ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್‍ನ ‘ಸಂಸ್ಥಾಪನಾ ದಿನ’ಸ್ಕೌಟ್ಸ್ ಮತ್ತು ಗೈಡ್ಸ್ ತರಬೇತಿ ಉತ್ತಮ ನಾಗರಿಕರಾಗಲು ರಹದಾರಿ -ಸದಾಶಿವ ಪ್ರಭು


ಸಂಜೆವಾಣಿ ವಾರ್ತೆ
ಹೊಸಪೇಟೆ ಫೆ24: ಸ್ಕೌಟ್ಸ್ ಮತ್ತು ಗೈಡ್ಸ್ ತರಬೇತಿ ಶಿಸ್ತು ಹಾಗೂ ದೇಶಾಭಿಮಾನದ ಜೊತೆ ಉತ್ತಮ ನಾಗರಿಕರಾಗಲು ಸುಲಭ ಮಾರ್ಗವಾಗಲಿದೆ ಎಂದು ಜಿಲ್ಲಾ ಪಂಚಾಯಿತಿ ಮುಖ್ಯಕಾರ್ಯನಿರ್ವಹಣಾಧಿಕಾರಿ ಸದಾಶಿವ ಪ್ರಭು ಹೇಳಿದರು.
ಹೊಸಪೇಟೆಯ ವಿಜಯನಗರ ಮಹಾ ವಿದ್ಯಾಲಯದ ಸಭಾಗಂಣದಲ್ಲಿ ಹಮ್ಮಿಕೊಂಡಿದ್ದ ಸಂಸ್ಥಾಪನಾ ದಿನ, ಪ್ರಥಮ ಜಿಲ್ಲಾ ಸಮ್ಮೇಳನ, ರಾಜ್ಯ ಪುರಸ್ಕಾರ ಪಡೆದ ಮಕ್ಕಳಿಗೆ ಪ್ರಮಾಣ ಪತ್ರ ವಿತರಣಾ ಸಮಾರಂಭದಲ್ಲಿ ಜ್ಯೋತಿ ಬೆಳಗಿಸಿ ಮಾತನಾಡಿದ ಅವರು ಮಕ್ಕಳಲ್ಲಿ ಶಿಸ್ತು ಸೇವೆ, ದೇಶಾಭಿಮಾನದ ಜೊತೆ ಜೀವನದ ಕೌಶಲ್ಯಗಳನ್ನು ಅರಿಯಲು ಉತ್ತಮ ವೇದಿಕೆಯಾಗಲಿದೆ ಇಂತಹ ಶಿಕ್ಷಣವನ್ನು ಚಿಕ್ಕಂದಿನಲ್ಲಿಯೇ ತಿಳಿಯಲು ಉತ್ತಮ ವೇದಿಕೆಯಾಗಿದ್ದು ಹೆಚ್ಚು ಹೆಚ್ಚು ಮಕ್ಕಳು ಸ್ಕೌಟ್ಸ್ ಮತ್ತು ಗೈಡ್ಸ್‍ಗೆ ಸೇರಿಕೊಳ್ಳಬೇಕು ಎಂದರು.
ಆರಂಭದಲ್ಲಿ ಸರ್ವಧರ್ಮ ಪ್ರಾರ್ಥನೆ, ಧ್ವಜಾರೋಹಣ, ನಗರದ ಪ್ರಮುಖ ಬೀದಿಗಳಲ್ಲಿ  ಸ್ಕೌಟ್ಸ್ ಹಾಗೂ ಗೈಡ್ಸ್ ಧ್ಯೇಯಗಳ ಬಿತ್ತಿ ಪತ್ರಗಳನ್ನು ಹಿಡಿದು ಫಥ ಸಂಚಲನೆ ಕಾರ್ಯಕ್ರಮ ನಡೆಸಲಾಗಿತು. ನಂತರ ವೇದಿಕೆಯ ಕಾರ್ಯಕ್ರಮ ಬೇಡನ್‍ವೊವೆಲ್ ಮತ್ತು ಲೇಡಿ ಬೇಡನ್ ವೊವೆಲ್‍ರವರ ಭಾವಚಿತ್ರಕ್ಕೆ ಪುಷ್ಪಾರ್ಚನೆಯೊಂದಿಗೆ ಆರಂಭಿಸಲಾಯಿತು. 2022/23ನೇ ಸಾಲಿನಲ್ಲಿ ನಡೆದ ರಾಜ್ಯ ಪುರಸ್ಕಾರ ಪರೀಕ್ಷಾ ಶಿಬಿರದಲ್ಲಿ 84 ಸ್ಕೌಟ್ಸ್ ಹಾಗೂ 82 ಗೈಡ್ಸ್ ಉತ್ತೀರ್ಣರಾದ ಮಕ್ಕಳಿಗೆ ರಾಜ್ಯಪಾಲರಿಂದ ನೀಡಿದ ರಾಜ್ಯ ಪುರಸ್ಕಾರ ಪ್ರಮಾಣ ಪತ್ರಗಳನ್ನು ಸಂಸ್ಥೆ ಯಶೋಧರಾ ದೇವಿ ಘೋರ್ಪಡೆ, ಉಪಾಧ್ಯಕ್ಷರಾದ ಜಾಲಿ ಬಸವರಾಜ್, ವೆಂಕಟೇಶ್, ವಿಜಯನಗರ ಮಹಾವಿದ್ಯಾಲಯದ ಪ್ರಾಚಾರ್ಯ ಪ್ರೋ. ಟಿ.ಶುಭಾಷ್ ಕ್ಷೇತ್ರಶಿಕ್ಷಣಾಧಿಕಾರಿ ಚೆನ್ನಬಸಪ್ಪ ಸೇರಿದಂತೆ ಗಣ್ಯರು ವಿತರಿಸಿ ಮಕ್ಕಳಿಗೆ ಶುಭಕೋರಿದರು.
ಜಿಲ್ಲಾ  ತರಬೇತಿ ಆಯುಕ್ತೆ ರೇಣುಕಾ, ಸಂಸ್ಥೆಯ ಖಚಾಂಚಿ ಕೆ.ತಿಪ್ಪೇಸ್ವಾಮಿ ನಾಯಕರಾದ ತಿಪ್ಪೇಸ್ವಾಮಿ, ಕುಮಾರಿ ಮಂಗಳಗೌರಿ ಪಾಲ್ಗೊಂಡಿದ್ದು, ಜಿಲ್ಲಾ ಖಚಾಂಚಿ ಎಂ.ಎಂ.ವಿರೂಪಾಕ್ಷಯ್ಯ ಸ್ವಾಗತಸಿದ ಕಾರ್ಯಕ್ರಮಕ್ಕೆ ಜಿಲ್ಲಾ ಕಾರ್ಯದರ್ಶಿ ಮಂಜುನಾಥಪ್ಪ ಪ್ರಾಸ್ತಾವಿಕವಾಗಿ ಮಾತನಾಡಿದರು. ರಾಜ್ಯಪರಿಷತ್ ಸದಸ್ಯ ಡಾ.ಶಿವ ಮಲ್ಲಿಕಾರ್ಜನ ವಂದಿಸಿದರು ಕಾರ್ಯದರ್ಶಿ ತಿಪ್ಪೇಸ್ವಾಮಿ ನಿರ್ವಹಿಸಿದ್ದರು.

One attachment • Scanned by Gmail