ಭಾರತೀಯ ಸೇನೆಯಿಂದ ನಿವೃತ್ತಿ -ಯೋಧರಿಗೆ ಸ್ವಾಗತ

ಮುದಗಲ್.ಜ.೦೪-ಪಟ್ಟಣಕ್ಕೆ ಬಂದ ಯೋಧರೊಬ್ಬರಿಗೆ ಪಟ್ಟಣದ ನಾಗರೀಕರು ಭರ್ಜರಿಯಾಗಿ ಪಟ್ಟಣದ ವಿವಿಧೆಡೆ ಮೆರೆವಣಿಗೆ ಮಾಡಿ ಸ್ವಾಗತಿಸಿ, ಸನ್ಮಾನಿಸಿ ಗೌರವಿಸಿದರು. ಲಿಂಗಸ್ಗೂರು ತಾಲೂಕಿನ ಮುದಗಲ್ (ಹಳೆಪೇಟೆ) ನಿವೃತ್ತ ಯೋಧ ಸೈಯದ್ ರಹೀಮಾನ್ ಅವರಿಗೆ ಸ್ವಾಗತ ಕೋರಿದ್ದಾರೆ. ಭಾರತೀಯ ಸೇನೆಯಲ್ಲಿ ಸುಮಾರು ೨೦ ವರ್ಷ ಸೇವೆ ಸಲ್ಲಿಸಿರುವ ಸೈಯದ್ ರಹೀಮಾನ್ ಅವರು ಸದ್ಯ ನಿವೃತ್ತಿ ಪಡೆದಿದ್ದಾರೆ.
ಜಮ್ಮು ಕಾಶ್ಮೀರನಲ್ಲಿ ಯೋಧನಾಗಿ ಇವರು ಸೇವೆ ಸಲ್ಲಿಸುತ್ತಿದ್ದರು. ಹೀಗಾಗಿ ಬಹುವರ್ಷಗಳ ಬಳಿಕ ಗ್ರಾಮಕ್ಕೆ ಆಗಮಿಸಿರುವ ವೀರ ಯೋಧ ಸೈಯದ್ ರಹೀಮಾನ್ ಅವರನ್ನು ಸನ್ಮಾನ ಹಾಗೂ ಮೆರವಣಿಗೆ ಮೂಲಕ ನಾಗರೀಕರು ಅದ್ಧೂರಿಯಾಗಿ ಸ್ವಾಗತ ಮಾಡಿದರು.
ಶಾಸಕರಿಂದ ಸನ್ಮಾನ: ಮುದಗಲ್‌ನ ನಿವೃತ್ತ ಯೋಧ ಸೈಯದ್ ರಹೀಮಾನ್ ಅವರಿಗೆ ಲಿಂಗಸ್ಗೂರ ಶಾಸಕ ಡಿಎಸ್ ಹುಲಗೇರಿ ಅವರು ರಾಷ್ಟ್ರ ಧ್ವಜ ನೀಡಿ ಸನ್ಮಾನಿಸಿ ಗೌರವಿಸಿದರು.
ಈ ಸಂದರ್ಭದಲ್ಲಿ ಪುರಸಭೆ ಮುಖ್ಯಾಧಿಕಾರಿ ಮರಿಲಿಂಗಪ್ಪ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ದೌವೂದ್,ಹಾಗೂ ಪಿ ಎಸ್ ಐ .ಶಾಜಾನ್ ಬೇಗಂ ಧರ್ಮ ಪತ್ನಿ. ಇದರು. ಪುರಸಭೆ ಸದಸ್ಯರಾದ ಅಜ್ಮೀರ್ ಬೆಳ್ಳಿಕಟ್ಟಿ, ಮಹಿಬೂಬ ಕಡ್ಡಿಪುಡಿ , ತಸ್ಮೀಮ್ ಮುಲ್ಲಾ, ಮಹಿಬೂಬ ಬಾರಿಗಿಡ, ಸಹೈದ್ ಸಾಬ ಹಳಪೇಟೆ, ಅಮೀರಬೇಗ ಉಸ್ತಾದ್, ಹಸನ್, ಮಾಜಿ ಉಪಾಧ್ಯಕ್ಷ ಮಹಿಬೂಬ, ರಫೀ ಹಳಪೇಟೆ, ಕೃಷ್ಣ ಚಲುವಾದಿ, ರಮೇಶ ಚಲುವಾದಿ, ಮುನ್ನ, ನಾಗರಾಜ್ ತಳವರ್, ಪುರಸಭೆ ಸಿಬ್ಬಂದಿ ವರ್ಗ ಸೇರಿದಂತೆ ಪಟ್ಟಣದ ಯುವಕರು ಇದ್ದರು