
ಸಂಜೆ ವಾಣಿ ವಾರ್ತೆ
ಕೊಟ್ಟೂರು, ಆ.11: ದೇಶ ಸೇವೆಯನ್ನು ಒಪ್ಪಿಕೊಳ್ಳುವ ಜೊತೆಗೆ ಅಪ್ಪಿಕೊಳ್ಳುವುದು ಅತ್ಯುತ್ತಮ ಸಾಧನೆ, ಈ ಸಾಧನೆಯನ್ನು ಇಲ್ಲಿನ ಡಿಫೆನ್ಸ್ ಅಕಾಡೆಮಿ ನಿರ್ದೇಶಕ, ಸೈನಿಕರಾದ ಕೊಟ್ರೇಶ ತಮ್ಮ ವೈಯುಕ್ತಿಕ ಜೀವನವನ್ನು ಲೆಕ್ಕಿಸದೇ ಸತತ ಪ್ರಯತ್ನದಿಂದ ಬಿಡುವಿಲ್ಲದೆ ದೇಶ ಸೇವೆ ಮಾಡಲು ಈ ಭಾಗದ ವಿದ್ಯಾರ್ಥಿಗಳನ್ನು ಕಳಿಸಿ ಕೊಡುವ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದಾರೆ ಎಂದು ಡಿಎಸ್ಎಸ್ ಜಿಲ್ಲಾಧ್ಯಕ್ಷ ಬದ್ದಿ ಮರಿಸ್ವಾಮಿ ತಿಳಿಸಿದರು.
ಪಟ್ಟಣದ ಶ್ರೀ ಗುರು ಕೊಟ್ಟೂರೇಶ್ವರ ಡಿಫೆನ್ಸ್ ಆಕಾಡೆಮಿಯ ಪ್ರಥಮ ಬ್ಯಾಚ್ ನಲ್ಲೆ 31 ವಿದ್ಯಾರ್ಥಿಗಳ ಪೈಕಿ ದೈಹಿಕ ಪರೀಕ್ಷೆಯಲ್ಲಿ 24 ವಿದ್ಯಾರ್ಥಿಗಳು ಬೆಂಗಳೂರ್ ಎ.ಆರ್.ಓ.ರ್ಯಾಲಿಯಲ್ಲಿ ಆಯ್ಕೆಯಾಗಿ, 21 ವಿದ್ಯಾರ್ಥಿಗಳು ಭಾರತೀಯ ಸೇನೆಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಅಭಿನಂದನಾ ಕಾರ್ಯಕ್ರಮ ಮತ್ತು ನವೋದಯ, ಸೈನಿಕ, ಮೊರಾರ್ಜಿ, ಆದರ್ಶ ಕಿತ್ತೂರಾಣಿ ಚೆನ್ನಮ್ಮ, ತರಬೇತಿಯ ಉದ್ಘಾಟನೆಯ ಸಂಭ್ರಮ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ದೇಶದ ಸೇವೆಗೆ ಈ ಅಕಾಡೆಮಿಯಲ್ಲಿ 21 ಅಭ್ಯರ್ಥಿ ಗಳು ಆಯ್ಕೆ ಆಗಿರುವುದು ಅತ್ಯಂತ ಸಂತೋಷದ ವಿಷಯವಾಗಿದೆ ಎಂದು ಹೇಳಿದರು.
