ಭಾರತೀಯ ವೈದ್ಯಕೀಯ ಸಂಘದ ಪದಾಧಿಕಾರಿಗಳ

ಅಧ್ಯಕ್ಷರು ಡಾ.ರಾಮಪ್ಪ, ಕಾರ್ಯದರ್ಶಿ ಡಾ.ಭಾಲ್ಕಿ
ರಾಯಚೂರು.ಡಿ.೨೮- ಭಾರತೀಯ ವೈದ್ಯಕೀಯ ಸಂಘ ರಾಯಚೂರು ಶಾಖೆಯ ಅಧ್ಯಕ್ಷರಾಗಿ ಡಾ.ಕೆ.ರಾಮಪ್ಪ ಮತ್ತು ಕಾರ್ಯದರ್ಶಿಗಳಾಗಿ ಡಾ.ನಾಗರಾಜ್ ಭಾಲ್ಕಿ ಅವರು ಅವಿರೋಧವಾಗಿ ಆಯ್ಕೆಗೊಂಡಿದ್ದಾರೆ.
ನಿನ್ನೆ ನಡೆದ ಅಧ್ಯಕ್ಷ-ಉಪಾಧ್ಯಕ್ಷ ಮತ್ತು ಪದಾಧಿಕಾರಿಗಳ ಚುನಾವಣೆಯಲ್ಲಿ ಸರ್ವಾನುಮತದಿಂದ ಐಎಂಎ ರಾಯಚೂರು ಶಾಖೆಯ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಅಧ್ಯಕ್ಷ ಸ್ಥಾನಕ್ಕೆ ಡಾ.ಕೆ.ರಾಮಪ್ಪ, ಕಾರ್ಯದರ್ಶಿ ಸ್ಥಾನಕ್ಕೆ ಡಾ.ನಾಗರಾಜ್ ಭಾಲ್ಕಿ ಹಾಗೂ ಉಪಾಧ್ಯಕ್ಷರಾಗಿ ಡಾ.ಅರವಿಂದ್ ಸಂಗಾವಿ, ಜಂಟಿ ಕಾರ್ಯದರ್ಶಿಯಾಗಿ ಡಾ.ಅಭಿಷೇಕ್ ಪಾಟೇಲ್, ಖಜಾಂಚಿಯಾಗಿ ಡಾ.ಸಿದ್ದರೂಢ ಬಸವರಾಜ್ ಭದ್ರಣ್ಣನವರ್ ಅವರನ್ನು ಆಯ್ಕೆ ಮಾಡಲಾಯಿತು.
ಆಯ್ಕೆ ನಂತರ ನೂತನ ಅಧ್ಯಕ್ಷರಾದ ಡಾ.ಕೆ.ರಾಮಪ್ಪ ಮತ್ತು ಕಾರ್ಯದರ್ಶಿಗಳಾದ ಡಾ.ನಾಗರಾಜ್ ಭಾಲ್ಕಿ ಅವರು ಮಾತನಾಡಿ, ಮುಂಬರುವ ದಿನಗಳಲ್ಲಿ ಐಎಂಎ ಅಭಿವೃದ್ಧಿ ಪೂರಕವಾಗಿ ಕಾರ್ಯನಿರ್ವಹಿಸುವುದರೊಂದಿಗೆ ವೈದ್ಯರು ಮತ್ತು ಜನರ ಮಧ್ಯೆ ಬಾಂಧವ್ಯ ಮತ್ತಷ್ಟು ವೃದ್ದಿಸುವ ಕಾರ್ಯ ನಿರ್ವಹಿಸುವ ಮೂಲಕ ನೂತನ ಸಮಿತಿ ಗಮನ ಹರಿಸಲಾಗುತ್ತೆಂದು ಹೇಳಿದರು.