ಭಾರತ್ ಬಂದ್‍ಗೆ ನಮ್ಮ ಬೆಂಬಲವಿಲ್ಲ: ಶರಣೇಗೌಡ

ಸಂಜೆವಾಣಿ ವಾರ್ತೆ
ಗಂಗಾವತಿ ಸೆ 24 : ಕೃಷಿ ಕಾಯ್ದೆ ವಿರೋಧಿಸಿ ರೈತ ಸಂಘಗಳು ಸೆ.27 ರಂದು ಹಮ್ಮಿಕೊಂಡಿರುವ ಭಾರತ್ ಬಂದ್‍ಗೆ ತಮ್ಮ ಬೆಂಬಲವಿಲ್ಲ ಎಂದು ಅಖಿಲ ಕರ್ನಾಟಕ ರಾಜ್ಯ ಅನ್ನದಾತ ರೈತ ಸಂಘದ ರಾಜ್ಯಧ್ಯಕ್ಷ ಕೆಸರಟ್ಟಿ ಶರಣೇಗೌಡ ತಿಳಿಸಿದ್ದಾರೆ. ಈ ಕುರಿತು ಜೆಂಟಿ ಹೇಳಿಕೆ ನೀಡಿರುವ ಶರಣೆಗೌಡ ಮತ್ತು ಉಪಾಧ್ಯಕ್ಷ ಶರಣಪ್ಪ ಕೊತ್ವಾಲ್  ಅವರು, ಕೋಡಿಹಳ್ಳಿ  ಚಂದ್ರಶೇಖರ್ ಬಣದ ನಜೀರ್‍ಸಾಬ್ ಇವರು ಬಂದ್‍ಗೆ ಅನ್ಯ ರೈತಸಂಘಗಳ ಅಗತ್ಯವಿಲ್ಲ ಎಂದು ಬಹಿರಂಗ ಹೇಳಿಕೆ ಹಿನ್ನೆಲೆಯಲ್ಲಿ ತಾವು ಈ ನಿರ್ಧಾರ ಕೈಗೊಂಡಿರುವುದಾಗಿ ತಿಳಿಸಿದ್ದಾರೆ.