ಭಾರತ ಆಧ್ಯಾತ್ಮಿಕದ ಮೂಲ ಬೂನಾದಿ:ಮಂಜುಳಾತಾಯಿ

ತಾಳಿಕೋಟೆ:ಅ.24: ಮಾನವರಾದ ನಾವು ದಿನನಿತ್ಯ ನಮ್ಮಲ್ಲಿ ಶ್ರದ್ದಾ ಭಕ್ತಿ ಇಟ್ಟುಕೊಂಡು ಶ್ರದ್ದೆಯ ಮೂಲಕ ಮುನ್ನಡೆದರೆ ದೇವನ ವಲುಮೆ ಪಡೆಯಲು ಸಾಧ್ಯವಾಗಲಿದೆ ಎಂದು ಬಳಗಾನೂರಿನ ಶಿವಶರಣೆ ಮಂಜುಳಾತಾಯಿ ಅವರು ನುಡಿದರು.
ರವಿವಾರರಂದು ತಮ್ಮ ಸ್ವಗ್ರಹದಲ್ಲಿ ನವರಾತ್ರೋತ್ಸವ ಕುರಿತು ಏರ್ಪಡಿಸಲಾದ ಚಂಡಿ ಹೋಮ ಹವನ ಪೂಜಾ ಕಾರ್ಯಕ್ರಮ ನಂತರ ಮಾತನಾಡುತ್ತಿದ್ದ ಅವರು ಏಕತೆ ಏಕೀಯ ಭಾವದಿಂದ ನಡೆಯುವ ಕಾರ್ಯವಾಗಬೇಕು ಅಂದರೆ ಭಕ್ತಿ ಎಂಬುದು ಏಕೀಯ ಭಾವದೆಡೆ ಕೊಂಡೊಯುತ್ತದೆ ಎಂದರು. ಭಾರತ ದೇಶದಲ್ಲಿ ಅನೇಕ ಋಷಿ ಮುನಿಗಳು ಸಾದು ಸಂತರು ಆಗಿ ಹೋಗಿದ್ದಾರೆ ಅವರು ಹಾಕಿಕೊಟ್ಟ ಮಾರ್ಗ ಅನುಸರಿಸುತ್ತಾ ಸಾಗಿರುವದೇ ಆದ್ಯಾತ್ಮೀಕತೆಯ ಸ್ವರೂಪವಾಗಿದೆ ಎಂದರು. ಎಲ್ಲರೂ ತೋರುವದೇ ಭಕ್ತಿಯ ಮಾರ್ಗವೆಂದರು. ನವರಾತ್ರಿ ಎಂಬುದು ಶ್ರೀ ದೇವಿಯ ಮಹಾ ಪೂಜೆಯ ಆಚರಣೆಯ ಒಂದು ಮಹತ್ವದ ವೃತ ಇದಾಗಿದೆ ಇದರ ಆಚರಣೆಯಿಂದ ದುಷ್ಠ ಶಕ್ತಿ ನಾಶವಾಗಿ ಭಕ್ತಿಯ ತಕ್ಕಂತೆ ವರ ದೊರೆಯಲಿದೆ ಎಂದ ಅವರು ಎಲ್ಲರೂ ಜ್ಞಾನವಂತರಾಗಿ ಬಾಳುವ ಕಾರ್ಯವಾಗಬೇಕು ಭಕ್ತಿಯಿಂದ ನಡೆದರೆ ಅದು ಅಜ್ಞಾನವನ್ನು ನಾಶ ಮಾಡಿ ಸುಜ್ಞಾನದೆಡೆಗೆ ಕೊಂಡೊಯುತ್ತದೆ ಭಕ್ತಿಯ ಎಂಬ ಮಾರ್ಗ ದೊರೆಯಬೇಕಾದರೆ ಆದ್ಯಾತ್ಮದ ಅರಿವು ಅದರ ರುಚಿ ಅನುಬವಿಸಬೇಕೆಂದರು.
ಈ ಕಾರ್ಯಕ್ರಮಕ್ಕೆ ಅಹ್ವಾನಿಸಿದ ಸಚೀವ ಶಿವಾನಂದ ಪಾಟೀಲ ಅವರ ಪುತ್ರಿ ಸಂಯುಕ್ತಾ ಪಾಟೀಲ ಅವರು ಹಾಗೂ ಹುನಗುಂದ ಶಾಸಕ ವಿಜಯಾನಂದ ಕಾಶಪ್ಪನವರ ಪತ್ನಿ ಶ್ರೀಮತಿ ವೀಣಾ ಕಾಶಪ್ಪನವರ ಅವರು ಸವರಾತ್ರೋತ್ಸವ ಕುರಿತು ಜರುಗಿದ ಚಂಡಿ ಹೋಮಹವನ ಪೂಜಾ ಕಾರ್ಯಕ್ರಮಕ್ಕೆ ಬೆಟ್ಟಿ ನೀಡಿ ಆರುತಿ ಬೆಳಗಿ ಮಹಾ ಪೂಜೆಗೈದು ಪ್ರಸಾದ ಸ್ವಿಕರಿಸಿದರು.
