ಭಾರತ-ಇಂಗ್ಲೆಂಡ್ ವಿಮಾನ ಹಾರಾಟ ರದ್ದು

ನವದೆಹಲಿ,ಏ.೨೧- ದೇಶದಲ್ಲಿ ಕೊರೊನಾ ಸೋಂಕಿನ ಪ್ರಕರಣಗಳು ಹೆಚ್ಚುತ್ತಿರುವುದರಿಂದ ಭಾರತ-ಇಂಗ್ಲೆಂಡ್ ನಡುವಣ ಏರ್‌ಇಂಡಿಯಾ ವಿಮಾನ ಹಾರಾಟವನ್ನು ರದ್ದುಪಡಿಸಲಾಗಿದೆ,
ಏ. ೨೪ ರಿಂದ ಏ. ೩೦ರವರೆಗೆ ವಿಮಾನಗಳ ಹಾರಾಟವನ್ನು ಸಂಪೂರ್ಣವಾಗಿ ರದ್ದುಪಡಿಸಲಾಗಿದೆ. ಸೋಂಕು ತಡೆಗಟ್ಟುವ ದೃಷ್ಟಿಯಿಂದ ಈ ಕ್ರಮಕೈಗೊಳ್ಳಲಾಗಿದೆ.
ಸೋಂಕು ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಭಾರತ ಪ್ರವಾಸವನ್ನು ರದ್ದುಪಡಿಸಿದ್ದನ್ನು ಇಲ್ಲಿ ಉಲ್ಲೇಖಿಸಬಹುದು. ದೇಶದಲ್ಲಿ ೨೪ ತಾಸುಗಳ ಅವಧಿಯಲ್ಲಿ ೨,೯೫,೦೪೧ ಮಂದಿಗೆ ಹೊಸದಾಗಿ ಸೋಂಕು ತಗುಲಿರುವುದು ದೃಢಪಟ್ಟಿದೆ. ೨೦೨೩ ಮಂದಿ ಸೋಂಕಿಗೆ ಬಲಿಯಾಗಿದ್ದಾರೆ.