ಭಾರತ್ ಎನ್ನುವುದಕ್ಕೆ ನಮಗೆ ಅಭ್ಯಂತರ ಇಲ್ಲಈಗ ಏಕೆ ಈ ಪ್ರಸ್ತಾಪ: ಉಗ್ರಪ್ಪ ಪ್ರಶ್ನೆ


(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಸೆ.07: ಇಂಡಿಯಾವನ್ನು ಭಾರತ್ ಎನ್ನುವುದಕ್ಕೆ ನಮಗೆ ಅಭ್ಯಂತರ ಇಲ್ಲ. ಆದರೆ ಈ ವಿಷಯದ ಪ್ರಸ್ತಾಪ ಈಗ ಏಕೆ.
ಚುನಾವಣೆ ಸಂದರ್ಭದಲ್ಲಿ ಜನರ ಗಮನವನ್ನು ಬೇರೆಡೆ ಸೆಳೆಯಲು ಈ ರೀತಿ ಮಾಡುವುದು ಸೂಕ್ತ ಅಲ್ಲ ಎಂದು ಮಾಜಿ ಸಂಸದ ವಿ.ಎಸ್.ಉಗ್ರಪ್ಪ ಹೇಳಿದ್ದಾರೆ.
ಅವರು ಇಂದು ನಗರದ ಸರ್ಕಾರಿ ಅತಿಥಿ ಗೃಹದಲ್ಲಿ ಕರೆದಿದ್ದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು.  ಮಹಿಳಾ ಬಿಲ್ 1996 ರಿಂದ ಪೆಂಡಿಂಗ್ ಇದೆ. ಇಲ್ಲಿವರೆಗೆ ಅದನ್ನು ತೆಗೆದುಕೊಳ್ಳಲಿಲ್ಲ. ಈಗ ಮಹಿಳಾ ಮೀಸಲಾತಿ ಚರ್ಚೆ ಯಾಕೆ ಎಂದರು.
ಒನ್ ನೇಷನ್ ಒನ್ ಚುನಾವಣೆ ಮಾಡುವುದಿದ್ದರೆ ಇಷ್ಟು ವರ್ಷ ಯಾಕೆ ಸುಮ್ಮನಿದ್ದಿರಿ. ಚುನಾವಣೆ ಸುಧಾರಣೆ ಮಾಡುವ ಇಚ್ಚೆ ಇದ್ದರೆ. ಚುನಾವಣೆಯ ಭ್ರಷ್ಟಾಚಾರವನ್ನು ತಡೆಯಲು ಸುಧಾರಣೆ ತನ್ನಿ ಎಂದರು.
ಭ್ರಷ್ಟಾಚಾರ ನಿರ್ಮೂಲನೆಯಲ್ಲಿ ಪ್ರಧಾನಿಯವರು ವಿಫಲರಾಗಿದ್ದಾರೆ. ಕರ್ನಾಟಕದ ವಿಧಾನಸಭಾ ಚುನಾವಣೆ ಫಲಿತಾಂಶದ ನಂತರ ಬಿಜೆಪಿ ನಾಯಕರು ಹತಾಶೆಗೊಂಡಿದ್ದಾರೆ. ವಿರೋಧ ಪಕ್ಷದ ನಾಯಕರಿಲ್ಲದಂತಾಗಿದೆ.
ಇಡೀ ದೇಶವನ್ನು ಸಮೀಕರಿಸಿ ಪಾದಯಾತ್ರೆ ಮಾಡಿದ್ದು ಎಐಸಿಸಿ ನಾಯಕ ರಾಹುಲ್ ಗಾಂಧಿ ಮಾತ್ರ. ಅವರ ಭಾರತ್ ಜೋಡೋ ಯಾತ್ರೆಗೆ ಒಂದು ವರ್ಷ ಆಗಿದ್ದು ಅದರಂಗವಾಗಿ ಇಂದು ಹಲವು ಕಾರ್ಯಕ್ರಮ ಹಮ್ಮಿಕೊಂಡಿದೆಂದರು.
@12bc = ಚರ್ಚೆ ಅನಗತ್ಯ:
ದೇಶದಲ್ಲಿ ಚರ್ಚೆ ಆಗುತ್ತಿರುವ ಸನಾತನ ವಿಷಯ ಸೂಕ್ಷ್ಮವಾದುದು. ಅವರವರ ಭಾವನೆ, ನಂಬಿಕೆಯಂತೆ ಆಚರಣೆ ಮಾಡಲು ಹಕ್ಕಿದೆ.
ಸಾರ್ವಜನಿಕವಾಗಿ ಪರ ಮತ್ತು ವಿರೋಧವಾಗಿ ಮಾತನಾಡುವುದರಿಂದ ಯಾವುದೇ ಉಪ ಯೋಗವಿಲ್ಲ. ಅದು ಬಿಟ್ಟು  ಅಭಿವೃದ್ಧಿಗೆ ಪೂರಕವಾಗಿದ್ದನ್ನು ಏನನ್ನಾದರೂ ಮಾಡಲಿ ಎಂದರು.
ಸ್ಪರ್ಧೆಯ ಆಕಾಂಕ್ಷಿ:
ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ  ಟಿಕೆಟ್ ಕೇಳಿದರೆ ಪಕ್ಷದ ಮುಖಂಡರು  ಲೋಕಸಭಾ ಚುನಾವಣೆಗೆ ಸ್ಪರ್ಧೆ ಮಾಡುವಂತೆ ಎಂದಿದ್ದರು. ಆದರೂ ಟಿಕೆಟ್ ನೀಡುವುದು ಪಕ್ಷಕ್ಕೆ ಬಿಟ್ಟ ವಿಚಾರ ಕಾಂಗ್ರೆಸ್ ಟಿಕೆಟ್ ಯಾರು‌ಕೇಳಿದರೂ ಸರಿ, ಯಾರಿಗೇ ಕೊಟ್ಟರೂ ಸರಿ ಬಳ್ಳಾರಿಯ ಹೆಸರನ್ನು ಸಂಸತ್ ನಲ್ಲಿ ಉಳಿಸುವಂತಹ ವ್ಯಕ್ತಿಯಾಗಬೇಕು ಎಂದರು.
ಶ್ರೀರಾಮುಲು ಸ್ಪರ್ಧೆ ಮಾಡಿದರೆ ಎಂಬ ಪ್ರಶ್ನೆಗೆ.  ನನಗೆ ಬಿಜೆಪಿ ಚಿನ್ಹೆಯಷ್ಟೇ ಸ್ಪರ್ಧಿ  ಅವರಿವರ ಹೆಸರು ಮುಖ್ಯ ಅಲ್ಲ ಎಂದರು.
ಅಂತರ ರಾಜ್ಯ ಗಡಿ ವಿಚಾರ ಸದನದಲ್ಲಿ ಪ್ರಸ್ತಾಪ ಮಾಡಲು ಒತ್ತಾಯಿಸಲಿದೆಂದರು. ಸುದ್ದಿಗೋಷ್ಟಿಯಲ್ಲಿ ಪಕ್ಷದ ಮುಖಂಡರಾದ ವೆಂಕಟೇಶ್ ಹೆಗಡೆ, ಸಂಗನಕಲ್ಲು ವಿಜಯಕುಮಾರ್ ಇದ್ದರು.