ಭಾರತ್ ಬಂದ್ ಬಳ್ಳಾರಿ ಕಿಸಾನ್ ಕಾಂಗ್ರೆಸ್ ಸಹಕಾರ:ಶ್ರೀಧರ್

(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಸೆ.25: ನಾಡಿದ್ದು ಕೇಂದ್ರದ ಬಿಜೆಪಿ ಸರ್ಕಾರ ತಿದ್ದುಪಡಿ ಮಾಡಿರುವ ರೈತರಿಗೆ ಕರಾಳವಾಗಿರುವ ಕೃಷಿಕಾಯ್ದೆಗಳನ್ನು ಹಿಂಪಡೆಯುವಂತೆ ಆಗ್ರಹಿಸಿ ವಿವಿಧ ಸಂಘಟೆನಗಳು ಕರೆ ನೀಡಿರುವ ಭಾರತ್ ಬಂದ್ ಗೆ 
ಬಳ್ಳಾರಿ ಕಿಸಾನ್ ಕಾಂಗ್ರೆಸ್ ನಿಂದ  ಜಿಲ್ಲಾ ಅಧ್ಯಕ್ಷ ಮಾನ್ಯಂ ಶ್ರೀಧರ್  ಮತ್ತು ಪ್ರಧಾನ ಕಾರ್ಯದರ್ಶಿ  ಯೋಗೇಶ್ ಕುಮಾರ್ ಭಂಡಾರಿ ಸಹಕಾರ ನೀಡುತ್ತಿದೆ ಎಂದು ಹೇಳಿದ್ದಾರೆ.
ರೈತನಿಗೆ ಕನಿಷ್ಟ ಬೆಂಬಲ ನೀಡದಿದ್ದರೆ, ಇಡಿ ದೇಶವೇ ಸುಟ್ಟು ಕರಕಲು ಆಗುವುದು ಸತ್ಯ. ಇಡೀ ಪ್ರಪಂಚವೇ ಆಧಾರವಾಗಿರುವುದು ರೈತನ ಮೇಲೆ, “ರೈತನ ಬೆವರಿನ ಹನಿ, ಎಲ್ಲಾರ ಜೀವನದ ಧ್ವನಿಯಾಗಿದೆ.” ಇದನ್ನು ಮರೆತು ಬಾಳುವುದು  ಸರಿಯೇ. ಎಲ್ಲರಿಗೂ ಜೀವನ ಕೊಟ್ಟ ರೈತನ ಬದುಕು ಮಾತ್ರ ಅಲ್ಲೇ ಇದೆ. ಆದರೂ ಯಾವ ರೈತನು ಯಾರ ಮೇಲೂ ದೂರು ನೀಡದೆ ನೇಗಿಲನ್ನು ಹಿಡಿದು ಯೋಗಿಯಂತೆ ಭೂ ತಾಯಿ ಜೊತೆ ಮಾತನಾಡುವನು.ಇಂತಹ ಮಹಾನ್ ತ್ಯಾಗಿಯನ್ನು ಮರೆತು ಬಾಳುವುದು ಸರಿಯಲ್ಲ. ಸಮಾಜವೇ ಇರಲಿ ಸರ್ಕಾರವೇ ಇರಲಿ. ಅವನ ಬಗ್ಗೆ ಚಿಂತಿಸಿ ವಂದಿಸುವ ಕಾರ್ಯ ನಡೆದಾಗ ಇಡೀ ರಾಷ್ಟ್ರವೇ ಸುಭಿಕ್ಷಿತೆಯಿಂದ  ಇರಲು ಸಾಧ್ಯ ಎಂಬುವುದು ಎಲ್ಲಾ ಸರ್ಕಾರಗಳು ಅರಿಯಬೇಕಿದೆ.
ರೈತರು ಹಿಂದುಳಿಯಲು ಬರೀ ಸರ್ಕಾರವುಬ ನಿಗದಿತ ಸಮಯಕ್ಕೆ ರೈತರಿಗೆ ಬೇಕಾದ ಸಹಾಯ ಸಹಕಾರಗಳನ್ನು  ನೀಡಬೇಕಿದೆ. ಅದು ಬಿಟ್ಟು ರೈತರನ್ನೇ ಸಂಕಷ್ಟಕ್ಕೆ ಈಡು ಮಾಡುವ ಕಾಯ್ದೆಗಳ ಜಾರಿ ಸರಿಯಲ್ಲ ಎಂಬುದನ್ನು   ಸರ್ಕಾರಕ್ಕೆ ಮನವರಿಕೆ ಮಾಡುವ ಉದ್ದೇಶದಿಂದ ಈ ಬಂದ್ ಕರೆ ನೀಡಿದೆ.  ಶಾಂತಿಯುತವಾಗಿ ನಡೆಸಲು ನಿರ್ಧರಿಸಿದ್ದೇವೆ ಅದ್ದರಿಂದ ಎಲ್ಲಾರ ಸಹಕಾರ ಅತಿ ಮುಖ್ಯವಾಗಿದೆ ಎಂದಿದ್ದಾರೆ.
ಎಲ್ಲಾ ಕ್ಷೇತ್ರದ  ಸಂಸ್ಥೆಗಳು  ರೈತರ ಪರವಾಗಿ ನಿಂತು ಸರ್ಕಾರಕ್ಕೆ ಎಚ್ಚರಿಕೆಯ ಮನವಿ ಮಾಡಲು ಪ್ರತಿಭಟನೆಯಲ್ಲಿ ಪಾಲ್ಗೊಂಡು ಈ ಭಾರತ್ ಬಂದ್ ಯಶಸ್ವಿ ಮಾಡಬೇಕೆಂದು ಕೋರಿದ್ದಾರೆ.