ಭಾರತ್ ಜೋಡೋ ಯಾತ್ರೆಯ ಪೂರ್ವ ಸಿದ್ದತೆ ಸಭೆ


(ಸಂಜೆವಾಣಿ ವಾರ್ತೆ)
ಬಳ್ಳಾರಿ, ಸೆ.22: ಬೆಂಗಳೂರಿನ‌ ಕೆಪಿಸಿಸಿ ಕಚೇರಿಯಲ್ಲಿ ಇಂದು ಎಐಸಿಸಿ ಮುಖಂಡ ರಾಹುಲ್ ಗಾಂಧಿ ಅವರ ಭಾರತ್ ಜೋಡೋ ಪಾದಯಾತ್ರೆಯು  ಕರ್ನಾಟಕದಲ್ಲಿ ಸಾಗುವದರ ಮತ್ತು ಬಳ್ಳಾರಿಯಲ್ಲಿ ಸೆ 18 ರಂದು ನಡೆಯುವ ಬಹಿರಂಗ ಸಭೆಯ ಬಗ್ಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಜಿಲ್ಲೆಯ ಮುಖಂಡರುಗಳ ಜೊತೆ ಸಮಾಲೋಚನೆ ಸಭೆ ನಡೆಸಿದರು.
ಪಾದಯಾತ್ರೆ ಬಳ್ಳಾರಿ ಜಿಲ್ಲೆಗೆ ಸೆ 17 ಕ್ಕೆ ಬರಲಿದೆ. 18 ಬಹಿರಂಗ ಸಭೆ ಸೆ.19 ಜಿಲ್ಲೆಯಿಂದ ಮೋಕಾದ ಕಡೆ ಸಾಗಿ, ಸೆ.20 ರಂದು ಆಂದ್ರ ಪ್ರವೇಶದ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು.
ಸಭೆಯಲ್ಲಿ
ಕೆಪಿಸಿಸಿ ಪ್ರಚಾರ ಸಮಿತಿ ಎಂ.ಬಿ.ಪಾಟೀಲ್, ಕೆಪಿಸಿಸಿ ಕಾರ್ಯಧ್ಯಕ್ಷ ಈಶ್ವರ ಖಂಡ್ರೆ, ರಾಜ್ಯ ಸಭಾ ಸದಸ್ಯ ಡಾ. ಸೈಯದ್ ನಾಸೀರ್ ಹುಸೇನ್, ಗ್ರಾಮೀಣ ಶಾಸಕ ಬಿ.ನಾಗೇಂದ್ರ,  ಶಾಸಕ ಅಮರೇಗೌಡ ಬಯ್ಯಾಪುರ ಮಾಜಿ ಸಚಿವ ಎಂ.ದಿವಾಕರಬಾಬು, ಮಾಜಿ ಸಂಸದ ಉಗ್ರಪ್ಪ, ಮಾಜಿ ಶಾಸಕ ಚಂದ್ರಶೇಖರಯ್ಯ, ಹೆಚ್.ಆರ್.ಗವಿಯಪ್ಪ, ಕೆ.ಎಸ್.ಎಲ್.ಸ್ವಾಮಿ, ಮುಖಂಡರಾದ ಆಂಜನೇಯಲು ಮೊದಲಾದವರು ಇದ್ದರು.

Attachments area