ಸಂಜೆವಾಣಿ ವಾರ್ತೆ
ದಾವಣಗೆರೆ. ಸೆ.೨೩; ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ , ಜಿಲ್ಲಾ ಸಂಸ್ಥೆ ದಾವಣಗೆರೆ ವತಿಯಿಂದ ರೋಟರಿ ಬಾಲಭವನ ಮತ್ತು ಡಿ ಆರ್ ಎಂ ಸ್ಕೌಟ್ ಭವನದಲ್ಲಿ ಜನಪದ ತಜ್ಞರು ನಾಡೋಜ ಪ್ರಶಸ್ತಿ ಪುರಸ್ಕೃತರು ಡಾ, ಗೋರು ಚನ್ನಬಸಪ್ಪ ಹೆಸರಿನಲ್ಲಿ ಗೀತ ಗಾಯನ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಮುಖ್ಯ ಆಯುಕ್ತರಾದ ಮುರುಘರಾಜೇಂದ್ರ ಜೆ ಚಿಗಟೇರಿ ಮಾತನಾಡಿ ಹಾಡುವುದರಿಂದ ಮಾನಸಿಕ ಒತ್ತಡ ಕಡಿಮೆ ಮಾಡಿಕೊಳ್ಳಲು ಪ್ರಯೋಜನವಾಗುತ್ತದೆ ಎಂದರುಕಾರ್ಯಕ್ರಮವನ್ನು ಉದ್ಘಾಟಿಸಿದ ಉಪನಿರ್ದೇಶಕರು ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಕೊಟ್ರೇಶ್ ಮಾತನಾಡಿ ಭಾರತ್ ಸ್ಕೌಟ್ ಮತ್ತು ಗೈಡ್ಸ್ ಸ್ಕೌಟ್ಸ್ ,ಕಬ್ ಮತ್ತು ಬುಲ್ ಬುಲ್ ಕಡ್ಡಾಯವಾಗಿ ಎಲ್ಲಾ ಶಾಲೆಯಲ್ಲಿಯೂ ಇರಲೇಬೇಕು ಎಂದರು.ಸ್ಕೌಟ್ಸ್ ಮತ್ತು ಗೈಡ್ಸ್ ಎಂದರೆ ನನಗೆ ಅಪಾರ ಅಭಿಮಾನ. ಇಂತಹ ಗೀತಾ ಗಾಯನದಲ್ಲಿ ಭಾಗವಹಿಸುವುದರಿಂದ ಓದಿನ ಕಡೆ ಹೆಚ್ಚು ಗಮನ ಹರಿಸ ಬಹುದು. ಜಾನ ಪದ ಕಲೆಯನ್ನು ಉಳಿಸಲು ನೆರವಾಗುತ್ತದೆ. ಮತ್ತು ಅಂತರಾಷ್ಟ್ರೀಯ ಸಾಂಸ್ಕೃತಿಕ ಜಾಂಬೂರಿ ವ್ಯಭವವನ್ನು ನೆನಪಿಸಿದರು. ಅತಿಥಿಗಳಾಗಿ ಎ ಪಿ ಷಡಕ್ಷರಪ್ಪ ಜಿಲ್ಲಾ ಸ್ಕೌಟ್ ಆಯುಕ್ತರು ವಿದ್ಯಾರ್ಥಿಗಳಿಗೆ ಉತ್ಸಾದಾಯಕ ಮಾತುಗಳನ್ನು ಹಾಡಿದರು ಮತ್ತು ರತ್ನ ಜಿಲ್ಲಾ ಕಾರ್ಯದರ್ಶಿಗಳು ಅಂತರಾಷ್ಟ್ರೀಯ ಶಾಂತಿ ದಿನಾಚರಣೆಯ ಬಗ್ಗೆ ಮಾಹಿತಿಯನ್ನು ನೀಡಿದರು. ಸಹಾಯಕ ಜಿಲ್ಲಾ ಆಯುಕ್ತರು ಎನ್.ಕೆ.ಕೊಟ್ರೇಶ್ ಮತ್ತು ಹಾಲಪ್ಪ ಡಿ ಟಿ ಸಿ,
ಡಾ ,ಶಕುಂತಲಾ ರೇಂಜರ್ ವಿಭಾಗದ ಕೋ ಆರ್ಡಿನೇಟರ್ ಉಪಸ್ಥಿತರಿದ್ದರು.