
ನವದೆಹಲಿ,ಏ.೧೦- ಅರುಣಾಚಲ ಪ್ರದೇಶದ ೧೧ ಸ್ಥಳಗಳನ್ನು ಚೀನಾ ,ತನ್ನ ಹೆಸರು ಇಟ್ಟ ಹಿನ್ನೆಲೆಯಲ್ಲಿ ಭಾರತ- ಚೀನಾದ ಗಡಿಭಾಗದಲ್ಲಿ ಭದ್ರತಾ ಪರಿಸ್ಥಿತಿ ಕುರಿತು ರಕ್ಷಣಾ ಸಿಬ್ಬಂದಿ ಮುಖ್ಯಸ್ಥ ಜನರಲ್ ಅನಿಲ್ ಚೌಹ್ಹಾಣ್ ಪರಿಸ್ಥಿತಿ ಪರಾಮರ್ಶೆ ನಡೆಸಿದರು
ಗಡಿ ಭಾಗದಲ್ಲಿ ಅದರಲ್ಲಿಯೂ ಪೂರ್ವ ಗಡಿ ಭಾಗದಲ್ಲಿ ಚೀನಾದ ತಂಟೆ ತಕರಾರುಗಳಿಗೆ ಸೂಕ್ತ ತಿರುಗೇಟು ನೀಡುವ ಸಲುವಾಗಿ ಸೇನಾ ಸಿಬ್ಬಂದಿಯನ್ನು ಸನ್ನದ್ದಗೊಳಿಸುವ ಕುರಿತು ಹಿರಿಯ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿದರು
ಗಡಿ ಭಾಗದ ಆಯಕಟ್ಟಿನ ಸ್ಥಳಗಳು ಮತ್ತು ಪ್ರಮುಖ ಸ್ಥಳಗಳಿಗೆ ಭೇಟಿ ನೀಡಿ ,ಭಾರತ ಸೇನಾ ಸಿಬ್ಬಂದಿ ಹೆಚ್ಚು ನಿಯೋಜನೆ ಕುರಿತು ಪರಿಸ್ಥಿತಿ ಇತರ ಕ್ರಮಗಳ ಸೇನಾ ಸಿಬ್ಬಂದಿಯ ಜೊತೆ ಚರ್ಚೆ ನಡೆಸಿದರು.
ಜನರಲ್ ಅನಿಲ್ ಚೌಹಾಣ್ ಅವರು ಉತ್ತರ ಬಂಗಾಳ ಗಡಿ ಭಾಗದಲ್ಲಿ ಭದ್ರತಾ ಸ್ಥಿತಿಗತಿ ಪರಿಶೀಲನೆ ನಡೆಸಿ ಹೊಸ ರಫೇಲ್ ಯುದ್ಧವಿಮಾನಗಳ ಸ್ಕ್ವಾಡ್ರನ್ ನೆಲೆ ಹಸಿಮಾರಾ ವಾಯುನೆಲೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಸುಕ್ನಾದಲ್ಲಿರುವ ೩೩ ’ತ್ರಿಶಕ್ತಿ’ ಕಾರ್ಪ್ಸ್‌ನ ಪ್ರಧಾನ ಕಚೇರಿಗೆ ಭೇಟಿ ನೀಡಿ ಅಲ್ಲಿ ಪರಿಸ್ಥಿತಿ ಪರಾಮರ್ಶೆ ನಡೆಸಿದರು.
“೩೩ ಕಾರ್ಪ್ಸ್ ಕಮಾಂಡರ್ ಲೆಫ್ಟಿನೆಂಟ್ ಜನರಲ್ ವಿ ಪಿಎಸ್ ಕೌಶಿಕ್ ಅವರೊಂದಿಗೆ, ರಕ್ಷಣಾ ಸಿಬ್ಬಂದಿ ಮುಖ್ಯಸ್ಥ ಜನರಲ್ ಅನಿಲ್ ಚೌಹ್ಹಾಣ್, ಈ ಪ್ರದೇಶದಲ್ಲಿ ಮೂಲಸೌಕರ್ಯ ಅಭಿವೃದ್ಧಿ, ಕಾರ್ಯಾಚರಣೆ ಮತ್ತು ಲಾಜಿಸ್ಟಿಕ್ಸ್ ಸನ್ನದ್ಧತೆ ಪ್ರಗತಿಯ ಮೌಲ್ಯಮಾಪನ ಮಾಡಿದರು ಸೇನೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
೩,೪೮೮-ಕಿಮೀ ವಾಸ್ತವ ಗಡಿ ನಿಯಂತ್ರಣ ರೇಖೆಯ ಉದ್ದಕ್ಕೂ ಯಾವುದೇ ಪರಿಸ್ಥಿತಿ ಎದುರಿಸವಂತೆ ಚೀನಾ ತನ್ನ ಮಿಲಿಟರಿ ಸ್ಥಾನಗಳು, ಗಡಿ ಮೂಲಸೌಕರ್ಯ ಹೆಚ್ಚಿಸಿದೆ.
ಗಡಿ ಭಾಗದಲ್ಲಿ ವಾಯುನೆಲೆಗಳನ್ನು ಮೇಲ್ದರ್ಜೆಗೇರಿಸಿ ಚೀನಾದ ಕುತಂತ್ರಕ್ಕೆ ಉತ್ತರ ನೀಡಲು ಮುಂದಾಗಿದೆ.
ಚೀನಾದ ಪೀಪಲ್ಸ್ ಲಿಬರೇಶನ್ ಆರ್ಮಿ, ಸಿಕ್ಕಿಂ-ಭೂತಾನ್-ಟಿಬೆಟ್ ಟ್ರೈ-ಜಂಕ್ಷನ್ ಬಳಿಯಿರುವ ಭೂತಾನ್ ಭೂಪ್ರದೇಶದ ಡೋಕ್ಲಾಮ್‌ನಲ್ಲಿ ತನ್ನ ಚಟುವಟಿಕೆಗಳು ಮತ್ತು ಮೂಲಸೌಕರ್ಯ ಅಭಿವೃದ್ಧಿ ಹೆಚ್ಚಿಸಿದ ರೀತಿ ಈ ಪ್ರದೇಶದಲ್ಲಿ ಪರಿಶೀಲನೆ ನಡೆಸಿ ಭದ್ರತೆ ಹೆಚ್ಚಿಸುವಂತೆ ಸೂಚನೆ ನೀಡಿದ್ದಾರೆ..
ಸಿಲಿಗುರಿ ಕಾರಿಡಾರ್ ಅಥವಾ ’ಚಿಕನ್ ನೆಕ್ ಗೆ ಬೆದರಿಕೆ ಎದುರಿಸಲು ಉತ್ತರ ಬಂಗಾಳದ ಕಿರಿದಾದ ಭೂಪ್ರದೇಶ ಈಶಾನ್ಯವನ್ನು ಭಾರತದ ಉಳಿದ ಭಾಗಗಳೊಂದಿಗೆ ಸಂಪರ್ಕಿಸುವ ಕುರಿತು ಸಮಾಲೋಚನೆ ನಡೆಸಿದರು.