ಭಾರತೀಯ ಸಂಸ್ಕøತಿ ಮತ್ತು ಆಧ್ಯಾತ್ಮಿಕತೆಯ ಪ್ರತೀಕ ಸ್ವಾಮಿ ವಿವೇಕಾನಂದರು:ಸುರೇಶಗೌಡ ಬಿರಾದಾರ

ಸಂಜೆವಾಷಿ ವಾರ್ತೆ,
ವಿಜಯಪುರ,ಜ.13: ವಿವೇಕಾನಂದರ ಪ್ರಯತ್ನಗಳು ಭಾರತೀಯರಲ್ಲಿ ಹೆಮ್ಮೆ ಮತ್ತು ಆತ್ಮ ವಿಶ್ವಾಸವನ್ನು ತುಂಬಿವೆ. ಭಾರತೀಯ ಸಂಸ್ಕೃತಿ ಮತ್ತು ಆಧ್ಯಾತ್ಮಿಕತೆಯ ಪುನರುಜ್ಜೀವನಕ್ಕೆ ದಾರಿ ಮಾಡಿಕೊಟ್ಟಿವೆ ಎಂದು ಶಾಲಾ ಮುಖ್ಯ ಶಿಕ್ಷಕ ಸುರೇಶಗೌಡ ಬಿರಾದಾರ ಹೇಳಿದರು.
ತಾಲೂಕಿನ ನಾಗಠಾಣ ಗ್ರಾಮದ ಶ್ರೀ ಮಲ್ಲಿಕಾರ್ಜುನ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜರುಗಿದ ಸ್ವಾಮಿ ವಿವೇಕಾನಂದರ ಜಯಂತಿ ಆಚರಣೆಗೆ ಚಾಲನೆ ನೀಡಿ ಮಾತನಾಡಿದರು.
ಸ್ವಾಮಿ ವಿವೇಕಾನಂದರು ಯುವಕರ ಸಾಮಥ್ರ್ಯ ಮತ್ತು ಶಕ್ತಿಯನ್ನು ದೃಢವಾಗಿ ನಂಬಿದ್ದರು. ಯುವಕರು ಸಮಾಜದ ಪರಿವರ್ತನೆಗೆ ಪ್ರೇರಕ ಶಕ್ತಿ ಎಂದು ತಿಳಿದು, ಯುವ ಮನಸ್ಸುಗಳ ಸುಪ್ತ ಶಕ್ತಿ ಮತ್ತು ಪ್ರತಿಭೆಯನ್ನು ಜಾಗೃತಗೊಳಿಸುವಲ್ಲಿ ವಿವೇಕಾನಂದರ ಪಾತ್ರ ಅನನ್ಯ ಎಂದು ಹೇಳಿದರು.
ಶಿಕ್ಷಕಿ ರೂಪಾ ಶಹಾಪುರ ಮಾತನಾಡಿ, ಭಾರತ ಅಷ್ಟೇ ಅಲ್ಲದೇ ಪ್ರಪಂಚದ ಇತರೆ ದೇಶಗಳಿಗೂ ಸಹ ವಿವೇಕರ ತತ್ವಗಳು, ಬದುಕಿದ ಹಾದಿ, ಯುವ ಜನತೆಗೆ ನೀಡಿದ ಸ್ಫೂರ್ತಿ ಆದರ್ಶವಾಗಿದೆ. ಅವರು ಎಂದೆಂದಿಗೂ ಪ್ರಪಂಚದ ಆಧ್ಯಾತ್ಮಿಕ ಗುರು. ಆದರ್ಶ ವ್ಯಕ್ತಿಯಾಗಿದ್ದಾರೆ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಸಂಸ್ಥೆಯ ಅಧ್ಯಕ್ಷ ಶಂಕರ ಹುಣಶ್ಯಾಳ, ವಿವೇಕಾನಂದರು ಯುವಜನತೆಗೆ ನೀಡಿದ ಕರೆ ‘ಏಳಿ.. ಎದ್ದೇಳಿ, ಗುರಿ ಮುಟ್ಟುವ ತನಕ ನಿಲ್ಲದಿರಿ’ ಎಂಬುದು ಸರ್ವಕಾಲಕ್ಕೂ ನೆನೆಯುವ, ಯುವಕರನ್ನು ಒಳ್ಳೆಯ ಕೆಲಸಗಳಿಗೆ ಬಡಿದೆಚ್ಚರ ಮಾಡುವ ವಾಕ್ಯವಾಗಿದೆ ಎಂದರು.
ಸಂಸ್ಥೆಯ ಕಾರ್ಯದರ್ಶಿ ಸುನಂದಾ ಹುಣಶ್ಯಾಳ,
ಶಿಕ್ಷಕರಾದ ಎಂ.ಎಸ್. ಪಾಪನಾಳಮಠ, ಭೀಮಾಶಂಕರ ಕೋರೆ, ವೀರೇಶ ಹುಣಶ್ಯಾಳ, ಜಯಶ್ರೀ ಬಂಗಾರಿ, ಬಸಮ್ಮ ವಡಗೇರಿ, ಮಧುಮತಿ ನಿಕ್ಕಂ, ಸರೋಜಿನಿ ಕಟ್ಟಿಮನಿ, ಲಕ್ಷ್ಮೀ ಮೇತ್ರಿ, ರೇಣುಕಾ ಭಜಂತ್ರಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.