ಭಾರತೀಯ ಜ್ಞಾನ ಪರಂಪರೆ ಬಹಳ ಅಗಾಧ

ಕಲಬುರಗಿ,ಜು. 23:“ಭಾರತೀಯ ಜ್ಞಾನ ಪರಂಪರೆ ಬಹಳ ಅಗಾಧವಾದುದು. ಕಲೆ, ಭಾμÉ, ಸಾಹಿತ್ಯದಲ್ಲಿ ಮಾತ್ರ ಈ ಜ್ಞಾನ ಪರಂಪರೆ ನೋಡದೆ ವಿಜ್ಞಾನ, ತಂತ್ರಜ್ಞಾನದಲ್ಲೂ ಕಾಣಬಹುದು” ಎಂದು ಕಲಬುರಗಿಯ ಗುಲ್ಬರ್ಗಾ ವಿಶ್ವವಿದ್ಯಾಲಯದ ಕುಲಪತಿ ಪ್ರೊ ದಯಾನಂದ ಅಗಸರ ಹೇಳಿದರು.
ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಅಧ್ಯಯನಾಂಗ ವಿಭಾಗ ಏರ್ಪಡಿಸಿದ ಭಾರತೀಯ ಜ್ಞಾನ ಪರಂಪರೆ ಕುರಿತ ಎರಡು ದಿನಗಳ ರಾಷ್ಟ್ರೀಯ ಕಾರ್ಯಾಗಾರದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡುತ್ತಿದ್ದರು. ಅವರು ಮುಂದುವರೆದು ಮಾತನಾಡಿ “ಭಾರತೀಯ ಜ್ಞಾನ ಪರಂಪರೆಯ ಅರಿವು ಮೂಡಿಸುವ ಅಗತ್ಯ ಹಿಂದೆಂದಿಗಿಂತಲೂ ಈಗ ಹೆಚ್ಚಾಗಿದೆ. ಭಾರತೀಯರು ಭಾರತೀಯ ಪಾರಂಪರಿಕ ಜ್ಞಾನ ಪರಂಪರೆಗೆ ಕುರುಡಾಗದೆ ಅದನ್ನು ಸಮಕಾಲೀನ ಅಗತ್ಯಕ್ಕೆ ಅನುಗುಣವಾಗಿ ಬಳಸಬೇಕು” ಎಂದು ಅವರು ಸಲಹೆ ನೀಡಿದರು.
ಅಥಿತಿಗಳಾಗಿ ಭಾಗವಹಿಸಿದ ಶರಣಬಸವ ವಿಶ್ವವಿದ್ಯಾಲಯದ ಕುಲಪತಿ ಡಾ. ನಿರಂಜನ ನಿಷ್ಟಿ ಅವರು ಮಾತನಾಡಿ “ವೈದ್ಯಕೀಯ ಕ್ಷೇತ್ರದಲ್ಲಿ ಭಾರತೀಯ ಋಷಿ ಮುನಿಗಳು ಬಹಳ ಮಹತ್ವದ ಸಾಧನೆ ಮಾಡಿದ್ದಾರೆ. ಆಯುರ್ವೇದ ಸಂಪೂರ್ಣವಾಗಿ ಭಾರತೀಯರ ಸ್ವತ್ತು. ಭಾರತೀಯ ಜ್ಞಾನ ಪರಂಪರೆಯನ್ನು ಉಳಿಸಿ ಬೆಳೆಸುವುದು ಮತ್ತು ಸಮಕಾಲೀನ ಸವಾಲುಗಳನ್ನು ಸಮರ್ಥವಾಗಿ ಎದುರಿಸಲು ಅದರ ಸಹಾಯ ಪಡೆಯಬಹುದು” ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಮಾನ್ಯ ಕುಲಪತಿಗಳಾದ ಪ್ರೊ ಬಟ್ಟು ಸತ್ಯನಾರಾಯಣ ಅವರು ಮಾತನಾಡಿ “ಭಾರತೀಯ ಜ್ಞಾನ ಪರಂಪರೆ ಯನ್ನು ಸಂದೇಹದಿಂದ ನೋಡುವುದು ಸರಿಯಲ್ಲ. ಅದನ್ನು ಕೇವಲ ಸಂಸ್ಕøತ ಭಾμÉಗೆ ಸಿಮಿತಗೊಳಿಸುವ ಕ್ರಮ ಸರಿಯಲ್ಲ. ಭಾರತದ ಎಲ್ಲಾ ಭಾμÉಗಳಲ್ಲಿ ಸಾಕಷ್ಟು ಶ್ರೀಮಂತ ಸಾಹಿತ್ಯ ಶೃಷ್ಟಿಯಾಗಿದೆ. ಅದೆಲ್ಲವೂ ಭಾರತೆಯ ಜ್ಞಾನ ಪರಂಪರೆಯಾಗಿದೆ. ಭಾರತೀಯ ಪರಂಪರೆಯಲ್ಲಿ ಇರುವ ಧನಾತ್ಮಕ ಸಂಗತಿಗಳನ್ನು ಸ್ವೀಕರಿಸಬೇಕು. ದೇಶದ ಪ್ರಗತಿಗಾಗಿ ಭಾರತೀಯ ಜ್ಞಾನ ಪರಂಪರೆಯ ಜೊತೆಗೆ ಪಾಶ್ಚಾತ್ಯ ಜ್ಞಾನ ಪರಂಪರೆಯನ್ನು ಅನುಸರಿಸಬೇಕು. ಭಾರತೀಯ ಜ್ಞಾನ ಪರಂಪರೆಯನ್ನು ನಮ್ಮ ವಿದ್ಯಾರ್ಥಿಗಳು ತಿಳಿದುಕೊಳ್ಳುವ ಅಗತ್ಯವಿದೆ. ಹೀಗಾಗಿ ಪ್ರತಿಯೊಂದು ವಿಷಯಲ್ಲೂ ಶೇಕಡ ಕನಿಷ್ಢ ಹತ್ತರಷ್ಟು ಜ್ಞಾನ ಪರಂಪರೆಯನ್ನು ನಮ್ಮ ಪಠ್ಯಕ್ರಮದಲ್ಲಿ ಸೇರಿಸಲಾಗುವುದು” ಎಂದು ಹೇಳಿದರು.
ಕಾರ್ಯಗಾರದ ಸಂಯೋಜಕರು ಮತ್ತು ವಿಶ್ವ ವಿದ್ಯಾಲಯದ ಅಧ್ಯಯನಾಂಗದ ನಿರ್ದೇಶಕರಾದ ಪ್ರೊ ಬಸವರಾಜ ಡೋಣೂರ ಮಾತನಾಡಿ “ಭಾರತೀಯ ಜ್ಞಾನ ಪರಂಪರೆ ಪ್ರಾಚೀನವಾಗಿರುವಂತೆ ಸಮಯದ ಪರೀಕ್ಷೆಯಲ್ಲಿ ಗೆದ್ದು ಬಂದಿದೆ. ಭಾರತೀಯರೇ ಭಾರತೀಯ ಜ್ಞಾನ ಪರಂಪರೆಗಳನ್ನು ನಿರ್ಲಕ್ಷಿಸುವುದು, ಸಂದೇಹದಿಂದ ನೋಡುವುದು ಸರಿಯಲ್ಲ. ಜ್ಞಾನ ವಿಶ್ವಾತ್ಮಕವಾದುದು. ಭಾರತದ ವಿಶ್ವವಿದ್ಯಾಲಯಗಳ ಪಠ್ಯಕ್ರಮ ಮತ್ತು ಬೋಧನಾಕ್ರಮಗಳನ್ನು ಭಾರತೀಯಗೊಳಿಸುವ ಅಗತ್ಯವಿದೆ. ಭಾರತೀಯ ಜ್ಞಾನದ ಪಾಶ್ಚಾತ್ತೀಕರಣ ನಿಲ್ಲಬೇಕು. ಪಾಶ್ಚಾತ್ಯ ಜ್ಞಾನ ಪರಂಪರೆ ನಿರಾಕರಿಸಬೇಕಿಲ್ಲ. ಆದರೆ ಅದೇ ಅಂತಿಮ ಎಂಬ ನಂಬಿಕೆ ಸಲ್ಲದು. ವ್ಯಾಸ, ವಾಲ್ಮಿಕಿ ಮತ್ತು ಕಾಳದಾಸರಂಥ ಲೇಖಕರು ನಮಗೆ ಯಾವ ಭಾμÉಯಲ್ಲೂ ದೊರಕುವುದಿಲ್ಲ. ಇಂಥ ಲೇಖಕರು ಭಾರತೀಯ ಎಲ್ಲಾ ಭಾμÉಗಳಲ್ಲೂ ಇದ್ದಾರೆ” ಎಂದು ಹೇಳಿದರು.
ಸಂಘಟನಾ ಕಾರ್ಯದರ್ಶಿ ಡಾ ಚೈತನ್ಯ ಆರ್. ಕೆ. ಸ್ವಾಗತಿಸಿ ಕಾರ್ಯಾಗಾರದ ವರದಿ ಪ್ರಸ್ತಾಪಿಸಿದರು, ಡಾ. ಬಸವರಾಜ ಕುಬಕಡ್ಡಿ ವಂದಿಸಿಸಿದರು ಮತ್ತು ಡಾ. ರಾಜೀವ ಜೋಶಿ ಕಾರ್ಯಕ್ರಮ ನಿರ್ವಹಣೆ ಮಾಡಿದರು.