ಹಮ್ಮಿಕೊಂಡಿದ್ದ ಪರಿಸರೋತ್ಸವ ಪರಿಸರ ಸಂರಕ್ಷಣೆ ಸಹಾಯ ವಾಗುತ್ತದೆ.

ತಹಸಿಲ್ದಾರ ಪ್ರದೀಪಕುಮಾರ ಹಿರೇಮಠ ಮಾತನಾಡಿ ಪರಿಸರೋತ್ಸವ ಕಾರ್ಯಕ್ರಮ ಸಸಿಗೆ ನೀರು ಹಾಕುವ ಮೂಲಕ ಉಧ್ಘಾಟನೆ ಮಾಡಿ ಮಾತನಾಡಿ ಪರಿಸರ ಸಂರಕ್ಷಣೆಗೆ ಪ್ರತಿಯೋಬ ನಾಗರಿಕರ ಮರಗಿಡಗಳು ಉಳಿಸಿ ಬೆಳೆಸುವ ಸಂಕಲ್ಪ ಪ್ರತಿಯೊಬ್ಬ ನಾಗರಿಕರು ಮಾಡಬೇಕೆಂದರು. ಸಿ.ಪಿ.ಐ ಶರಣಬಸಪ್ಪಾ ಕೊಡ್ಲಾ ಮಾತನಾಡಿ ಪರಿಸರೋತ್ಸವ ವಿದ್ಯಾರ್ಥಿಗಳಲ್ಲಿ ಪರಿಸರ ಸಂರಕ್ಷಣೆ ಅರಿವು ಒಡಮುಡಿಸಲು ಸಹಾಯ ವಾಗುತ್ತದೆ ಎಂದರು. ಭಾಲ್ಕಿ ಸಾಮಾಜಿಕ ವಲಯದ ಅರಣ್ಯಾಧಿಕಾರಿ ಪ್ರಕಾಶ ನಿಪ್ಪಾಣಿ ಮಾತನಾಡಿ ವಿಧ್ಯಾರ್ಥಿಗಳು ತಮ ಮನೆಅಂಗಳದಲ್ಲಿ ಕಡ್ಡಾಯವಾಗಿ ಔಷಧಿ ಸಸ್ಯಗಳು ಬೆಳೆಸಲು ತಿಳಿಸಿದರು. ಹುಡುಗಿ ಮಠದ ವೀರಪಾಕ್ಷ ಶಿವಾಚಾರ್ಯರು ಹಾಗೂ ಹುಡುಗಿ ವಿರಕ್ತ ಮಠದ ಚನ್ನಮಲ್ಲದೇವರು, ಸಿಂಧನಕೇರ ವಿರಕ್ತಮಠದ ಹೊನ್ನಲಿಂಗೇಶ್ವರ ಸ್ವಾಮಿಗಳ ದಿವ್ಯ ಸಾನಿಧ್ಯದಲ್ಲಿ ಕಾರ್ಯಕ್ರಮ ಜರುಗಿತು. ಇದೆ ಸಂಧರ್ಭದಲ್ಲಿ ಡಿ. ದೇವರಾಜ ಅರಸು ಪ್ರಶಸ್ತಿ ಪುರಸ್ಕøತ ಗಂಧರ್ವ ಸೇನಾ ಪತ್ರಕರ್ತರಿಗೆ ಹಾಗೂ ಕಲಾ ವಿಭಾಗದಲ್ಲಿ ರ್ಯಾಂಕ್ ಪಡೆದ ಭಾಗ್ಯಶ್ರೀ ಇವರಿಗೆ ತಹಸಿಲ್ದಾರ ಹಸ್ತದಿಂದ ಸನ್ಮಾನಿಸಲಾಯಿತು. ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರಾದ ಶುಭಾಶ್ಚಂದ್ರ ಕಶೆಟ್ಟಿ ಕಲಬುರ್ಗಿ (ಸಾಹಿತ್ಯಾ), ಮೊಳಕೇರಿ ಸ.ಪ್ರಾ ಶಾಲೆ ಶಿಕ್ಷಕ ದಿಲೀಪ (ಅತ್ಯುತ್ತಮ ಶಿಕ್ಷಕ ), ಕರಬಸಯ್ಯಾ ಸ್ವಾಮಿ (ಜಾನಪದ), ಬಕ್ಕಪ್ಪಾ ಶರ್ಮಾ (ಅತ್ಯುತ್ತಮ ದೈಹಿಕ ಶಿಕ್ಷಕ), ರಾಜು ಮೆತ್ರಸ್ಕರ್ (ಸಮಾಜ ಸೇವೆ), ಮಡಿವಾಳಯ್ಯಾ ಸ್ವಾಮಿ (ಸಂಗೀತ), ವೀರಭದ್ರಪ್ಪಾ ಗ್ಯಾನಪ್ಪನೋರ (ಸಾವಯವ ಕೃಷಿ), ರಾಮಶೆಟ್ಟಿ ಐನಾಪುರ ಬೀದರ್ (ಜನಸ್ನೇಹಿ ವ್ಯಾಪಾರಸ್ಥರು), ನಾಗೇಂದ್ರಪ್ಪಾ ಪಾಟೀಲ್ (ಜೀವ ವೈವಿಧ್ಯ ಸಂರಕ್ಷಣೆ), ಮಾನು ಸಗರ (ಉತ್ತಮ ಪರಿಸರ ಲೇಖಕ) ಬಸಪ್ಪಾ ಮರಕಲೆ (ಆದರ್ಶ ರೈತ), ಕೃಷ್ಣ ಸಿಂಧನಕೇರ (ಉತ್ತಮ ತೋಟಗಾರಿಕೆ ಬೆಳೆಗಾರ) ನಾಮದೇವ ಘೊಗ್ಗಾ (ಉತ್ತಮ ಸಸ್ಯಕ್ಷೇತ್ರ) ಇವರುಗಳಿಗೆ 2022-23 ನೇ ಸಾಲಿನ ಪರಿಸರೋತ್ಸವ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು. ಪರಿಸರ ವಾದಿ ಶೈಲೇಂದ್ರ ಕಾವಡಿ ಪ್ರಾಸ್ತಾವಿಕ ಮಾತನಾಡಿದರು. ಮಾತೋಶ್ರೀ ಸರಸ್ವತಿ ಕಾವಡಿ ಮಠ, ಮುರಗಯ್ಯಾ ಕಾವಡಿ ಮಠ, ಗ್ರಾಮ ಪಂಚಾಯತ ಅಧ್ಯಕ್ಷ ರಾಜಕುಮಾರ ಮಾಶೆಟ್ಟಿ, ಪಿ.ಡಿ,ಒ. ಮಲ್ಲಪ್ಪಾ ಸನ್ನದ, ಸದಾಶಿವ ವಿಭೂತಿ, ಗುರುನಾಥ ಹುಗಾರ, ಸಿದ್ದಯ್ಯಾ ಕಾವಡಿ ಮಠ, ವೀರಯ್ಯಾ ಕಾವಡಿ ಮಠ ಉಪಸ್ಥಿತರಿದ್ದರು. ದಯಾನಂದ ಸಿಂಧನಕೇರ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.