ಭಾರತೀಯ ವಾಯುಪಡೆಗೆ ಮತ್ತೆ 3 ರಫೇಲ್ ಯುದ್ಧ ವಿಮಾನಗಳ ಸೇರ್ಪಡೆ

ನವದೆಹಲಿ, ನ. ೪- ಭಾರತೀಯ ವಾಯುಸೇನೆಗೆ ಇಂದು ರಫೆಲ್ ಯುದ್ಧ ವಿಮಾನಗಳ ಮತ್ತೊಂದು ತಂಡ ಸೇರ್ಪಡೆಯಾಗಲಿದ್ದು ಇದರಿಂದ ವಾಯುಪಡೆಯ ಬಲ ಮತ್ತಷ್ಟು ಹೆಚ್ಚಾಗಲಿದೆ.

ಫ್ರಾನ್ಸ್ ನಿಂದ ನೇರವಾಗಿ ಇಂದು ಗುಜರಾತ್ ನಲ್ಲಿರುವ ಜಾಮ್ನಗರ್ ವಾಯುನೆಲೆ ಗೆ ಎರಡನೇ ತಂಡದಲ್ಲಿ ೩ ರಫೆಲ್ ಯುದ್ಧ ವಿಮಾನಗಳು ಭಾರತೀಯ ವಾಯುಪಡೆಗೆ ವಿದ್ಯುಕ್ತವಾಗಿ ಸೇರ್ಪಡೆಯಾಗಲಿವೆ.

ಫ್ರಾನ್ಸ್ ನಿಂದ ೩೬ ಅತ್ಯಾಧುನಿಕ ರಫೆಲ್ ಯುದ್ಧ ವಿಮಾನಗಳ ಖರೀದಿಗೆ ಭಾರತ ಆ ದೇಶದೊಂದಿಗೆ ಈಗಾಗಲೇ ಒಪ್ಪಂದ ಮಾಡಿಕೊಂಡಿದೆ . ಈ ಪೈಕಿ ಮೊದಲ ತಂಡದಲ್ಲಿ ೫ ರಫೆಲ್ ಯುದ್ಧ ವಿಮಾನಗಳು ಅಂಬಾಲ ವಾಯುನೆಲೆಗೆ ಜುಲೈ ೨೯ ರಂದು ತಲುಪಿವೆ.

ಸೆಪ್ಟೆಂಬರ್ ಹತ್ತರಂದು ಈ ಐದು ರಫೆಲ್ ಯುದ್ಧ ವಿಮಾನಗಳನ್ನು ಭಾರತೀಯ ವಾಯುಪಡೆಗೆ ವಿದ್ಯುಕ್ತವಾಗಿ ಸೇರ್ಪಡೆ ಮಾಡಿಕೊಳ್ಳಲಾಗಿದೆ. ೫ ಯುದ್ಧವಿಮಾನಗಳು ಅಬುದಾಬಿ ಸಮೀಪದ ಅಲ್ ದಾ ಫ್ರಾ ವಾಯುನೆಲೆಯಲ್ಲಿ ಇಳಿದಿದ್ದವು. ಆನಂತರ ಭಾರತೀಯ ವಾಯುಪಡೆಗೆ ಸೇರ್ಪಡೆ ಮಾಡಿಕೊಳ್ಳಲಾಯಿತು.

ಆದರೆ ಎರಡನೇ ತಂಡದ ರಫೇಲ್ ಯುದ್ಧ ವಿಮಾನಗಳು ನೇರವಾಗಿ ಜಾಮ್ ನಗರಕ್ಕೆ ಬಂದಿದಿಯ ಲಿವೆ. ಒಂದು ದಿನದ ನಂತರ ಅಂಬಾ ಲಕ್ಕಿ ತಲುಪಲಿವೆ. ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಹೆಚ್ಚಿನ ಸಂಖ್ಯೆಯಲ್ಲಿ ಯುದ್ಧವಿಮಾನಗಳು ಭಾರತೀಯ ವಾಯುಪಡೆಗೆ ಸೇರ್ಪಡೆ ಯಾಗುತ್ತಿರುವುದರಿಂದ ಇದರ ಸಾಮರ್ಥ್ಯವು ಮತ್ತಷ್ಟು ಹೆಚ್ಚಾಗಲಿದೆ. ನೆರೆರಾಷ್ಟ್ರಗಳಾದ ಜೈನ ಮತ್ತು ಪಾಕಿಸ್ತಾನದ ಉಪಟಳ ಎದುರಿಸಲು ಅತ್ಯಾಧುನಿಕ ಯುದ್ಧ ವಿಮಾನಗಳು ಸಹಕಾರಿಯಾಗಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

೩೬ ರಫೆಲ್ ಯುದ್ಧ ವಿಮಾನಗಳ ಬಗ್ಗೆ ಮೂರು ಅಥವಾ ೪ ರಫೇಲ್ ಯುದ್ಧ ವಿಮಾನಗಳು ಪ್ರತಿ ಎರಡು ತಿಂಗಳಿಗೊಮ್ಮೆ ಭಾರತೀಯ ವಾಯುಪಡೆಗೆ ಸೇರ್ಪಡೆಯಾಗುವ ನಿರೀಕ್ಷೆ ಇದೆ. ಈ ವರ್ಷಾಂತ್ಯಕ್ಕೆ ಎಲ್ಲಾ ಯುದ್ಧ ವಿಮಾನಗಳು ವಾಯುಪಡೆಗೆ ಸೇರ್ಪಡೆ ಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.

೨೩ ವರ್ಷಗಳ ನಂತರ ರಫೇಲ್ ಯುದ್ಧ ವಿಮಾನಗಳು ಭಾರತೀಯ ವಾಯುಪಡೆಗೆ ಸೇರ್ಪಡೆಯಾಗಿವೆ. ೧೯೯೭ರ ಜೂನ್ ತಿಂಗಳಲ್ಲಿ ರಷ್ಯಾದ ಸುಕೊಯ್ ೩೦ ಯುದ್ಧ ವಿಮಾನಗಳನ್ನು ಖರೀದಿಸಲು ಉದ್ದೇಶಿಸಿ ಲಾಗಿತ್ತಾದರೂ ಕಾರಣಾಂತರಗಳಿಂದ ಈ ಒಪ್ಪಂದ ಮುರಿದಿದ್ದ ಮುರಿದು ಬಿದ್ದ ನಂತರ ಫ್ಯಾನ್ಸ್
ನಿಂದ ಯುದ್ಧವಿಮಾನಗಳ ಖರೀದಿಗೆ ಭಾರತೀಯ ವಾಯುಪಡೆ ಮುಂದಾಗಿತ್ತು.