ಭಾರತ ಆರ್ಥಿಕವಾಗಿ ಬಲಿಷ್ಟವಾಗಲು ಇಂಜಿನಿಯರ್ಸ್ ಶ್ರಮ ಬಹಳಷ್ಟಿದೆ: ರಹಿಮ್ ಖಾನ್

ಬೀದರ್: ಸೆ.21:ಭಾರತ ವಿಶ್ವದಲ್ಲಿ ಆರ್ಥಿಕವಾಗಿ ಬಲಿಷ್ಟ ರಾಷ್ಟ್ರವಾಗಿ ಹೊರಹೊಮ್ಮಲು ಇಲ್ಲಿಯ ಇಂಜಿನಿಯರ್ಸ್‍ಗಳ ಪರಿಶ್ರಮ ಬಹಳಷ್ಟಿದೆ ಎಂದು ರಾಜ್ಯದ ಪೌರಾಡಳಿತ ಸಚಿವರು ಹಾಗೂ ಸ್ಥಳಿಯ ಶಾಸಕ ರಹಿಮ್ ಖಾನ್ ಅಭಿಪ್ರಾಯ ಪಟ್ಟರು.
ಇತ್ತಿಚೀಗೆ ನಗರದ ಗುರುದ್ವಾರ ಹತ್ತಿರದ ಲಾವಣ್ಯ ಕನ್ವೆನಶನ್ ಹಾಲ್‍ನಲ್ಲಿ ಸರ್ ಮೋಕ್ಷಗುಂಡಮ್ ವಿಶ್ವೇಶ್ವರಯ್ಯ ಅವರ 162ನೇ ಜಯಂತ್ಯೋತ್ಸವ ಅಂಗವಾಗಿ ಇಂಜಿನಿಯರ್ಸ್ ದಿನಾಚರಣೆ ಉದ್ಘಾಟಿಸಿ ಮಾತನಾಡಿರುವ ಅವರು, ಇಂದು ಭಾರತ ಆರ್ಥಿಕವಾಗಿ 5ನೇ ಸ್ಥಾನಕ್ಕೆ ತಲುಪಬೇಕಾದರೆ ನಮ್ಮಲ್ಲಿರುವ ತಂತ್ರಜ್ಞರ ಶ್ರಮ ಸಾಕಷ್ಟಿದೆ ಎಂದು ಮೆಚ್ಚಿಗೆ ವ್ಯಕ್ತಪಡಿಸಿದರು.
ಬೀದರ್ ಜಿಲ್ಲೆಯ ಸಮಗೃ ಅಭಿವೃದ್ಧಿಯಲ್ಲೂ ಇಲ್ಲಿಯ ಇಂಜಿನಿಯರ್ಸ್ ಗಳ ಕೊಡುಗೆ ಅಪಾರವಾಗಿದ್ದು, ಇಲ್ಲಿ ಸುಸಜ್ಜಿತ ರಸ್ತೆ, ಒಳ ಚರಂಡಿ, ಸುಂದರ ಉದ್ಯಾನವನಗಳು, ಗಗನ ಚುಂಬಿಸುತ್ತಿರುವ ಬೃಹತ್ತಾದ ಕಟ್ಟಡಗಳು, ಸುಸಜ್ಜಿತ ಸರ್ಕಾರಿ ಬಂಗಲೆಗಳ ನಿರ್ಮಾಣ ಇತ್ಯಾದಿ ಸೇರಿದಂತೆ ಹತ್ತು ಹಲವಾರು ವಿನೂತನ ಕಟ್ಟಡಗಳ ನಿರ್ಮಾಣ ಪ್ರಶಂಸನಾರ್ಹ ಕಾರ್ಯವಾಗಿದೆ ಎಂದು ಬಣ್ಣಿಸಿದರು.
ಇಂದು ಸಂಕಷ್ಟದ ಸ್ಥಿತಿಯಲ್ಲಿರುವ ಕಟ್ಟಡ ಕಾರ್ಮಿಕರು ಹಾಗೂ ಗುತ್ತಿಗೆದಾರರಿಗೆ ನೆರವಾಗಲು ಇಂಜಿನಿಯರ್ಸ್‍ಗಳು ಮನಸ್ಸು ಮಾಡಬೇಕು. ಅವರ ಕೌಟೊಂಬಿಕ ಸ್ಥಿತಿ ಚಿಂತಾಜನಕವಾಗಿದ್ದು, ನಿಮ್ಮಂತಯೆ ಬೆಳೆಯಲು ಅವರಿಗೂ ಅವಕಾಶ ನೀಡಬೇಕು, ಅವರ ಕಷ್ಟ-ಸುಖಗಳಿಗೆ ಸ್ಪಂದಿಸುವ ಉದಾರ ಮನೋಭಾವ ತೋರಬೇಕಿದೆ ಎಂದರು.
