ಭಾರತ್ ಯೂರಿಯಾ ರೈತರಿಗೆ ಲಭ್ಯವಾಗುವ ಏಕೈಕ ಬ್ರಾಂಡ್: ಪ್ರಧಾನಿ ಸ್ಪಷ್ಟನೆ

ಹೈದರಾಬಾದ್, ನ.12-ಭಾರತ್ ಯೂರಿಯಾ ದೇಶದ ರೈತರಿಗೆ ಲಭ್ಯವಾಗುವ ಏಕೈಕ ಯೂರಿಯಾ ಬ್ರ್ಯಾಂಡ್ ಎಂದು ಪ್ರಧಾನಿ ನರೇಂದ್ರ ಮೋದಿ ಇಂದು ಸ್ಪಷ್ಟಪಡಿಸಿದ್ದಾರೆ.

ರಸಗೊಬ್ಬರದ ಬೆಲೆ ಮತ್ತು ಗುಣಮಟ್ಟವನ್ನು ಮೊದಲೇ ನಿರ್ಧರಿಸಲಾಗುತ್ತದೆ. ದೇಶದಲ್ಲಿ ರೈತರಿಗೆ ಹೊರಯಾಗದಂತೆ ರಸಗೊಬ್ಬರಗಳ ಮೇಲಿನ ವಿವಿಧ ಸಬ್ಸಿಡಿ ನೀಡಲಾಗುತ್ತಿದೆ ಎಂದಿದ್ದಾರೆ.

ರಾಮಗುಂಡಂ ರಾಸಾಯನಿಕ ಮತ್ತು ರಸಗೊಬ್ಬರ ಲಿಮಿಟೆಡ್ (ಆರ್‌ಎಫ್‌ಸಿಎಲ್) ಅನ್ನು ರಾಷ್ಟ್ರಕ್ಕೆ ಅರ್ಪಿಸಿದ ನಂತರ ರೈತರನ್ನು ಉದ್ದೇಶಿಸಿ ಮಾತನಾಡಿದ ಅವರು ಈ ಹಿಂದೆ ರೈತರು ಉರಿಗೆ ಹೆಚ್ಚಿನ ಮೊತ್ತ ಪಾವತಿಸುತ್ತಿದ್ದರು ಮತ್ತು ಕಾಳ ಸಂತೆಯಲ್ಲಿ ಮಾರಾಟ ಮಾಡುವುದನ್ನು ತಪ್ಪಿಸಲು ಹಾಗು ರೈತರಿಗೆ ರಸಗೊಬ್ಬರ ಹೊರೆಯಾಗದಂತೆ ಸಬ್ಸಿಡಿ ನೀಡಲು ಸರ್ಕಾರ ಹಲವಾರು ಕ್ರಮಗಳನ್ನು ತೆಗೆದುಕೊಂಡಿದೆ ಎಂದು ಹೇಳಿದ್ದಾರೆ.

ಖಾಸಗೀಕರಣ ಇಲ್ಲ;

ಸಿಂಗರೇಣಿ ಕೋಲ್ ಕಾಲಿಯರೀಸ್ ಲಿಮಿಯನ್ನು ಖಾಸಗೀಕರಣ ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿದ ಪ್ರಧಾನಿ ಈ ಹಿನ್ನೆಲೆಯಲ್ಲಿ ವದಂತಿ ಹಬ್ಬಿಸುವವರನ್ನು ನಂಬಬೇಡಿ ಎಂದು ಮನವಿ ಮಾಡಿದರು.

ಕೇಂದ್ರ ಸರ್ಕಾರ ಶೇ 49ರಷ್ಟು ಷೇರು ಹೊಂದಿರುವ ರಾಜ್ಯ ಸರ್ಕಾರ ಶೇ 51 ರಷ್ಟು ಷೇರು ಹೊಂದಿರುವ ಕಂಪನಿಯನ್ನು ಖಾಸಗೀಕರಣ ಮಾಡುವುದು ಹೇಗೆ ಎಂದು ಪ್ರಶ್ನಿಸಿದರು.

ಮೂಲಸೌಕರ್ಯ ಅಭಿವೃದ್ಧಿಯಲ್ಲಿ, ಮೂಲಸೌಕರ್ಯ ಕ್ಷೇತ್ರವನ್ನು ಮುಂದಿನ ಹಂತಕ್ಕೆ ಕೊಂಡೊಯ್ಯಲು ಗತಿ ಶಕ್ತಿಯನ್ನು ನೀಡಲು ಎಲ್ಲಾ ಪಾಲುದಾರರು ಒಗ್ಗಟ್ಟಿನಿಂದ ಕೆಲಸ ಮಾಡುವಂತೆ ಪ್ರಧಾನಮಂತ್ರಿ ಕರೆ ನೀಡಿದರು.

ಇದೇ ವೇಳೆ ಪ್ರಧಾನಿ ನರೇಂದ್ರ ಮೋದಿ ಭದ್ರಾಚಲಂ ರಸ್ತೆ-ಸಾತುಪಲ್ಲಿ ರೈಲು ಮಾರ್ಗ ಯೋಜನೆಯನ್ನು ರಾಷ್ಟ್ರಕ್ಕೆ ಸಮರ್ಪಿಸಿದರು ಮತ್ತು ರಾಜ್ಯದಲ್ಲಿ ಮೂರು ಹೆದ್ದಾರಿ ವಿಸ್ತರಣೆ ಯೋಜನೆಗಳಿಗೆ ಅಡಿಪಾಯ ಹಾಕಿದರು.

ಕೇಂದ್ರ ಪ್ರವಾಸೋದ್ಯಮ ಸಚಿವ ಜಿ.ಕಿಸ್ ರೆಡ್ಡಿ, ರಾಮಗುಂಡಂನಲ್ಲಿ ಸರಕಾರ ಜಾಗ ಮಂಜೂರು ಮಾಡಿದ ಕೂಡಲೇ ಇಎಸ್‌ಐ ಆಸ್ಪತ್ರೆ ನಿರ್ಮಿಸಲಾಗುವುದು. ಅಭಿವೃದ್ಧಿಗೆ ಸರಕಾರಗಳು ಬದ್ಧತೆಯಿಂದ ಎಲ್ಲ ಕ್ರಮಗಳನ್ನು ಕೈಗೊಳ್ಳುತ್ತಿದ್ದಾರೆ ಎಂದರು.

ರಾಜ್ಯಪಾಲ ಡಾ ತಮಿಳಿಸೈ ಸೌಂದರರಾಜನ್ ಉಪಸ್ಥಿತರಿದ್ದರು.