ನಂತರ ಹರಪನಹಳ್ಳಿ ಶಿವಾನಂದ ಮಾತಾನಾಡಿ,
ಇಂಜಿನಿಯರ್ ವಿದ್ಯಾರ್ಥಿಯಾದ ಮನೋಜ್ ಕುಮಾರ್ ಪಾಂಡೆ ಆರ್ಮಿ ಸೇರಲು ಬಂದಾಗ ಅಲ್ಲಿನ ಅಧಿಕಾರಿ ಒಬ್ಬರು ಪ್ರಶ್ನೆ ಮಾಡುತ್ತಾರೆ ನಿನ್ನ ಪದವಿ ವೃತ್ತಿ ಬಿಟ್ಟು ಈ ವೃತ್ತಿ ಏಕೆ ಆಯ್ಕೆ ಮಾಡಿಕೊಂಡಿದೀಯ ಎಂದು ಕೇಳಿದಾಗ ಪರಮ ವೀರ ಚಕ್ರ ಪ್ರಶಸ್ತಿ ಪ್ರಧಾನ ಈ ವೃತ್ತಿಯಲ್ಲಿ ಬಿಟ್ಟು ಬೇರೆ ಯಾವ ವೃತ್ತಿಯಲ್ಲಿ ಇಲ್ಲ ಆದ ಕಾರಣ ಈ ವೃತ್ತಿ ಆಯ್ಕೆ ಮಾಡಿಕೊಂಡಿದ್ದೇನೆ ಎಂದು ಹೆಮ್ಮೆಯಿಂದ ಹೇಳುತ್ತಾನೆ, ಯುದ್ಧದಲ್ಲಿ ಆತ ಮರಣ ಹೊಂದಿದ ನಂತರ ಸರ್ಕಾರವು ಪರಮ ವೀರ ಚಕ್ರ ಪ್ರಶಸ್ತಿ ನೀಡಿ ಗೌರವಿಸಿದೆ, ಶ್ರೀ ಗುರು ಕೊಟ್ಟೂರೇಶ್ವರ ಅಕಾಡೆಮಿ ವತಿಯಿಂದ ಪ್ರಥಮ ಬ್ಯಾಚ್ ನಲ್ಲೆ 21 ಅಭ್ಯರ್ಥಿಗಳು ದೇಶ ಸೇವೆಗೆ ಆಯ್ಕೆ ಮಾಡಿರುವುದು ಸಾಧಾರಣ ವಿಚಾರವಲ್ಲ ಇದರ ಹಿಂದೆ ಕಠಿಣ ಪರಿಶ್ರಮ ವಹಿಸಿ ಅತ್ಯುತ್ತಮ ಸಾಧನೆ ಮಾಡಿದೆ ಹಾಗೂ ಸುತ್ತ ಮುತ್ತ ಭಾಗದ ವಿದ್ಯಾರ್ಥಿಗಳನ್ನು ದೇಶ ಸೇವೆ ಮಾಡಲು ಪ್ರೋತ್ಸಾಹಿಸುತ್ತಿರುವುದು ತುಂಬಾ ಸಂತೋಷದ ವಿಚಾರ ಎಂದರು.
ನಂತರ ಭಾರತೀಯ ಯೋಧ ಸಿದ್ದೇಶ್ ಮಾತನಾಡಿ ಸುತ್ತಮುತ್ತಲಿನ ವಿದ್ಯಾರ್ಥಿಗಳಿಗೆ ಜೀವನವನ್ನು ಕಟ್ಟಿಕೊಳ್ಳಲು ಡಿಫೆನ್ಸ್ ಅಕಾಡೆಮಿ ಶ್ರಮ ವಹಿಸುತ್ತಿದೆ, ಪ್ರತಿಯೊಬ್ಬ ತಂದೆ ತಾಯಿಯರು ಮಕ್ಕಳಿಗೆ ಪ್ರೋತ್ಸಾಹ ನೀಡಿ, ಅಗ್ನಿವೀರ ನಾಲ್ಕು ವರ್ಷ ಮಾತ್ರವಲ್ಲ, ನಮ್ಮ ಪ್ರಬಲವಾದ ಬುದ್ಧಿಯನ್ನು ತೋರಿಸಿದರೆ ಹಲವು ವರ್ಷಗಳವರೆಗೆ ಯೋಧರಿಗೆ ಕಾರ್ಯ ನಿರ್ವಹಿಸಬಹುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಶ್ರೀ ಗುರುಕೊಟ್ಟೂರೇಶ್ವರ ಡಿಫೆನ್ಸ್ ಅಕಾಡೆಮಿ ನಿರ್ದೇಶಕರಾದ ಯೋಧ ಕೊಟ್ರೇಶ್, ಕೊಟ್ಟೂರೇಶ್ವರ ದೇವಸ್ಥಾನದ ಪ್ರಧಾನ ಧರ್ಮಕರ್ತರಾದ ಸಿಎಚ್ಎಂ. ಗಂಗಾಧರ್, ಪಿಡಿಓ ಮಾರುತಿ, ಯೋಧ ಅರುಣ್ ಕುಮಾರ್, ಯೋಧ ಸಿದ್ದೇಶ್, ಮೋಹನ್, ಶಶಿಧರ್, ಅಜ್ಜಪ್ಪ, ಮನೋಹರ್ ಸ್ವಾಮಿ, ಪಿ. ಚಂದ್ರಶೇಖರ್, ಶಂಕ್ರಪ್ಪ, ಪೂಜಾರ್ ಅಜಯ್, ಮುಂತಾದವರು ಉಪಸ್ಥಿತರಿದ್ದರು
ಸೈನಿಕ ವೃತ್ತಿಗೆ ಆಯ್ಕೆಯಾದ ಅಭ್ಯರ್ಥಿಗಳು ತಮ್ಮ ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದ್ದರು ಹಾಗೂ ಆಯ್ಕೆಯಾದ ಅಭ್ಯರ್ಥಿಗಳಿಗೆ ಸನ್ಮಾನಿಸಿ ಅಭಿನಂದಿಸಲಾಯಿತು.