ಮಹಾರಾಷ್ಟ್ರದ ಜಾಲನಾ ಜಿಲ್ಲೆಯ ಕಾಲಿಕಾ ಸ್ಟೀಲ್ ಪ್ರೈವೆಟ್ ಲಿಮಿಟೆಡ್‍ನ ಕಾರ್ಯನಿರ್ವಾಹಕ ನಿರ್ದೇಶಕ ಯೆಶ್ ಅನಿಲ ಗೋಯಲ್ ಮುಖ್ಯ ಅತಿಥಿಗಳಾಗಿ ಮಾತನಾಡಿ, ಭಾರತದ ಮೊಟ್ಟ ಮೊದಲ ತಂತ್ರಜ್ಞರಾದ ಸರ್.ಎಂ ವಿಶ್ವೇಶ್ವರಯ್ಯ ಅವರ ಜಯಂತಿ ನಿಮಿತ್ಯ ಇಲ್ಲಿಯ ಇಂಜಿಮನಿಯರ್ಸ್ ಅಸೊಶಿಯಶನ್‍ನ 25ನೇ ವಾರ್ಷಿಕೋತ್ಸವ ಆಚರಿಸುತ್ತಿರುವುದು ಬಲು ಹೆಮ್ಮೆಯ ಮಾತಿದು. ಇವರ ಮಾದರಿ ಕಾರ್ಯ ಬೇರೆ ಇಂಜಿನಿಯರ್ಸ್‍ಗಳಿಗೂ ಮಾದರಿಯಾಗಲಿ ಎಂದರಲ್ಲದೆ, ತಮ್ಮ ಸ್ಟೀಲ್ ಕಾರ್ಖಾನೆಯ ಉತ್ಪಾದನೆ ಹಾಗೂ ಮಾರಾಟದ ಬಗ್ಗೆ ವಿವರಿಸಿದರು.
ಅಲ್ಟ್ರಾಟೆಕ್ ಸಿಮೆಂಟ್‍ನ ಅಧಿಕಾರಿ ಶ್ರೀನಿವಾಸ ಕುಲಕರ್ಣಿ ಮಾತನಾಡಿ, ಇಂಜಿನಿಯರ್ಸ್ ಅಸೊಶಿಯಶನ್ ಹಾಗೂ ಅಲ್ಟ್ರಾಟೆಕ್ ಸಿಮೆಂಟ್‍ಗೆ ಕಳೆದ 25 ವರ್ಷಗಳಿಂದ ಅಭಿನಾಭಾವ ಸಂಭಂದವಿದೆ. ಅಲ್ಟ್ರಾಟೆಕ್ ಸಿಮೆಂಟ್ ಇಂದು ವಿಶ್ವ ಮಟ್ಟದ ಅತ್ಯಂತ ಉತ್ಕ್ರಷ್ಟ ಗುಣ ಮಟ್ಟದ ಸಿಮೆಂಟ್ ಎಂದು ಹೆಸರುವಾಸಿಯಾಗಿದೆ. ಇದು 137.5 ಮೆಟ್ರಿಕ್ ಟನ್ ಉತ್ಪಾದನೆ ಹೊಂದಿದ್ದು, ಭಾರತದಲ್ಲಿ ಸುಮಾರು 30 ಕಡೆ ಕಾರ್ಖಾನೆಗಳನ್ನು, ಕರ್ನಾಟಕದಲ್ಲಿ ಕಲಬುರಗಿಯ ಮಳಖೇಟ್ ಹಾಗೂ ಕೊಪ್ಪಳದ ಹತ್ತಿರ ಎರಡು ಉತ್ಪಾದನಾ ಘಟಕಗಳನ್ನು ಹೊಂದಿವೆ. ಇದು ವಿಶ್ವಮಾನ್ಯವಾಗಲು ಇಂಜಿನಿಯರ್ಸ್‍ಗಳ ಕೊಡುಗೆ ಅಪಾರವಾಗಿದೆ ಎಂದವರು ತಿಳಿಸಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಬೀದರ್ ಜಿಲ್ಲಾ ಇಂಜಿನಿಯರ್ಸ್ ಅಸೊಶಿಯಶನ್ ಅಧ್ಯಕ್ಷ ಅಶೋಕ ಉಪ್ಪೆ ಅವರು, 1999ರಲ್ಲಿ ಕೇವಲ 20 ಜನ ಇಂಜಿನಿಯರ್ಸ್ ಗಳು ಕುಡಿಕೊಂಡು ಹುಟ್ಟು ಹಾಕಿದ ಅಸೊಶಿಯಶನ್ ಈಗ ಹೆಮ್ಮರವಾಗಿ ಬೆಳೆದು 25 ವರ್ಷದ ರಜತ ಮಹೋತ್ಸವಕ್ಕೆ ಬಂದು ತಲುಪಿದ್ದೇವೆ. ಬರೀ ಮೂರು ವರೆ ಲಕ್ಷ ಬಂಡವಾಳ ಇರಿಸಿ ಅಸೊಶಿಯಶನ್‍ನ ಸ್ವಂತದ ಕಟ್ಟಡ ನಿರ್ಮಿಸಲು ಮುಂದಾದ ನಾವುಗಳು ಇಂದು ಸುಮಾರು 65 ಲಕ್ಷ ವೆಚ್ಚದಲ್ಲಿ ಸುಸಜ್ಜಿತ ಹಾಗೂ ಗುಣಮಟ್ಟದ ಮಾದರಿ ಕಾರ್ಯಾಲಯ ನಿರ್ಮಿಸಿದ್ದೇವೆ. ಇದರ ಮೂಲಕ ಗುತ್ತಿಗೆದಾರರು ಹಾಗೂ ಕಾರ್ಮಿಕರಿಗೆ ನುರಿತ ತಂತ್ರಜ್ಞರಿಂದ ಪ್ರತಿ ತಿಂಗಳಿಗೆ ತರಬೇತಿ ನೀಡುವ ಮೂಲಕ ಉತ್ಕøಷ್ಟ ಗುಣಮಟ್ಟದ ಕಟ್ಟಡ ನಿರ್ಮಾಣಕ್ಕೆ ಅನುಕುಲವಾಗುವ ರೀತಿ ತರಬೇತಿ ನೀಡುವುದಾಗಿ ತಿಳಿಸಿದರು.
