ಭಾರತೀಯ ಟ್ರಕ್ ಚಾಲಕನಿಗೆ ೨೨ ವರ್ಷ ಜೈಲು

ಮೆಲ್ಬೊರ್ನ್, ಎ.೧೬- ಟ್ರಕ್ ಹರಿಸಿ ನಾಲ್ವರು ಪೊಲೀಸ್ ಅಧಿಕಾರಿಗಳ ಸಾವಿಗೆ ಕಾರಣವಾಗಿದ್ದ ಭಾರತೀಯ ಮೂಲದ ೪೮ ವರ್ಷದ ಟ್ರಕ್ ಚಾಲಕನಿಗೆ ಆಸ್ಟ್ರೇಲಿಯಾದ ವಿಕ್ಟೋರಿಯಾ ಸುಪ್ರೀಂ ಕೋರ್ಟ್ ೨೨ ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ.
ಆರೋಪಿಯನ್ನು ಮೊಹಿಂದರ್ ಸಿಂಗ್ ಎಂದು ಗುರುತಿಸಲಾಗಿದೆ. ಈತ ಕಳೆದ ವರ್ಷ ಏಪ್ರಿಲ್ ೨೨ ರಂದು ನಿದ್ರಾಹೀನ ಸ್ಥಿತಿಯಲ್ಲಿ ಹಾಗೂ ಮಾದಕ ವಸ್ತು ಸೇವಿಸಿ ಮೆಲ್ಬೋರ್ನ್‌ನ ಈಸ್ಟರ್ನ್ ಫ್ರೀವೇನಲ್ಲಿ ಭೀಕರ ಅಪಘಾತಕ್ಕೆ ಕಾರಣವಾಗಿದ್ದ. ಸಿಂಗ್ ಗೆ ೨೨ ವರ್ಷಗಳ ಕಾಲ ಜೈಲಿ ಶಿಕ್ಷೆ ವಿಧಿಸಲಾಗಿದ್ದು, ಇದರಲ್ಲಿ ೧೮ ವರ್ಷ ,ಆರು ತಿಂಗಳು ಪೆರೋಲ್ ರಹಿತ ಸಜೆಯಾಗಿದೆ. ನ್ಯಾಯಮೂರ್ತಿ ಪಾಲ್ ಕೊಗ್ಲಾನ್ ಅವರು, ಈ ಅಪಘಾತವು “ಸಾರ್ವಜನಿಕ ಮನಸ್ಸಾಕ್ಷಿಗೆ ಆಘಾತವನ್ನುಂಟು ಮಾಡಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.