ಭಾರತ್ ಸ್ಕೌಟ್ಸ್‌ನಿಂದ ರಾಜ್ಯೋತ್ಸವ ಆಚರಣೆ

ಕೋಲಾರ, ನ.೩-ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಮತ್ತು ರೋಟರಿ ಕೋಲಾರ ನಂದಿನಿ ವತಿಯಿಂದ ಕನ್ನಡ ರಾಜ್ಯೋತ್ಸವ ವನ್ನು ಜಿಲ್ಲಾ ಸ್ಕೌಟ್ ಭವನದಲ್ಲಿ ಸರಳವಾಗಿ ಆಚರಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ಕನ್ನಡ ಸೇವೆ ಸಲ್ಲಿಸಿದ ನಿವೃತ್ತ ಉಪನ್ಯಾಸಕಿ ಕೆ.ಆರ್.ಜಯಶ್ರೀ ಹಾಗೂ ನಿವೃತ್ತ ಮುಖ್ಯ ಶಿಕ್ಷಕ ಸುಲೇಮಾನ್ ಖಾನ್ ರವರನ್ನು ಸನ್ಮಾನಿಸಿ ಅಭಿನಂದಿಸಲಾಯಿತು.
ಕಾರ್ಯಕ್ರಮದಲ್ಲಿ ಪಧಾಧಿಕಾರಿಗಳಾದ ಕೆ.ವಿ.ಶಂಕರಪ್ಪ,ಕೆ,ಆರ್ ಸುರೇಶ್, ಗೋಪಾಲ ರೆಡ್ಡಿ, ಉಮಾದೇವಿ, ಚಂದ್ರಪ್ಪ, ಬಾಬು.ವಿ. ವಿಶ್ವನಾಥ್ .ವಿ. ಭಾವನ, ನಾಗವೇಣಿ ಮುಂತಾದವರು ಉಪಸ್ಥಿತರಿದ್ದರು.