ಇದೇ ಸಂದರ್ಭದಲ್ಲಿ ರಜತ ಮಹೋತ್ಸವದ ಅಂಗವಾಗಿ ಹಿರಿಯ ಇಂಜಿನಿಯರ್ಸ್ ಆದ ಅಧ್ಯಕ್ಷ ಅಶೋಕ ಉಪ್ಪೆ, ಶಿವರಾಜ ನೌಬಾದೆ, ಸಚೀನ್ ಕೊಳ್ಳುರ್, ಲೋಕೊಪಯೋಗಿ ಇಲಾಖೆಯ ಕಾರ್ಯನಿರ್ವಾಹಕ ಅಭಿಯಂತರರಾಗಿ ನಿಯುಕ್ತಿಗೊಂಡ ಶಿವಶಂಕರ ಕಾಮಶೆಟ್ಟಿ, ಲಾಲಜಿ ಪಟೇಲ ಹಾಗೂ ಬರೀ ಮೂರು ತಿಂಗಳಲ್ಲಿ ಇಂಜಿನಿಯರ್ಸ್ ಅಸೊಶಿಯಶನ್ ಕಾರ್ಯಾಲಯ ಕಟ್ಟಡ ನಿರ್ಮಾಣಕ್ಕೆ ಕಾರಣರಾದ ವೀರಶೆಟ್ಟಿ ಮಣಗೆ ಅವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಅಸೊಶಿಯಶನ್‍ನ ಉಪಾಧ್ಯಕ್ಷ ಅನಿಲ ಔರಾದೆ, ಕಾರ್ಯದರ್ಶಿ ದಿಲೀಪ ನಿಟ್ಟೂರೆ, ಖಜಾಂಚಿ ಓಂಕಾರ ಪಾಟೀಲ, ಪ್ರಮುಖರಾದ ರಾಜಶೇಖರ ಕರ್ಪೂರ್, ಮಹೇಶ ಬುರಂದೆ, ಹಾವಶೆಟ್ಟಿ ಪಾಟೀಲ, ಶಾಂತಕುಮಾರ ಚಂದಾ, ಶಿವಕುಮಾರ ಪಾಟೀಲ ಸೇರಿದಂತೆ ಅಸೋಶಿಯಶನ್‍ನ ಎಲ್ಲ ಸದಸ್ಯರು, ಆರ್ಟಿಟೆಕ್‍ಗಳು, ಸಿಬ್ಬಂದಿ, ಅವರ ಕುಟುಂಬಸ್ಥರು ಕಾರ್ಯಕ್ರಮದಲ್ಲಿದ್ದರು.
ಇದೇ ವೇಳೆ ಇಂಜಿನಿಯರ್ಸ್ ಅಸೋಶಿಯಶನ್ ಪ್ರಾರಂಭವಾಗಿ 25 ವರ್ಷ ತುಂಬಿದ ಸವಿ ನೆನಪಿಗಾಗಿ ರಜತ ಮಹೋತ್ಸವದ ಸ್ಮರಣ ಸಂಚಿಕೆ ಬಿಡುಗಡೆ ಮಾಡಲಾಯಿತು.
ಆರಂಭದಲ್ಲಿ ಆರ್ಟಿಟೆಕ್ ಸಂತೋಷ ಸಂಕದ್ ಸ್ವಾಗತ ಕೋರಿದರು. ಜಿ.ಎನ್.ಡಿ ಕಾಲೇಜಿನ ಪ್ರಾಧ್ಯಾಪಕ ಬಿರಕುರ್ ಕಾರ್ಯಕ್ರಮ ನಿರೂಪಿಸಿ, ಸಂದೀಪ ಕಾಡಾದೆ ವಂದಿಸಿದರು.