ಈ ನವರಾತ್ರೋತ್ಸವ ಕುರಿತು ಏರ್ಪಡಿಸಲಾದ ಚಂಡಿ ಹೋಮ ಹವನ ಕಾರ್ಯಕ್ರಮ ಹಾಗೂ ಮಹಾ ಮಂತ್ರವನ್ನು ಜಮಖಂಡಿಯ ರೇವಣಸಿದ್ದಯ್ಯ ಹಾಗೂ ಶರಣಯ್ಯ ಶಾಸ್ತ್ರೀಗಳು ಪಠನ ಮಾಡಿ ಈ ಹೋಮ ನೇರವೇರಿಸುವದರಿಂದ ಆಗುವ ಲಾಭಗಳ ಕುರಿತು ಭಕ್ತೋದ್ದಾರ, ಜನೋದ್ದಾರ, ಆಗಲಿದೆ ಎಂಬ ವಿಚಾರವನ್ನು ಉಪಸ್ಥಿತ ಭಕ್ತರಿಗೆ ತಿಳಿಸಿದರು.
ಈ ಪೂಜಾ ಕಾರ್ಯಕ್ರಮದಲ್ಲಿ ಶಿವಶರಣೆ ಮಂಜುಳಾತಾಯಿ, ಹಾಗೂ ಬಸವರಾಜ ವ್ಹಿ ಯಾಳವಾರ, ಶಿಲ್ಪಾ ಬ ಯಾಳವಾರ, ಪ್ರತಿಭಾ ಸು ಯಾಳವಾರ, ಶಿಕ್ಷಕರಾದ ಆರ್.ಬಿ.ಬೊಮ್ಮನಹಳ್ಳಿ, ವ್ಹಿ.ಎಸ್.ಕಳಸಗೊಂಡ, ಅವರು ಪಾಲ್ಗೊಂಡು ನವರಾತ್ರೋತ್ಸವದ ವೃತ ಆಚರಣೆ ಮಾಡಿದರು.
ಇಂಗಳೇಶ್ವರ ವಚನಶಿಲಾ ಮಂಟಪದ ಶ್ರೀ ಚನ್ನಬಸವ ಮಹಾಸ್ವಾಮಿಗಳು ಮಹಾ ಪೂಜಾ ಸ್ಥಳಕ್ಕೆ ಆಗಮಿಸಿ ಶಿವಶರಣೆ ಮಂಜುಳಾತಾಯಿ ಅವರು ನೆರವೇರಿಸಿದ ದೇವತಾ ಸೇವಾ ಕಾರ್ಯಕ್ಕೆ ಮೇಚ್ಚುಗೆ ವ್ಯಕ್ತಪಡಿಸಿ ಆಶಿರ್ವದಿಸಿದರು.
ಈ ಕಾರ್ಯಕ್ರಮದಲ್ಲಿ ಬಬಲೇಶ್ವರದ ಶರಣೆ ಸುನಂದಾ ಸಿರಗೊಂಡ ಗುರುಪಾದೇಶ್ವರ ಮಠ, ಹಾಗೂ ಸಾವಿತ್ರಿ ಸಾವಳಗಿ ಬಬಲೇಶ್ವರ, ಶಿವನಗೌಡ ಬಾಗೇವಾಡಿ, ಹಾಗೂ ಬಳಗಾನೂರ ಗ್ರಾಮದ ಮಲ್ಲಣ್ಣ ದೋರನಳ್ಳಿ, ಮಲ್ಲಣ್ಣ ದೊರನಳ್ಳಿ, ಶಾಂತಯ್ಯ ಹಿರೇಮಠ, ಕರಣಯ್ಯ ಹಿರೇಮಠ, ಸಿದ್ದಣ್ಣ ವಾಲಿ, ಚನ್ನಣ್ಣ ಭಂಟನೂರ, ನಿಂಗಣ್ಣ ಬಾಗೇವಾಡಿ, ಸುವರ್ಣ ಅಗ್ನಿ, ಗುರುಪಾದ ವಾಲಿ, ಅಲ್ಲದೇ ಬಳಗಾನೂರ ಗ್ರಾಮದ ಸಮಸ್ತ ಗುರುಹಿರಿಯರು ಉಪಸ್ಥಿತರಿದ್ದರು.