ಭಾರತ -ಚೀನಾ ಸಂಬಂಧ ಜಗತ್ತಿಗೆ ಮುಖ್ಯ:ಮೋದಿ

ನವದೆಹಲಿ,ಏ.೧೧- ಭಾರತ ಮತ್ತು ಚೀನಾ ನಡುವೆ ಸ್ಥಿರ ಮತ್ತು ಶಾಂತಿಯುತ ಸಂಬಂಧಗಳು ಎರಡೂ ದೇಶಗಳಿಗೆ ಮಾತ್ರವಲ್ಲದೆ ಇಡೀ ಜಗತ್ತಿಗೆ ಮುಖ್ಯವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.ರಾಜತಾಂತ್ರಿಕ ಮತ್ತು ಮಿಲಿಟರಿ ಮಟ್ಟದಲ್ಲಿ ಧನಾತ್ಮಕ ಮತ್ತು ರಚನಾತ್ಮಕ ದ್ವಿಪಕ್ಷೀಯ ಮಾತುಕತೆಯ ಮೂಲಕ ಎರಡೂ ದೇಶಗಳು ಸಮಸ್ಯೆ ಬಗೆ ಹರಿಸಿಕೊಳ್ಳುವ ಭರವಸೆ ವ್ಯಕ್ತಪಡಿಸಿದ್ದಾರೆ.ಅಮೆರಿಕದ ನ್ಯೂಸ್‌ವೀಕ್ ನಿಯತಕಾಲಿಕಕ್ಕೆ ನೀಡಿದ ಸಂದರ್ಶನದಲ್ಲಿ ಅವರು ಉಭಯ ದೇಶಗಳ ಗಡಿಗಳಲ್ಲಿ ಶಾಂತಿ ಮತ್ತು ನೆಮ್ಮದಿ ಮರು ಸ್ಥಾಪಿಸಲು ಎಲ್ಲಾ ಪ್ರಯತ್ನ ಮಾಡಲಾಗುತ್ತಿದೆ. ಇದು ಭಾರತಕ್ಕೆ, ಚೀನಾದೊಂದಿಗಿನ ಸಂಬಂಧ ಮುಖ್ಯ ಮತ್ತು ಮಹತ್ವದ್ದಾಗಿದೆ ಎಂದು ತಿಳಿಸಿದ್ದಾರೆ.ಗಡಿಯಲ್ಲಿನ ದೀರ್ಘಕಾಲದ ಪರಿಸ್ಥಿತಿ, ಬಿಗುವಿನ ವಾತಾವರಣದ ಸಮಸ್ಯೆಯನ್ನು ತುರ್ತಾಗಿ ಪರಿಹರಿಸಬೇಕಾಗಿದೆ, ಇದಕ್ಕಾಗಿ ಪ್ರಯತ್ನ ಮಾಡುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಕ್ವಾಡ್ ಸಮಾನ ಮನಸ್ಕ ಗುಂಪು

ಕ್ವಾಡ್ ಯಾವುದೇ ದೇಶದ ವಿರುದ್ಧ ಗುರಿ ಹೊಂದಿಲ್ಲ. ಎಸ್‌ಸಿಒ, ಬ್ರಿಕ್ಸ್ ಮತ್ತು ಇತರ ಅನೇಕ ಇತರ ಅಂತರರಾಷ್ಟ್ರೀಯ ಗುಂಪುಗಳಂತೆ, ಕ್ವಾಡ್ ಸಹ ಹಂಚಿಕೊಂಡ ಸಕಾರಾತ್ಮಕ ಕಾರ್ಯಸೂಚಿಯಲ್ಲಿ ಕೆಲಸ ಮಾಡುವ ಸಮಾನ ಮನಸ್ಕ ರಾಷ್ಟ್ರಗಳ ಗುಂಪು ಎಂದು ತಿಳಿಸಿದ್ದಾರೆ.ಕ್ವಾಡ್ ಗುಂಪು ಭಾರತ, ಅಮೇರಿಕಾ ಆಸ್ಟ್ರೇಲಿಯಾ ಮತ್ತು ಜಪಾನ್ ಅನ್ನು ಒಳಗೊಂಡಿದೆ. ಹೀಗಾಗಿ ಇದರ ಬಗ್ಗೆ ಹೆಚ್ಚಿನ ಒತ್ತು ನೀಡುವ ಅಗತ್ಯವಿಲ್ಲ ಎಂದಿದ್ದಾರೆ

