ಭಾರತ್ ಜೋಡೋ ಯಾತ್ರೆಯ ಎರಡನೇ ಹಂತ ಪ್ರಾರಂಭ

ಸಂಜೆವಾಣಿ ವಾರ್ತೆ

ಜಗಳೂರು.ಜ.೨೧:- ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ಯಾತ್ರೆಯ ಎರಡನೇ ಭಾಗವಾದ ಭಾರತ್ ಜೋಡೋ ನ್ಯಾಯಯಾತ್ರೆ ಮಣಿಪುರದಿಂದ ಮುಂಬೈವರೆಗೂ ಆರಂಭವಾಗಿದೆ.ಈ ಯಾತ್ರೆಯಲ್ಲಿ ತಾಲೂಕಿನ ಕೆಪಿಸಿಸಿ ಸದಸ್ಯ ಹಾಗೂ ದಾವಣಗೆರೆ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೇಟ್ ಆಕಾಂಕ್ಷಿ ಕಲ್ಲೇಶ್ ರಾಜ್ ಪಟೇಲ್  ಸಕ್ರಿಯವಾಗಿ ಪಾಲ್ಗೊಂಡು ಹೆಜ್ಜೆಹಾಕುತ್ತಿದ್ದಾರೆ.ರಾಹುಲ್ ಗಾಂಧಿ ನೇತೃತ್ವದಲ್ಲಿ ಭಾರತ್ ಜೋಡೋ ನ್ಯಾಯ ಯಾತ್ರೆ ಜ.14 ರಿಂದ ಮಣಿಪುರದ ಇಂಪಾಲ್ ನ ಕೊಂಗ್ ಜುಮ್ ನಿಂದ ಆರಂಭವಾಗಿದೆ.ಕೇಂದ್ರ ಸರ್ಕಾರದ ಆಡಳಿತ ವೈಫಲ್ಯಗಳ ವಿರುದ್ದ ಹಾಗೂ ದೇಶದ ಜನರನ್ನು ಒಗ್ಗೂಡಿಸುವ ಈ ಯಾತ್ರೆ ಹಮ್ಮಿಕೊಳ್ಳಲಾಗಿದೆ.ಯಾತ್ರೆಯುದ್ದಕ್ಕೂ ರಾಹುಲ್ ಗಾಂಧಿಯವರು ಕೇಂದ್ರಸರ್ಕಾರದ ವೈಫಲ್ಯಗಳನ್ನು ಎತ್ತಿಹಿಡಿದು ಜನಜಾಗೃತಿಯೊಂದಿಗೆ ವಾಗ್ದಾಳಿ ನಡೆಸುತ್ತಿದ್ದಾರೆ.ಈ ಯಾತ್ರೆಯಲ್ಲಿ ಜಗಳೂರಿನ ಕೆಪಿಸಿಸಿ ಸದಸ್ಯ ಕಲ್ಲೇಶ್ ರಾಜ್ ಪಟೇಲ್ ಅವರು ಕರ್ನಾಟಕವನ್ನು ಪ್ರತಿನಿಧಿಸಿ ಯಾತ್ರೆಯುದ್ದಕ್ಕೂ ಸಾಗುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ.ದೇಶದ 15 ರಾಜ್ಯಗಳ 110 ಜಿಲ್ಲೆಗಳಲ್ಲಿ 66 ದಿನಗಳಲ್ಲಿ 6700 ಕಿ.ಮೀ ದೂರ ಕ್ರಮಿಸಲಿರುವ ಭಾರತ್ ಜೋಡೋ ನ್ಯಾಯ ಯಾತ್ರೆಯಲ್ಲಿ ನಾನು ಪಾಲ್ಗೊಂಡಿದ್ದೇನೆ.ಕಳೆದ ವರ್ಷ ಕನ್ಯಾಕುಮಾರಿ ಯಿಂದ ಕಾಶ್ಮೀರ ದವರೆಗೆ 4081 ಕಿಮೀ ಭಾರತ್ ಜೋಡೋ ಮೊದಲ ಪಾದ ಯಾತ್ರೆಯಲ್ಲಿಯೂ ಸಕ್ರಿಯವಾಗಿ ಭಾಗವಹಿಸಿರುವ ಅನುಭವವಿದೆ.ರಾಹುಲ್ ಗಾಂಧಿಯವರಿಗೆ ಮಣಿಪುರ, ನಾಗಲ್ಯಾಂಡ್,ಅಸ್ಸಾಂ ರಾಜ್ಯಗಳು ಸೇರಿದಂತೆ ಹೋದಕಡೆಯಲ್ಲಿ ಅದ್ದೂರಿ ಸ್ವಾಗತ,ಉತ್ತಮ ಸ್ಪಂದನೆ,ಪ್ರತಿಕ್ರಿಯೆ ಸಿಗುತ್ತಿದ್ದು,ರಾಹುಲ್ ಗಾಂಧಿ ಅವರ ಸರಳತೆ,ಜನತೆಯೊಂದಿಗೆ ಒಡನಾಡಿತನ,ಜನರಮನಸ್ಸಿಗೆ ಹತ್ತಿರವಾಗುವ ರೀತಿ,ನಡತೆಗಳು ನಮಗೆಲ್ಲಾ ಮಾದರಿ ಎಂದು ಕಲ್ಲೇಶ್ ರಾಜ್ ಪಟೇಲ್ ಪತ್ರಿಕೆಗೆ ತಿಳಿಸಿದರು.