ಬೀದರ್: ಜು.8:ಭಾರತೀಯ ಸಂಸ್ಕøತಿ ಅಳವಡಿಕೆಗೆ ಇಡೀ ಜಗತ್ತು ಉತ್ಸುಕವಾಗಿದೆ ಎಂದು ಗುಲಬರ್ಗಾ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯೆ ಪ್ರತಿಭಾ ಚಾಮಾ ನುಡಿದರು.
ನಗರದ ಬಿ.ವಿ.ಬಿ. ಕಾಲೇಜು ರಸ್ತೆಯಲ್ಲಿನ ರಾಣಿ ಕಿತ್ತೂರು ಚೆನ್ನಮ್ಮ ವೃತ್ತದಲ್ಲಿ ಇರುವ ಮಹಾಲಕ್ಷ್ಮಿ ಸಭಾಂಗಣದಲ್ಲಿ ಅಖಿಲ ಭಾರತೀಯ ಸಾಹಿತ್ಯ ಪರಿಷದ್ ಹಾಗೂ ನಾಟ್ಯಶ್ರೀ ನೃತ್ಯಾಲಯ ವತಿಯಿಂದ ಆಯೋಜಿಸಿದ್ದ ಉಪನ್ಯಾಸ ಹಾಗೂ ಸಾಂಸ್ಕøತಿಕ ಕಾರ್ಯಕ್ರಮದಲ್ಲಿ ‘ಭಾರತೀಯ ಸಂಸ್ಕøತಿಯಿಂದ ಬಲಿಷ್ಠ ಭಾರತ’ ಕುರಿತು ಅವರು ವಿಶೇಷ ಉಪನ್ಯಾಸ ನೀಡಿದರು.
ಜಾಗತಿಕ ಮಟ್ಟದಲ್ಲಿ ಭಾರತ ಶ್ರೇಷ್ಠ ಭಾರತವೆನಿಸಿಕೊಳ್ಳುತ್ತಿದೆ. ಇದರಲ್ಲಿ ಭಾರತೀಯರ ಜ್ಞಾನ, ಸಂಸ್ಕøತಿ, ಸಂಪ್ರದಾಯ, ಔದರ್ಯಗಳೆಲ್ಲದರ ಪಾತ್ರವೂ ಇದೆ ಎಂದು ಹೇಳಿದರು.
ಭಾರತ ಕೋವಿಡ್ ಮಹಾಮಾರಿಯನ್ನು ಅತ್ಯಂತ ಸಮರ್ಥವಾಗಿ ನಿಯಂತ್ರಿಸಿದ್ದಕ್ಕೆ ವಿಶ್ವದ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ.
ಕೋವಿಡ್‍ನ ಸಂದಿಗ್ಧ ಪರಿಸ್ಥಿತಿಯಲ್ಲಿ ಭಾರತ ತನ್ನ ಪ್ರಜೆಗಳನ್ನು ರಕ್ಷಿಸಿಕೊಳ್ಳುವ ಜತೆಗೆ ಅನೇಕ ರಾಷ್ಟ್ರಗಳಿಗೆ ಲಸಿಕೆ ಉಚಿತವಾಗಿ ಪೂರೈಸಿ ಮಾನವೀಯತೆ ಮೆರೆದಿತ್ತು ಎಂದರು.
ಉದ್ಘಾಟನೆ ನೆರವೇರಿಸಿದ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯ ಉಪಾಧ್ಯಕ್ಷ ರಾಜೇಂದ್ರಕುಮಾರ ಗಂದಗೆ ಮಾತನಾಡಿ, ಪರಿಷದ್ ವಿವಿಧ ಕಾರ್ಯಕ್ರಮಗಳ ಮೂಲಕ ಜನರಲ್ಲಿ ಸಾಹಿತ್ಯ, ಕಲೆ ಆಸಕ್ತಿ ಬೆಳೆಸುತ್ತಿದೆ. ಪರಿಷತ್‍ನ ಚಟುವಟಿಕೆಗಳಿಗೆ ತಮ್ಮ ಸಹಕಾರ ಸದಾ ಇರಲಿದೆ ಎಂದು ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ಅಖಿಲ ಭಾರತೀಯ ಸಾಹಿತ್ಯ ಪರಿಷದ್ ಬೀದರ್ ಘಟಕದ ಅಧ್ಯಕ್ಷೆ ರಾಣಿ ಸತ್ಯಮೂರ್ತಿ ಮಾತನಾಡಿ, ಭಾರತೀಯ ಸಾಹಿತ್ಯ, ಕಲೆ, ಸಂಸ್ಕøತಿ ವಿಶ್ವದಲ್ಲೇ ಶ್ರೇಷ್ಠವಾಗಿವೆ. ಸಾಹಿತ್ಯ ಅಧ್ಯಯನ, ಕಲಾ ಪ್ರದರ್ಶನ ವೀಕ್ಷಣೆ ಹಾಗೂ ಸಂಗೀತ ಆಲಿಕೆಯು ಮನಸ್ಸಿಗೆ ನೆಮ್ಮದಿ ಉಂಟು ಮಾಡುತ್ತವೆ. ಮನುಷ್ಯನಿಗೆ ಹೊಸ ಹುಮ್ಮಸ್ಸು, ಪ್ರೇರಣೆ ನೀಡುತ್ತವೆ ಎಂದು ಹೇಳಿದರು.
ಪರಿಷದ್ ಗೌರವ ಸಲಹೆಗಾರ ಪ್ರೊ.ಶಿವಕುಮಾರ ಉಪ್ಪೆ ಆಶಯ ನುಡಿ ಆಡಿದರು. ಸಾಮಾಜಿಕ ಕ್ಷೇತ್ರಕ್ಕೆ ನೀಡಿದ ಕೊಡುಗೆಗಾಗಿ ಪ್ರಧಾನ ಅಂಚೆ ಪಾಲಕಿ ಮಂಗಲಾ ಭಾಗವತ್ ಹಾಗೂ ಅಖಿಲ ಭಾರತೀಯ ಸಾಹಿತ್ಯ ಪರಿಷದ್‍ನ ಕಲಬುರಗಿ ವಿಭಾಗ ಸಂಯೋಜಕರಾಗಿ ನೇಮಕಗೊಂಡ ಪ್ರಯುಕ್ತ ಕೆ. ಸತ್ಯಮೂರ್ತಿ ಅವರಿಗೆ ವಿಶೇಷ ಸನ್ಮಾನ ಮಾಡಲಾಯಿತು.
ನಾಟ್ಯಶ್ರೀ ನೃತ್ಯಾಲಯದ ವಿದ್ಯಾರ್ಥಿಗಳು ಪ್ರದರ್ಶಿಸಿದ ವಿವಿಧ ಆಕರ್ಷಕ ನೃತ್ಯಗಳು ಸಭಿಕರ ಮನಸೂರೆಗೊಂಡವು. ಸ್ವರೂಪರಾಣಿ ನಾಗೂರೆ ನಿರೂಪಿಸಿದರು. ಪ್ರೊ.ಉಮಾಕಾಂತ ಮೀಸೆ ಸ್ವಾಗತಿಸಿದರು. ನಾಗೇಶ ಸ್ವಾಮಿ ವಂದಿಸಿದರು.