ಶಾಂತಿ ಭದ್ರತೆಗೆ ಆದ್ಯತೆ: ಪ್ರಧಾನಿ

ಭಯೋತ್ಪಾದನೆ ಮತ್ತು ಹಿಂಸಾಚಾರದಿಂದ ಮುಕ್ತವಾದ ವಾತಾವರಣದಲ್ಲಿ ಈ ಪ್ರದೇಶದಲ್ಲಿ ಶಾಂತಿ, ಭದ್ರತೆ ಮತ್ತು ಸಮೃದ್ಧಿ ಮುನ್ನಡೆಸಲು ಭಾರತ ಸದಾ ಸಿದ್ಧ ಎಂದು ಪ್ರಧಾನಿ ನರೇಂದ್ರ ಹೇಳಿದ್ದಾರೆ.ಪಾಕಿಸ್ತಾನದ ಪ್ರಧಾನ ಮಂತ್ರಿ ಅಧಿಕಾರ ವಹಿಸಿಕೊಂಡ ಮೇಲೆ ಅಭಿನಂದಿಸಿದ್ದೇನೆ. ಮಾಜಿ ಪ್ರಧಾನಿ ಇಮ್ರಾನ್ ಖಾನ್ ಜೈಲುವಾಸ ಆ ದೇಶದ ಆಂತರಿಕ ವಿಷಯಗಳ ಬಗ್ಗೆ ಪ್ರತಿಕ್ರಿಯಿಸುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಧನಾತ್ಮಕ ಬದಲಾವಣೆ

ಜಮ್ಮು ಮತ್ತು ಕಾಶ್ಮೀರದಲ್ಲಿ ವಿಶೇಷ ಸ್ಥಾನಮಾನದ ರದ್ದತಿಯ ಬಳಿಕ ಧನಾತ್ಮಕ ಬದಲಾವಣೆ ಆಗಿದೆ. ಅಲ್ಲಿಯ ಜನರಲ್ಲಿ ಹೊಸ ಜೀವನ ಆರಂಭವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ
“ಅಭಿವೃದ್ಧಿ, ಉತ್ತಮ ಆಡಳಿತ ಮತ್ತು ಜನರ ಸಬಲೀಕರಣದ ಪ್ರಕ್ರಿಯೆ ನಂಬುವಂತೆ ನೋಡಬೇಕು” “ಜನರು ಶಾಂತಿಯ ಲಾಭ ಪಡೆಯುತ್ತಿದ್ದಾರೆ: ಕಳೆದ ವರ್ಷ ರಲ್ಲಿ ೨೧ ದಶಲಕ್ಷ ಪ್ರವಾಸಿಗರು ಜಮ್ಮು ಮತ್ತು ಕಾಶ್ಮೀರಕ್ಕೆ ಭೇಟಿ ನೀಡಿದ್ದಾರೆ. ಭಯೋತ್ಪಾದಕ ಘಟನೆಗಳಲ್ಲಿ ಗಮನಾರ್ಹ ಇಳಿಕೆ ಕಂಡುಬಂದಿದೆ. ಪ್ರತಿಭಟನೆಗಳು, ಕಲ್ಲು ತೂರಾಟಗಳು, ಒಂದು ಕಾಲದಲ್ಲಿ ಸಾಮಾನ್ಯ ಜೀವನ ಅಡ್ಡಿಪಡಿಸಿದ್ದವು ಹೀಗಾಗಿ ಜನಜೀವನ ಸಹಜ ಸ್ಥಿತಿಗೆ ಬಂದಿದೆ ಎಂದಿದೆ ಎಂದಿದ್ದಾರೆ

ಐತಿಹಾಸಿಕ ಕ್ಷಣ

ರಾಮಮಂದಿರ ಆರಂಭದಲ್ಲಿ ದೇಶದಲ್ಲಿ ಐತಿಹಾಸಿಕ ಕ್ಷಣ.ಶತಮಾನಗಳಿಂದ ಬಾಕಿ ಉಳಿದ ಕಾರ್ಯವನ್ನು ಯಶಸ್ವಿಯಾಗಿ ಮಾಡಿದ್ದೇವೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.ಜನರ ಜೀವನ ಮತ್ತು ನಾಗರಿಕತೆಯಲ್ಲಿ ಶ್ರೀರಾಮನ ಆಲೋಚನೆಗಳು ಮತ್ತು ಮೌಲ್ಯಗಳನ್ನು ಒಳಗೊಂಡಿದೆ. ೧೧ ದಿನಗಳ ಕಾಲ ಉಪವಾಸ ಮಾಡಿ ಶ್ರೀರಾಮನ ವಿಗ್ರಹ ಪ್ರಾಣ ಪ್ರತಿಷ್ಠಾಪನೆ ಮಾಡಿದೆ ಎಂದು ಅವರು ತಿಳಿಸಿದ್ದಾರೆ