ಭಾರತ ಚುನಾವಣಾ ಆಯೋಗದ ಮಾರ್ಗದರ್ಶನದಲ್ಲಿ ತಂಡಗಳು ಕೆಲಸ ನಿರ್ವಹಿಸಲು ಜಿಲ್ಲಾಧಿಕಾರಿ ಬಿ. ಫೌಜಿಯಾ ತರನ್ನುಮ್ ಸೂಚನೆ

ಕಲಬುರಗಿ:ಮಾ.27: ಲೋಕಸಭೆ ಚುನಾವಣೆ ಫೋಷಣೆಯಾಗಿದ್ದ ಹಿನ್ನಲೆಯಲ್ಲಿ ಎಲ್ಲೆಡೆ ಮಾದರಿ ನೀತಿ ಸಂಹಿತೆ ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು ಎಸ್.ಎಸ್.ಟಿ., ಎಫ್.ಎಸ್.ಟಿ., ವಿ.ಎಸ್.ಟಿ.,ತಂಡಗಳನ್ನು ಭಾರತ ಚುನಾವಣಾ ಆಯೋಗದ ಮಾಗದರ್ಶನದಲ್ಲಿ ಕೆಲಸ ಕಾರ್ಯಗಳನ್ನು ನಿರ್ವಹಿಸಲು ಜಿಲ್ಲಾಧಿಕಾರಿ ಹಾಗೂ ಚುನಾವಣಾಧಿಕಾರಿಯೂ ಆಗಿರುವ ಬಿ. ಫೌಜಿಯಾ ತರನ್ನುಮ್ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
ಬುಧವಾರ ಜಿಲ್ಲಾಧಿಕಾರಿಗಳ ಕಚೇರಿಯ ಕೆಸ್ವಾನ್ ಸಭಾಂಗಣದಲ್ಲಿ ವಿಡಿಯೋ ಕಾನ್ಪರೆನ್ಸ್ ಮೂಲಕ ಚುನಾವಣೆ ಸಮಿತಿಯ ವಿವಿಧ ಜಿಲ್ಲಾ ಮಟ್ಟದ ಅಧಿಕಾರಿಗಳು ತಾಲೂಕಿನ ತಹಶೀಲ್ದಾರರು, ಎ.ಆರ್.ಓ.ಗಳು ನೋಡಲ್ ಅಧಿಕಾರಿಗಳ ಸಭೆ ನಡೆಸಿದ ಅವರು, ಕಲಬುರಗಿ ಉತ್ತರ, ದಕ್ಷಿಣ ಮತಕ್ಷೇತ್ರ ಒಳಗೊಂಡಂತೆ ಕಲಬುರಗಿ ಗ್ರಾಮೀಣ, ಚಿಂಚೋಳಿ, ಸೇಡಂ, ಅಫಜಲಪೂರ, ಚಿತ್ತಾಪೂರ, ಯಡ್ರಾಮಿ ಮತ್ತು ಜೇವರ್ಗಿ ವಿಶೇಷವಾಗಿ ಅಂತರ ರಾಜ್ಯ ಗಡಿಯಲ್ಲಿ ಕಟ್ಟೆಚ್ಚರ ವಹಿಸಬೇಕು ಮತ್ತು ಯಾವುದೇ ವಸ್ತು ಹಣ ಸಾಮಗ್ರಿಗಳನ್ನು ಅಕ್ರಮವಾಗಿ ವಾಹನಗಳಲ್ಲಿ ವಿಲೇವಾರಿ ಮಾಡುತ್ತಿದ್ದರೆ ಅವುಗಳನ್ನು ಸೀಜ್ ಮಾಡಬೇಕೆಂದರು.
ಚೆಕ್ ಪೋಸ್ಟ್‍ನಲ್ಲಿ ಯಾವುದೇ ವಾಹನಗಳನ್ನು ಬಿಡಕೂಡದು, ಕಡ್ಡಾಯವಾಗಿ ತಪಾಸಣೆ ಕೈಗೊಳ್ಳಬೇಕು ಎಂದರು.
