ಭಾರತೀಯ ಶಿಶು ಕೇಂದ್ರ ಕಾರ್ಯಕಾರಿ ಸದಸ್ಯರಾಗಿ ಡಾ.ಮಲ್ಲೇಶಗೌಡ

ರಾಯಚೂರು.ನ.07- ರಾಯಚೂರು ಭಾರತೀಯ ಶಿಶು ಕೇಂದ್ರ ಕಾರ್ಯಕಾರಿ ಮಂಡಳಿಯ ಸದಸ್ಯರಾಗಿ ಗೌರಿ ಶಂಕರ ಹಾಗೂ ನ್ಯೂ ಅಮೃತ ಮಕ್ಕಳ ಆಸ್ಪತ್ರೆಯ ಡಾ.ಜಿ.ಎಸ್.ಮಲ್ಲೇಶಗೌಡ ಆಯ್ಕೆಯಾಗಿದ್ದಾರೆ.
ಕಳೆದ ಒಂದು ತಿಂಗಳಿಂದ ಆನ್ ಲೈನ್ ಮುಖಾಂತರ ನಡೆದ ಚುನಾವಣೆಯಲ್ಲಿ ಡಾ.ಜಿ.ಎಸ್. ಮಲ್ಲೇಶಗೌಡ ಚುನಾಯಿತರಾಗಿದ್ದಾರೆಂದು ಜಿಲ್ಲಾ ಮಕ್ಕಳ ಸಂಘದ ಅಧ್ಯಕ್ಷ ಡಾ.ರವಿ ಮಾನವಿ ಮತ್ತು ಮಕ್ಕಳ ತಜ್ಞ ಡಾ.ಶಿವರಾಜ ಪಾಟೀಲ್ ಸಿಂಧನೂರು ಅವರು ಜಂಟಿಯಾಗಿ ತಿಳಿಸಿದ್ದಾರೆ.
ಕಳೆದ ಒಂದು ತಿಂಗಳಿಂದ ಆನ್ ಲೈನ್ ಮುಖಾಂತರ ನಡೆದ ಚುನಾವಣೆಯಲ್ಲಿ ಡಾ.ಜಿ.ಎಸ್.ಮಲ್ಲೇಶಗೌಡರು ಚುನಾಯಿತರಾಗಿದ್ದಾರೆ. ಕರ್ನಾಟಕ ರಾಜ್ಯ ಶಿಶು ವೈದ್ಯಕೀಯ ಸಂಘ 3500 ಮಕ್ಕಳ ತಜ್ಞರ ಸದಸ್ಯರಿರುವ ಮತದಾನ ಹೊಂದಿದ್ದು, ಅತ್ಯಧಿಕ ಮತಗಳಿಂದ ಆಯ್ಕೆಯಾಗಿದ್ದಾರೆ. ಕಳೆದ ಇಪ್ಪತ್ತು ವರ್ಷಗಳಿಂದ ಕೇವಲ ಬೆಂಗಳೂರು ಮತ್ತು ಮೈಸೂರು ಪ್ರಾಂತದಿಂದ ಮಾತ್ರ ಆಯ್ಕೆಯಾಗುತ್ತಿದ್ದರು. ಆದರೆ, ಈ ಬಾರಿ ಹಿಂದುಳಿದ ಭಾಗವಾದ ರಾಯಚೂರು ಜಿಲ್ಲೆಯಿಂದ ಪ್ರತಿನಿಧಿಯೊಬ್ಬರು ಆಯ್ಕೆಯಾಗಿರುವುದು ವಿಶೇಷವಾಗಿದೆ. ಡಾ.ಮಲ್ಲೇಶ್ ಗೌಡ ಅವರ ಆಯ್ಕೆ ಈ ಭಾಗದ ಮಕ್ಕಳ ಸಮಸ್ಯೆಗಳನ್ನು ಕೇಂದ್ರೀಯ ಮಟ್ಟದಲ್ಲಿ ಬಿಂಬಿಸಲು ಸಹಾಯವಾಗಲಿದೆಂದು ಜಿಲ್ಲಾ ಮಕ್ಕಳ ತಜ್ಞ ವೈದ್ಯರ ಸಂಘದ ಅಧ್ಯಕ್ಷರಾದ ಡಾ.ರವಿ, ಹಿರಿಯ ಮಕ್ಕಳ ತಜ್ಞ ವೈದ್ಯರಾದ ಡಾ.ಮಂಜುನಾಥ ಮತ್ತು ಡಾ.ಶಿವರಾಜ ಪಾಟೀಲ್ ಸಿಂಧನೂರು ಆಶಾಭಾವನೆ ವ್ಯಕ್ತಪಡಿಸಿದ್ದಾರೆ. ಇವರ ಆಯ್ಕೆಗೆ ಕಾರಣೀಭೂತರಾದ ಸಮಸ್ತ ಕರ್ನಾಟಕ ಮಕ್ಕಳ ತಜ್ಞರ ಸಂಘದ ಮತದಾರರಿಗೆ ಮತ್ತು ಹಿತೈಷಿಗಳಿಗೆ ಡಾ.ಜಿ.ಎಸ್.ಮಲ್ಲೇಶ ಗೌಡರ ಅವರು ಕೃತಜ್ಞತೆ ತಿಳಿಸಿದ್ದಾರೆ.