ಭಾರತೀಯ ಪರಂಪರೆಯಲ್ಲಿ ಮಹಿಳೆಯರ ಪಾತ್ರ ತುಂಬಾ ಮಹತ್ವ: ಡಾ ಸುಧಾ ಆರ್ ಹಾಲಕಾಯಿ

ಕಲಬುರಗಿ ನ: 11: ಓಂ ನಗರದಲ್ಲಿರುವ ಎಂ ಬಿ ಲೋಹಾರ ಆರ್ಟ ಗ್ಯಾಲರಿ ಮಹೇಶ ವಾರದ ಅವರ ಏಕವ್ಯಕ್ತಿ ಚಿತ್ರಕಲಾ ಪ್ರದರ್ಶನವನ್ನು ಮಂಗಳವಾರ ಸಾಂಯಕಾಲ ಕಲಬುರಗಿ ಮಹಿಳಾ ಅಖಿಲ ಭಾರತೀಯ ವೀರಶೈವ ಮಹಾಸಭಾ ಜಿಲ್ಲಾ ಅಧ್ಯಕ್ಷೆ ಡಾ ಸುಧಾ ಆರ್ ಹಾಲಕಾಯಿ ಉದ್ಘಾಟಿಸಿ ಮಾತನಾಡುತ್ತಾ ಭಾರತೀಯ ಪರಂಪರೆಯಲ್ಲಿ ಮಹಿಳೆಯರ ಪಾತ್ರ ತುಂಬಾ ಮಹತ್ವದ್ದಾಗಿದೆ. ಅವರು ಮನೆಯಲ್ಲಿ ಅನೇಕ ಜವಾಬ್ದಾರಿಗಳನ್ನು ನಿಭಾಯಿಸಿ ಸಾಮಾಜಿಕ ಕಾರ್ಯದಲ್ಲಿ ತೊಡಗಿಸಿ ಕೊಳ್ಳಲು ತುಂಬಾ ಶ್ರಮಿಸಬೇಕಾಗುತ್ತದೆ. ಎಂದರಲ್ಲದೆ ಭಾರತೀಯ ಮಹಿಳೆಯರು ಇಂದು ಪಾಶ್ಚಾತ್ಯ ಸಂಸ್ಕ್ರತಿಯನ್ನು ಮೈಗೂಡಿಸಿಕೊಳ್ಳುತ್ತಿದ್ದಾರೆ. ಆದರೆ ಪಾಶ್ಚಾತರು ನಮ್ಮ ಸಂಸ್ಕ್ರತಿಯನ್ನು ಗೌರವಿಸುತ್ತಿದ್ದಾರೆ. ಹೀಗಾಗಿ ಕಲೆಯಲ್ಲಿ ಭಾರತೀಯ ಮಹಿಳೆಯರ, ಪರಂಪರೆಯನ್ನು ಬಿಂಬಿಸುವ ಕಲಾಕೃತಿಗಳು ರಚನೆಯಾಗಲಿ ಎಂದು ಕಲಾವಿದರಿಗೆ ಕಿವಿ ಮಾತನ್ನು ಹೇಳಿದರು.

ಮುಖ್ಯ ಅತಿಥಿಯಾಗಿ ಆಗಮಿಸಿದ ಕರ್ನಾಟಕ ಲಲಿಕಲಾ ಅಕಾಡೆಮಿ ಸದ್ಯಸರಾದ ಹಣಮಂತ ಮಂತಟ್ಟಿ ಅವರು ಮಾತನಾಡುತ್ತಾ ಕಲೆ ನಮ್ಮ ನಾಡಿನ ಪ್ರದೇಶ ಪ್ರತೀಕವಾಗಿರಬೇಕು. ಕಲಾವಿದ ತಾನು ಕಂಡದನ್ನು ಅನುಭವಿಸಿದ್ದನ್ನು ತನ್ನ ಕಲಾಕೃತಿಗಳ ಮೂಲಕ ಅಭಿವ್ಯಕ್ತಿಸುತ್ತಾರೆ. ಆಧುನಿಕತೆ ಎಂಬುದು ನಾವಿರುವ ಸಮಯಕ್ಕಿಂತ ಭಿನ್ನವಾದದ್ದು. ನವ್ಯ ಕಲಾವಿದರು ಆಧುನಿಕತೆ ಹಾಗೂ ಸಾಂಪ್ರದಾಯಿಕ ಎರಡನ್ನು ಒಂದುಗೂಡಿಸಿ ಕಲಾಕೃತಿ ರಚಿಸಿದ್ದಾರೆ. ಎಂದು ನುಡಿದರು.

ಹಿರಿಯ ಚಿತ್ರಕಲಾವಿದರಾದ ವಿಜಯ ಹಾಗರಗುಂಡಗಿ ಅಧ್ಯಕ್ಷತೆವಹಿಸಿದ್ದರು. ಶಿಲ್ಪಾ ಹೆಬ್ಬಾಳ ಸ್ವಾಗತಿಸಿದರು ಹಾಗೂ ನಿರೂಪಿಸಿದರು. ಯೋಗೇಶ ಹಿರೇಮಠ ವಂದಿಸಿದರು.

ಅರ್ಚನಾ ಪಾಟೀಲ, ಕಾವೇರಿ, ಚಂದ್ರಿಕಾ ಕಲಶೆಟ್ಟಿ, ಈಶ್ವರ ಪಂಗಶೆಟ್ಟಿ, ಮಾಣಿಕ ಲಾಡಂಗೆ, ಅನಿಲ ಉಮಂಬರಗೆ, ಸಂತೋಷ ಬಿಲಗುಂದಿ, ಗಿರೀಶ ಕುಲಕರ್ಣಿ, ಸಾಯಿನಾಥ ಲೋಹಾರ, ಡಾ ರೆಹಮಾನ ಪಟೇಲ್, ರೇವಣಸಿಧ್ಧಪ್ಪಾ ಹೊಟ್ಟಿ, ನಾರಾಯಣ ಎಂ ಜೋಶಿ ಮುಂತಾದವರು ಉಪಸಿತ್ಥರಿದ್ದರು.

ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಧನ ಸಹಾಯದೊಂದಿಗೆ ಮಹೇಶ ವಾರದ ಏಕವ್ಯಕ್ತಿ ಚಿತ್ರಕಲಾ ಪ್ರದರ್ಶನವನ್ನು ಆಧುನಿಕತೆಯ ಸಾಮಿಪ್ಯದಲ್ಲಿ ಸಂಸ್ಕ್ರತಿಯ ಆಭರಣ ಅಕ್ರಲಿಕ್ ಮಾಧ್ಯಮದಲ್ಲಿ ರಚಿಸಿದ ಕಲಾಕೃತಿಗಳು ಮೂರು ದಿನ ನವೆಂಬರ 13ರವರೆಗೆ ಪ್ರದರ್ಶನಗೊಳ್ಳಲಿವೆ. ಮುಂಜಾನೆ 10 ರಿಂದ ಸಂಜೆ 7 ರವರೆಗೆ ಸಾರ್ವಜನಿಕರು, ಕಲಾವಿದರು, ಕಲಾಆಸಕ್ತರು ಚಿತ್ರಕಲಾ ಪ್ರದರ್ಶನ ವೀಕ್ಷಿಸಬಹುದು ಎಂದು ಚಿತ್ರಕಲಾವಿದ ಮತ್ತು ಛಾಯಾಚಿತ್ರಕಾರ ನಾರಾಯಣ ಎಂ ಜೋಶಿ ತಿಳಿಸಿದ್ದಾರೆ.