ಎಸ್.ಎಸ್.ಟಿ ದವರು ಚೆಕ್ ಪೋಸ್ಟ್ ನಲ್ಲಿ 50 ಸಾವಿರ ಕ್ಕಿಂತ ಹೆಚ್ಚು ಹಣ ಇದ್ದರೆ ಅದಕ್ಕೆ ಸಂಬಂಧಪಟ್ಟ ದಾಖಲೆಗಳನ್ನು ಪಡೆದುಕೊಳ್ಳಬೇಕು ಎಲ್ಲ ವಿಷಯಗಳನ್ನು ತಿಳಿದುಕೊಳ್ಳಬೇಕೆಂದರು. ಸಂಬಂಧ ಪಟ್ಟ ಅಧಿಕಾರಿಗಳಿಗೆ ಮಾಹಿತಿ ನೀಡಬೇಕು. ಅಧಿಕಾರಿಗಳು ಪರಸ್ಪರ ಸಮನ್ವಯತೆಯಿಂದ ಕಾರ್ಯನಿರ್ವಹಿಸಬೇಕು ಎಂದರು.
ಜಿಲ್ಲಾ ಚುನಾವಣಾಧಿಕಾರಿ ಮಾತನಾಡಿ, ಪ್ರತಿಯೊಬ್ಬರ ಮಾಹಿತಿಯನ್ನು ಪಡೆದುಕೊಂಡು ಅವರಿಗೆ ಸಲಹೆ ಸೂಚನೆಗಳನ್ನು ನೀಡಿದರು. ಆಯಾ ತಾಲೂಕಿನ ಸಹಾಯಕ ಚುನಾವಣಾಧಿಕಾರಿಗಳು ಮುಂದಿನ ದಿನಗಳಲ್ಲಿ ಚುನಾವಣೆ ಕುರಿತು ಎಚ್ಚರಿಕೆಯಿಂದ ಕೆಲಸ ನಿರ್ವಹಿಸಬೇಕು ಪ್ರತಿಯೊಬ್ಬರ ಚಲನವಲನ ಬಗ್ಗೆ ನಿಗಾ ಇಡಲು ಕಡ್ಡಾಯವಾಗಿ ಸಿ.ಸಿ.ಟಿ.ವಿಯನ್ನು ಅಳವಡಿಸಲಾಗಿದೆ ಎಂದರು.
ಚುನಾವಣೆ ಕುರಿತಂತೆ ಸಿ. ವಿಜಿಲ್‍ನಲ್ಲಿ ಏನೆ ದೂರು ಬಂದಲ್ಲಿ ಒಂದು ಗಂಟೆಯೊಳಗೆ ಕ್ರಮವಹಿಸಬೇಕು ವಿಳಂಬ ನೀತಿ ಸಹಿಸಲ ಎಂದು ಅಧಿಕಾರಿಗಳಿಗೆ ಖಡಕ್ ಎಚ್ಚರಿಕೆ ನೀಡಿದರು.
ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಅಕ್ಷಯ್ ಹಾಕೈ ಮಾತನಾಡಿ, ವಾಹನ ತಪಾಸಣೆಯಲ್ಲಿ ರಾಜಕೀಯ ಪಕ್ಷದ ಕ್ಯಾಪ, ಶಾಲು,ಪಾಟಿ, ಧ್ವಜ ಮತ್ತು ಲಿಕ್ಕರ್ ಸಿಕ್ಕಾಗ ಬೇರೆ ಬೇರೆ ಎಫ್.ಐ.ಆರ್ ಗಳನ್ನು ಮಾಡುವ ಹಾಗೆ ಇಲ್ಲ ಎರಡು ಒಂದರಲ್ಲಿಯೇ ಮಾಡಬೇಕೆಂದರು.
