ಭಾರತ ಕಂಡ ಅಪರೂಪದ ಸಂತ ವಿವೇಕಾನಂದ

ಸೈದಾಪುರ:ಜ.14:ಅಪಾರಜ್ಞಾನ ಹಾಗೂ ವಾಕ್ ಚಾತುರ್ಯದಿಂದ ಭಾರತ ಮಾತ್ರವಲ್ಲದೆ ವಿಶ್ವದ ಗಮನ ಸೆಳೆದಿದ್ದ ಅಪರೂಪದ ಸಂತ ಸ್ವಾಮಿ ವಿವೇಕಾನಂದರು ಎಂದು ವೆಂಕಟೇಶ ವಿಶ್ವಕರ್ಮ ಅಭಿಪ್ರಾಯ ಪಟ್ಟರು.

ಸಮೀಪದ ಬದ್ದೇಪಲ್ಲಿ ಗ್ರಾಮದ ನೋಬಲ್ ಪಬ್ಲಿಕ್ ಶಾಲೆಯಲಿ ್ಲಗುರುವಾರ ಹಮ್ಮಿಕೊಂಡಿದ್ದ ಸ್ವಾಮಿ ವಿವೇಕಾನಂದರ ಜಯಂತ್ಯುತ್ಸವದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಇಂದಿನ ಮಕ್ಕಳೇ ಭವಿಷ್ಯದ ರಾಷ್ಟ್ರ ನಿರ್ಮಾತೃಗಳು ಹೀಗಾಗಿ ಸಂತ ಮಹಾತ್ಮರ ಜೀವನಾದರ್ಶಗಳ ಕುರಿತು ವಿದ್ಯಾರ್ಥಿಗಳಿಗೆ ಅರಿವು ಮೂಡಿಸಬೇಕು.ಅವರ ವಿಚಾರ ಧಾರೆಗಳಿಂದ ಪ್ರಭಾವಿತರಾದ ಪ್ರತಿಯೊಬ್ಬರು ದೇಶ ಮತ್ತು ಸಮಾಜದ ಪ್ರಗತಿಗೆ ಶ್ರಮಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಹಿಂದೂ ಧರ್ಮದ ಮಹಾನ್ ಸಂತನಾಗಿದ್ದ ಸ್ವಾಮಿಜೀ ಅವರು ಭಾರತೀಯ ಸಂಸ್ಕøತಿ, ಪರಂಪರೆ ಹಾಗೂ ವೈಶಿಷ್ಟ್ಯ ಜಗತ್ತಿನ ಇತರ ರಾಷ್ಟ್ರಗಳಿಗಿಂತಲೂ ಶ್ರೇಷ್ಠ ಎಂಬುದನ್ನು ಎತ್ತಿ ಹಿಡಿದ ಅವರು ನಮ್ಮ ದೇಶದ ಕೀರ್ತಿಯನ್ನು ವಿಶ್ವಕ್ಕೆ ಪರಿಚಯ ಮಾಡಿದ ಸಂತನ ಕಾರ್ಯಸಾಧನೆ ಶ್ಲಾಘನೀಯ ಎಂದರು.

ಸ್ವಾಮಿ ವಿವೇಕಾನಂದರ ಜಯಂತಿ ಅಂಗವಾಗಿ ಸ್ವಾಮಿಜೀ ಅವರ ವೇಷಭೂಷಣ ಮಾಡಿಕೊಂಡಿದ್ದ ನೋಬಲ್ ಶಾಲೆಯ ವಿದ್ಯಾರ್ಥಿಗಳು ನೋಡುಗರ ಗಮನ ಸೆಳೆದರು. ಈ ವೇಳೆ ಶಾಲೆಯ ಮುಖ್ಯಗುರು ನರಸಪ್ಪ ನಾರಾಯಣೋರ, ಕವಿತಾ, ರಾಚಮ್ಮ, ಅಬಿನ್ ಥಾಮಸ್, ರಾಘವಿ, ಮುಸ್ತಾಫ್ ಸೇರಿದಂತೆ ಮುಂತಾದವರಿದ್ದರು.