ಭಾರತೀಯ ಸಂಸ್ಕøತಿಯ ಸಂಕೇತವಾಗಿರುವ ಯುಗಾದಿ

ವಿಜಯಪುರ:ಮಾ.30: ಭಾರತೀಯ ಸಂಸ್ಕøತಿಯ ಸಂಕೇತವಾಗಿರುವ ಯುಗಾದಿ ನಮ್ಮೆಲ್ಲರಿಗೂ ಹೆಮ್ಮೆಯ ಹಬ್ಬವಾಗಿದ್ದು, ಹೊಸತನದ ಪ್ರತೀಕವಾಗಿದೆ ನಾವೆಲ್ಲರೂ ಬೇವು ಬೆಲ್ಲದಂತೆ ಸಮನಾಗಿ ಜೀವನ ಸಾಗಿಸೋಣ ಎಂದು ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘದ ಜಿಲ್ಲಾಧ್ಯಕ್ಷೆ ಎ ಬಿ ನಾಯಿಕ ಹೇಳಿದರು.

ನಗರದಲ್ಲಿ ಹಮ್ಮಿಕೊಂಡ ಯುಗಾದಿ ಸಂಭ್ರಮ ಹಾಗೂ ಅಭಿನಂದನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕಳೆದ ಹಲವಾರು ವರ್ಷಗಳಿಂದ ಜಿಲ್ಲೆಯಾದ್ಯಂತ ಉತ್ತಮ ರೀತಿಯಲ್ಲಿ ಸಂಘ ರಚಿಸಿ ಕ್ರೀಯಾಶೀಲರಾಗಿ ಕೆಲಸ ನಿರ್ವಹಿಸುತ್ತಿದ್ದೇವೆ. ಇಂತಹ ಹತ್ತು ಹಲವಾರು ಕಾರ್ಯಕ್ರಮಗಳು ಆಯೋಜಿಸುವುದರ ಮೂಲಕ ಸಂಘ ಬಲವರ್ಧನೆಯಲ್ಲಿ ತೊಡಗಿದ್ದೇವೆ. ಪ್ರತಿಯೊಂದು ಹಂತದಲ್ಲಿ ನಾವೆಲ್ಲ ಒಕ್ಕಟ್ಟಾಗಿ ಕಾರ್ಯ ನಿರ್ವಹಿಸಿ ರಾಜ್ಯದಲ್ಲಿಯೇ ಮಾದರಿ ಸಂಘ ನಿರ್ಮಾಣಕ್ಕೆ ಪಣ ತೊಡಲಾಗಿದೆ. ಪ್ರತಿಯೊಬ್ಬರ ಸಹಕಾರ ಅಗತ್ಯ ಎಂದರು.

ಶಿಕ್ಷಕರ ಸಂಘದ ಜಿಲ್ಲಾ ಮಾಜಿ ಕಾರ್ಯದರ್ಶಿ ಜಗದೀಶ ಬೋಳಸೂರ ಮಾತನಾಡಿ, ಜಿಲ್ಲೆಯಲ್ಲಿ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘ ಉತ್ತಮ ರೀತಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದು, ಇದಕ್ಕೆ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮವೇ ಸಾಕ್ಷಿಯಾಗಿದೆ. ಕಳೆದ ಹಲವಾರು ವರ್ಷಗಳಿಂದ ಇಡೀ ಜಿಲ್ಲೆಯಾದ್ಯಂತ ಘಟಕಗಳನ್ನು ಮಾಡಿಕೊಂಡು ಕ್ರೀಯಾಶೀಲರಾಗಿ ಮಾಡುತ್ತಿರುವುದು ಹೆಮ್ಮೆಯಾಗಿದೆ. ನಿಮ್ಮ ಸಂಘದ ಕಾರ್ಯ ಚಟುವಟಿಕೆಗಳಲ್ಲಿ ಪ್ರತಿಯೊಂದರಲ್ಲೂ ಸಹಕಾರ ನೀಡಲಾಗುವುದು ಎಂದರು.

ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘದ ನಗರ ಘಟಕದ ಅಧ್ಯಕ್ಷೆ ಕೆ ಸುನಂದಾ ಹಾಗೂ ಶಿಕ್ಷಕ ಕಬೂಲ್ ಕೊಕಟನೂರ ಮಾತನಾಡಿ, ಸಂಘ ಬಲವರ್ಧನೆ ಕೇವಲ ಒಬ್ಬರಿಂದ ಸಾಧ್ಯವಿಲ್ಲ ಪ್ರತಿಯೊಬ್ಬರೂ ಕೈ ಜೋಡಿಸಿ ಸಮಾಜಮುಖಿ ಕಾರ್ಯ ಮಾಡುವುದರ ಜೊತೆಗೆ ಉತ್ತಮ ಕಾರ್ಯಕ್ರಮಗಳನ್ನು ಸಂಘಟಿಸುವ ಮೂಲಕ ಮುಂದೆ ಬರಬೇಕು. ಈ ನಿಟ್ಟಿನಲ್ಲಿ ಸದಾ ಚಿಂತನಶೀಲರಾಗಿರಬೇಕು ಎಂದರು.

ಇದೇ ಸಂದರ್ಭದಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಯಶಸ್ವಿಗೆ ಸಹಕಾರ ನೀಡಿದವರನ್ನು ಸನ್ಮಾನಿಸಿ ಅಭಿನಂದಿಸಿ, ಯುಗಾದಿ ಸಂಭ್ರಮ ನಿಮಿತ್ಯ ಬೇವು ಬೆಲ್ಲ ಸವಿದು ಸಂಭ್ರಮಿಸಲಾಯಿತು.

ಕಾರ್ಯಮದಲ್ಲಿ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘದ ಜಿಲ್ಲಾ ಉಪಾಧ್ಯಕ್ಷೆ ಮೀನಾಕ್ಷಿ ಕತ್ನಳ್ಳಿ, ಕಾಯರ್ಯದರ್ಶಿ ಕವಿತಾ ಕಲ್ಯಾಣಪ್ಪಗೋಳ, ರೇವತಿ ಬೂದಿಹಾಳ, ಶೋಭಾ ಮೆಡೆಗಾರ, ಭಾರತಮಾತಾ ಗುಜುರೆ, ಹಣಮಂತ ಬೂದಿಹಾಳ, ಜ್ಯೋತಿ ಹಿಪ್ಪರಗಿ, ಲಕ್ಷ್ಮೀ ತೊರವಿ, ಭಾರತಿ ಹೊನಕೇರಿ ಸೇರಿದಂತೆ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘದ ಪದಾಧಿಕಾರಿಗಳು, ಶಿಕ್ಷಕರು, ಶಿಕ್ಷಕಿಯರು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.