ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ವತಿಯಿಂದ ಆಕ್ಸಿಜನ್ ಬ್ಯಾಂಕ್ ಉದ್ಘಾಟನೆ

ಬಳ್ಳಾರಿ,ಜೂ.11 : ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ವತಿಯಿಂದ ಜಿಲ್ಲಾ ಕಚೇರಿಯಲ್ಲಿ ಆಕ್ಸಿಜನ್ ಬ್ಯಾಂಕ್ (Oxygen Concentrator Bank) ) ಅನ್ನು ರೆಡ್‍ಕ್ರಾಸ್ ಸಂಸ್ಥೆಯ ಉಪ ಸಭಾಪತಿಗಳಾದ ಡಾ.ಎಸ್.ಜೆ.ವಿ.ಮಹಿಪಾಲ್ ಅವರು ಬುಧವಾರ ಉದ್ಘಾಟಿಸಿದರು.
ನಂತರ ಅವರು ಮಾತನಾಡಿ ಬಳ್ಳಾರಿ ನಗರದಲ್ಲಿ ಕೋವಿಡ್ ದೃಡಪಟ್ಟ ರೋಗಿಗಳಿಗೆ ಆಸ್ಪತ್ರೆಯಿಂದ ವಾಸಿಯಾದ ನಂತರ ಅವರಿಗೆ ಉಸಿರಾಟದ ತೊಂದರೆ ಇದ್ದರೆ, ಅವರು ವೈದ್ಯರ ಸಲಹೆ ಮೇರೆಗೆ ಆಕ್ಸಿಜನ್‍ನ ಅವಶ್ಯಕತೆ ಇದ್ದಲ್ಲಿ ನಮ್ಮ ರೆಡ್ ಕ್ರಾಸ್ ವತಿಯಿಂದ ಆಕ್ಸಿಜನ್ ಕಾನಸನ್‍ಟ್ರೇಟರ್‍ಗಳನ್ನು 10 ದಿನಗಳ ಕಾಲ ಉಚಿತವಾಗಿ ನೀಡಲಾಗುವುದು ಎಂದರು.
ಈ ಆಕ್ಸಿಜನ್ ಕಾನಸನ್‍ಟ್ರೇಟರ್ ಪಡೆಯಲು ರೆಡ್‍ಕ್ರಾಸ್ ಸಂಸ್ಥೆಯ ಸ್ವಯಂ ಸೇವಕರಾದ ವಿಷ್ಣು ಕುಮಾರ್ ಅವರ ದೂ.ಸಂ 9902713944 ಗೆ ಸಂಪರ್ಕಿಸಬಹುದು.
ಭಾರತೀಯ ರೆಡ್‍ಕ್ರಾಸ್ ಸಂಸ್ಥೆಯ ಖಜಾಂಚಿ ಪೊಲಾ ರಾಧಾಕೃಷ್ಣ, ಭಾರತೀಯ ರೆಡ್‍ಕ್ರಾಸ್ ಸಂಸ್ಥೆಯ ಕಾರ್ಯದರ್ಶಿಗಳಾದ ಎಂ.ಎ.ಷಕೀಬ್, ರೆಡ್‍ಕ್ರಾಸ್ ಸಂಸ್ಥೆಯ ಸದಸ್ಯರಾದ ಡಾ.ಭರತ್, ರೆಡ್‍ಕ್ರಾಸ್‍ನ ಸ್ವಯಂ ಸೇವಕರಾದ ನಿಸಾರ್ ಅಹಮದ್, ಎಂ.ಐ.ನಿಸಾರ್ ಅಹಮದ್ ಮತ್ತು ಇತರರು ಇದ್ದರು.