ಭಾರತ ಕಮ್ಯೂನಿಸ್ಟ್ ಪಕ್ಷದಿಂದ ಮುಖ್ಯಮಂತ್ರಿಗಳಿಗೆ ಮನವಿ

ಮಾನ್ವಿಅ.೦೮- ಪಟ್ಟಣದ ತಹಸೀಲ್ದರ್ ಕಚೇರಿ ಆವರಣದಲ್ಲಿ ಭಾರತ ಕಮ್ಯೂನಿಸ್ಟ್ ಪಕ್ಷ ತಾಲೂಕು ಮಂಡಳ ದಿಂದ ಮುಖ್ಯಮಂತ್ರಿಗಳಿಗೆ ತಹಸೀಲ್ದಾರ್ ರಾಜು ಪಿರಂಗಿ ರವರ ಮೂಲಕ ಕಾರ್ಯದರ್ಶಿ ಮಂಡಳಿ ಸದಸ್ಯರಾದ ಎಂ.ಬಿ. ಸಿದ್ರಾಮಯ್ಯಸ್ವಾಮಿ ಸಹಯೋಗದೊಂದಿಗೆ ಮನವಿ ಸಲ್ಲಿಸಿದರು.
ಮಾತನಾಡಿ ಅಂಗನವಾಡಿ ಕಾರ್ಯಕರ್ತೆಯರಿಗೆ ಮಾಸಿಕ ೧೫ ಸಾವಿರ, ಸಹಾಯಕಿಯರಿಗೆ ೧೦ಸಾವಿರ, ಆಶಾಕಾರ್ಯಕರ್ತೆಯರಿಗೆ ೮ ಸಾವಿರ, ಬಿಸಿಯೂಟ ಕಾರ್ಯಕರ್ತೆಯರಿಗೆ ೬ ಸಾವಿರ ರೂ ಗೌರವಧನ ಹೆಚ್ಚಿಸಬೇಕು, ಪೌರಕಾರ್ಮಿಕರ ಸೇವೆಯನ್ನು ಹಾಗೂ ಅತಿಥಿ ಶಿಕ್ಷಕರ, ಉಪನ್ಯಾಸಕರ ಸೇವೆಯನ್ನು ಕಾಯಂಗೊಳಿಸಬೇಕು, ರಾಯಚೂರಿನಲ್ಲಿ ವಿಧಿವಿಜ್ಞಾನ ಸಂಸ್ಥೆ, ಏಮ್ಸ್ ಆಸ್ಪತ್ರೆ ಸ್ಥಾಪನೆ ಮಾಡಬೇಕು, ಶುದ್ದವಾದ ಕುಡಿಯುವ ನೀರಿನ ಪೂರೈಕೆಗೆ ಕ್ರಮ ಕೈಗೊಳ್ಳಬೇಕು, ಬರಪಾರಿಹಾರ ಕಾಮಗಾರಿಗಳನ್ನು ಪ್ರಾರಂಭಿಸಬೇಕು, ಎ.ಪಿ.ಎಂ.ಸಿ ಹಮಾಲರಿಗೆ ವಸತಿ ನಿರ್ಮಾಣ ಮಾಡಬೇಕು, ಕಟ್ಟಡ ಕಾರ್ಮಿಕರಿಗೆ ಶಿಷ್ಯವೇತಮ ಬಿಡುಗಡೆ ಮಾಡಬೇಕು, ನವಲಿ ಸಮಾನಂತರ ಜಲಾಶಯ ನಿರ್ಮಾಣಕ್ಕೆ ಹಾಗೂ ಮಸ್ಕಿ ೫ ನೇ ಬಯೋ ಕೆನಲಾ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಬೇಕು, ಸಂವಿಧಾನ ೩೭೧ ಜೆ ವಿಧಿಯಲ್ಲಿನ ಎಲ್ಲಾ ಷರತ್ತುಗಳನ್ನು ಜಾರಿಗೆ ತರಬೇಕು, ಮಸ್ಕಿಯಿಂದ ಸುರಪುರವರೆಗೆ ಚಿನ್ನದ ನಿಕ್ಷೇಪಗಳನ್ನು ಗುರುತಿಸಿದ್ದು ಅವುಗಳಲ್ಲಿ ಸ್ಥಳಿಯರಿಗೆ ಉದ್ಯೋಗ ಕಲ್ಪಿಸಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಕಾ.ಚನ್ನಮ್ಮ ಗುತ್ತೆದಾರ, ಕಾಂ.ಶ್ರೀಕಾಂತ ಗುತ್ತೆದಾರ, ಕಾಂ.ಎಂ.ಡಿ.ಜಾಫರ್, ಕಾಂ.ಅಮರೇಶ, ಕಾಂ.ಬಸವರಾಜ ಬಿ..ಕಾಂ.ಸರಸ್ವತಿ, ಕಾಂ.ನಾಗಮ್ಮ, ದೇವೆಂದ್ರಮ್ಮ ಸೇರಿದಂತೆ ಇನ್ನಿತರರು ಇದ್ದರು.