ಭಾರತೀಯ ರೈಲ್ವೆಗೆ 2.4 ಲಕ್ಷ ಕೋಟಿ ದಾಖಲೆಯ ಆದಾಯ

ನವದೆಹಲಿ,ಏ.18-ಭಾರತೀಯ ರೈಲ್ವೇ 2022-23ರ ಸಾಲಿನಲ್ಲಿ ದಾಖಲೆಯ 2.4 ಲಕ್ಷ ಕೋಟಿ ಆದಾಯ ದಾಖಲಿಸಿದೆ,

ಹಿಂದಿನ ಹಣಕಾಸು ವರ್ಷದ ಗಳಿಕೆಗಿಂತ ಸುಮಾರು ಶೇ 25 ರಷ್ಟು ಹೆಚ್ಚಳವಾಗಿದೆ ಎಂದು ಭಾರತೀಯ ರೈಲ್ವೆ ಇಲಾಖೆ ತನ್ನ ಮಾಹಿತಿಯಲ್ಲಿ ಈ ವಿಷಯ ತಿಳಿಸಿದೆ.

ರೈಲ್ವೆ ಸಚಿವಾಲಯ ಮಾರ್ಚ್ 31 ರಂದು ಕೊನೆಗೊಂಡ ಕಳೆದ ಹಣಕಾಸು ವರ್ಷದಲ್ಲಿ ಸರಕು ಸಾಗಣೆ ಆದಾಯ 1.6 ಲಕ್ಷ ಕೋಟಿ ರೂ.ಗೆ ಏರಿಕೆಯಾಗಿದೆ, ಹಿಂದಿನ ವರ್ಷಕ್ಕಿಂತ ಸುಮಾರು ಶೇ. 15ರಷ್ಟು ಬೆಳವಣಿಗೆಯನ್ನು ದಾಖಲಿಸಿದೆ ಎಂದು ಹೇಳಿದೆ.

ಅದೇ ರೀತಿ ಪ್ರಯಾಣಿಕರ ಆದಾಯ ಸಾರ್ವಕಾಲಿಕ ಹೆಚ್ಚಿನ ಬೆಳವಣಿಗೆಯನ್ನು ದಾಖಲಿಸಿದೆ. 2022-23 ನೇ ಹಣಕಾಸು ವರ್ಷದಲ್ಲಿ 63,300 ಕೋಟಿಗ ರೂಪಾಯಿ ಪ್ರಯಾಣಿಕರ ಸಾಗಾಟದಿಂದ ಬಂದಿದೆ. ಕಳೆದ ಹಣಕಾಸು ವರ್ಷಕ್ಕೆ ಹೋಲಿಸಿದರೆ ಇದು ಶೇ. 61 ರಷ್ಟು ಹೆಚ್ಚಿದೆ ಎಂದು ತಿಳಿಸಿದೆ.

“ಮೂರು ವರ್ಷಗಳ ನಂತರ, ಭಾರತೀಯ ರೈಲ್ವೇ ಆದಾಯದ ಮುಖದತ್ತ ಸಾಗುತ್ತಿದೆ ಇದು ದೇಶದಲ್ಲಿ ಬದಲಾವಣೆಯನ್ನು ಸೂಚಿಸುತ್ತದೆ ಎಂದಿದೆ.

ಪಿಂಚಣಿ ವೆಚ್ಚಗಳನ್ನು ಸಂಪೂರ್ಣವಾಗಿ ಪೂರೈಸಲು. ಆದಾಯದಲ್ಲಿನ ಏರಿಕೆ ಮತ್ತು ಬಿಗಿಯಾದ ವೆಚ್ಚ ನಿರ್ವಹಣೆಯು ಪರಿಷ್ಕೃತ ಅಂದಾಜಿನ ಗುರಿಯೊಳಗೆ ಶೇ.98.1 ರ ಕಾರ್ಯಾಚರಣಾ ಅನುಪಾತವನ್ನು ಸಾಧಿಸಲು ಸಹಾಯ ಮಾಡಿದೆ” ಎಂದು ರೈಲ್ವೆ ಸಚಿವಾಲಯ ಹೇಳಿದೆ.

ಭಾರತೀಯ ರೈಲ್ವೆ ಖಾಸಗೀಕರಣ ಮಾಡಲಾಗುತ್ತಿದೆ ಎನ್ನುವ ಮಾತುಗಳು ಕೇಳಿ ಬರುತ್ತಿರುವ ನಡುವೆಯೇ ಭಾರತೀಯ ರೈಲ್ವೆ ಹೆಚ್ಚಿನ ಆದಾಯ ಗಳಿಸಿರುವುದು ಹರ್ಷದ ಸಂಗತಿಯಾಗಿದೆ.