ಒಂದು ಟೀಮ್‍ನಲ್ಲಿ ಮೂವರು ಜನ ಇರುತ್ತಾರೆ ಒಂದೇ ಸಮಯದಲ್ಲಿ ಮೂರು ಕಾರ್ಯಕ್ರಮಗಳು ನಡೆದಾಗ ಎಸ್.ಎಸ್.ಟಿ ದವರಿಗೆ ಕರೆಯಬೇಕು ಮತ್ತು ರಜಿಸ್ಟರ್ ನಲ್ಲಿ ನಮೂದಿಸಬೇಕು. ವಿಡಿಯೋ ಕಡ್ಡಾಯವಾಗಿ ಮಾಡಬೇಕು ಒಂದು ವೇಳೆ ಕ್ಯಾಮರ್ ಬ್ಯಾಟರಿ ಇಲ್ಲದಿದ್ದರೆ ಪ್ರತಿಯೊಬ್ಬರಲ್ಲಿ ಮೊಬೈಲ್ ಇರುತ್ತದೆ ಅವರ ಮೊಬೈಲ್‍ನಿಂದ ವಿಡಿಯೋ ಮಾಡಬೇಕು ಪ್ರತಿಯೊಂದಕ್ಕೊ ವಿಡಿಯೋ ಒಂದು ಡಾಕ್ಯುಮೆಂಟ್ ಆಗಬೇಕು ಎಂದರು.
ಚೆಕ್ ಪೋಸ್ಟ್‍ಗಳಲ್ಲಿ ಅದು ವಿಶೇಷವಾಗಿ ಅಂತರ ರಾಜ್ಯ ಗಡಿಯಲ್ಲಿ ವಿಶೇಷವಾಗಿ ಹೇಗೆ ವಾಹನಗಳನ್ನು ತಪಾಸಣೆ ಮಾಡುವ ಬಗ್ಗೆ ಅನೇಕ ಕೇಸ್ ಗಳ ಉದಾಹರಣೆ ಕೊಟ್ಟು ಆಯಾ ತಾಲೂಕಿನ ಎಸ್.ಎಸ್.ಟಿ ಮತ್ತು ಎಫ್.ಎಸ್.ಟಿಗಳಿಗೆ ಎಚ್ಚರಿಕೆಯಿಂದ ಕೆಲಸ ನಿರ್ವಹಿಸಬೇಕೆಂದರು.
ಸೋಷಿಯಲ್ ಮೀಡಿಯಾ ಮೇಲೆ ನಿಗಾ ವಹಿಸಿ
ಜಿಲ್ಲಾ ಪಂಚಾಯತ ಭಂವರ ಸಿಂಗ್ ಮೀನಾ ಅವರು ಮಾತನಾಡಿ, ನೀತಿ ಸಂಹಿತೆ ಜಾರಿಯಾದ ನಂತರದಲ್ಲಿ ಸಾಮಾಜಿಕ ಜಾಲತಾಣದ ಮೂಲಕ ಡಿಜಿಟಲ್ ಪ್ರಚಾರ ಹೆಚ್ಚು ಮಾಡುತ್ತಾರೆ. ರಾಜಕೀಯ ಪಕ್ಷದ ಪಕ್ಷದ ಅಭಿಮಾನಿಗಳು ಫೇಸ್ಬುಕ್,ಟ್ವೀಟರ್,ಯೂಟ್ಯೂಬ್, ಇನ್ಸ್ಟಾಗ್ರಾಂ ಖಾತೆಗಳ ಮೇಲೆ ನಿಗಾ ವಹಿಸಿ ಎಂದರು.
ಸಭೆಯಲ್ಲಿ ಉಪಸಂರಕ್ಷಣಾಧಿಕಾರಿ ಸುಮಿತ ಪಾಟೀಲ,ಡಿ.ಸಿ.ಪಿ ಕನಿಕಾ ಸಿಕ್ರಿವಾಲ್, ಅಪರ ಜಿಲ್ಲಾಧಿಕಾರಿ ರಾಯಪ್ಪ ಹುಣಸಗಿ ಸೇರಿದಂತೆ ಎಸ್.ಎಸ್.ಟಿ., ಎಫ್.ಎಸ್.ಟಿ., ವಿ.ಎಸ್.ಟಿ., ತಂಡದ ಮುಖ್ಯಸ್ಥರು,ತಹಶೀಲ್ದಾರರು ಪೋಲಿಸ್ ನೋಡಲ್ ಅಧಿಕಾರಿಗಳು, ಜಿಲ್ಲಾಮಟ್ಟದ ನೋಡಲ್ ಅಧಿಕಾರಿಗಳು ಎ.ಆರ್.ಓ. ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.