ಭಾರತೀಯ ವೈದ್ಯಕೀಯ ಸಂಘದಿಂದ ಕೋವಿಡ್ ಸೆಂಟರ್

ಹಗರಿಬೊಮ್ಮನಹಳ್ಳಿ.ಮೇ.೨೦- ತಾಲೂಕಿನ ಭಾರತೀಯ ವೈದ್ಯಕೀಯ ಸಂಘ (ಐಎಂಎ) ದಿಂದ ಪಟ್ಟಣದ ಹರ ಕಲ್ಯಾಣ ಮಂಟಪದಲ್ಲಿ ಕೋವಿಡ್ ಕೇರ್ ಸೆಂಟರ್ ನಿರ್ಮಾಣ ಮಾಡಲಾಯಿತು.
ತಾಲೂಕಿನ ಎಲ್ಲಾ ಖಾಸಗಿ ವೈದ್ಯರು ಸ್ವಯಂಪ್ರೇರಿತವಾಗಿ ಪಟ್ಟಣದ ಕೆಲ ದಾನಿಗಳ ಸಹಕಾರದಿಂದ ಆಕ್ಸಿಜನ್ ಸಹಿತ ಹಾಗೂ ಆಕ್ಸಿಜನ್ ರಹಿತವಾಗಿ ಬೆಡ್ ಗಳನ್ನು ವ್ಯವಸ್ಥೆ ಮಾಡಿ ತಾಲೂಕಾಡಳಿತ ಹಾಗೂ ಆರೋಗ್ಯ ಇಲಾಖೆಗೆ ಶಕ್ತಿ ತುಂಬಿದ್ದಾರೆ. ತಾಲೂಕಿನ ಜನತೆ ಸದುಪಯೋಗ ಪಡಿಸಿಕೊಳ್ಳಲು ಮನವಿ. .10 ಆಕ್ಷಿಜನ್ ಬೆಡ್, 15 ಕೇರ್ ಬೆಡ್, 15 ಸಾಮನ್ಯ ಬೆಡ್ ಗಳ ವ್ಯವಸ್ಥೆ ಮಾಡಿದ್ದು. ಇದರ ಶುಭರಾಂಭದಲ್ಲಿ ಡಾ|| ಎ.ಎಂ.ಎ. ಕರಿಬಸಯ್ಯ, ಅಧ್ಯಕ್ಷರು , ವೈದ್ಯಕೀಯ ಸಂಘ, ಡಾ|| ಬಂಡ್ರಿ ವಿಶ್ವನಾಥ, ಡಾ|| ದೇಸಾಯಿ, ಡಾ||ಮನೋಜ್. ಡಾ|| ಶ್ರೀನಿವಾಸ್, ಮಕ್ಕಳ ತಜ್ಞರು, ಡಾ|| ಪ್ರಮೋದ, ಡಾ|| ಅಜಯ್, ಡಾ|| ವಿನಯ್ , ದಂತ ವೈದ್ಯರು, ಬಾದಾಮಿ ಕರಿಬಸವರಾಜ, ವಿವಿ ಸಂಘ, ಕೇಶವ ರೆಡ್ಡಿ, ಗುತ್ತಿಗರದಾರರು, ಅಂಬಾಡಿ ನಾಗರಾಜ, ಮಾಜಿ ಅಧ್ಯಕ್ಷರು ರೋಟರಿ ಕ್ಲಬ್, ಮತ್ತು ಶೃಶೂಕ , ಶೃಶೂಕಿಯರು ಭಾಗವಹಿಸಿದ್ದರು.