ಭಾರತೀಯ ಜೈನ್ ಸಂಘಟನೆ ಕೊಡುಗೆ ಅಪಾರ-ದರ್ಶನಾಪುರ

ಶಹಾಪುರ:ಜೂ.3:ಮನುಕುಲ ಸಂಕಷ್ಟಕ್ಕೆ ಸಿಲುಕಿದಾಗ ಸದಾ ನೆರವಿನ ಅಭಯ ನೀಡುತ್ತಲೇ ಬಂದಿರುವ ಅಲ್ಲದೆ ಅಭಿವೃದ್ಧಿ ಮತ್ತು ಸಮಾಜಮುಖಿ ಕಾರ್ಯಗಳಲ್ಲಿ ವಿವಿಧ ಬಗೆಯ ಸೇವೆ ಸಲ್ಲಿಸುವ ಮೂಲಕ ಭಾರತೀಯ ಜೈನ್ ಸಂಘಟನೆ ಮೇಲ್ಪಂಕ್ತಿಯಾಗಿದೆ ಎಂದು ಶಾಸಕ ಶರಣಬಸಪ್ಪ ದರ್ಶನಾಪುರ ಶ್ಲಾಘಿಸಿದರು.

ನಗರದ ಜೈನ್ ಕಲ್ಯಾಣ ಮಂಟಪದಲ್ಲಿ ಭಾರತೀಯ ಜೈನ್ ಸಂಘಟನೆಯ ವತಿಯಿಂದ ಬುಧವಾರ ಹಮ್ಮಿಕೊಂಡಿದ್ದ ಆಮ್ಲಜನಕ ಸಾಂದ್ರಕ ಮತ್ತು ಸ್ಟೀಮರ್‍ಗಳನ್ನು ಸಮಾಜ ಸೇವೆಗಾಗಿ ಕೊಡುಗೆಯಾಗಿ ಅರ್ಪಿಸಿ ಅವರು ಮಾತನಾಡಿದರು.

ರಾಜ್ಯದಲ್ಲಿ ನೂರಾರು ಕೆರೆಗಳಲ್ಲಿ ಹೂಳೆತ್ತುವ ಅಭಿಯಾನಕ್ಕೆ ಜೈನ್ ಸಂಘಟನೆ ತೊಡಗಿಸಿಕೊಳ್ಳುವ ಮೂಲಕ ಜೀವಜಲ ರಕ್ಷಣೆಯ ಜೊತೆಯಲ್ಲಿ ಅಂತರ್ಜಲಮಟ್ಟ ಹೆಚ್ಚಳಕ್ಕೆ ಮುನ್ನುಡಿ ಬರೆದರು.ಅದರಂತೆ ತಾಲ್ಲೂಕಿನ ಅನೇಕ ಕೆರೆಗಳಲ್ಲಿ ಹೂಳೆತ್ತುವ ಮೂಲಕ ಕೆರೆಯಲ್ಲಿ ನೀರು ಸಂಗ್ರಹವಾಗಿ ಅಂತರ್ಜಮಟ್ಟ ಹೆಚ್ಚಳಕ್ಕೆ ಕಾರಣವಾಗಿದೆ. ಪರಿಸರ ಸಂರಕ್ಷಣೆ ಹಾಗೂ ಜಾಗೃತಿಯ ಬಗ್ಗೆ ಸಧಾ ಚಿಂತನೆ ನಡೆಸುವ ಜೈನ್ ಸಂಘಟನೆಯ ಮೆಚ್ಚುಗೆ ನೀಡಿದೆ ಎಂದರು.
ತಾಲೂಕಿನ ಜೈನ್ ಸಂಘದಲ್ಲಿ ನಗರದ ವಿವಿಧ ದಾನಿಗಳಿಂದ ಸಂಗ್ರಹಿಸಿದ ಮೊತ್ತದಲ್ಲಿ ಈಗಾಗಲೇ 7 ಆಮ್ಲಜನಕ ಸಾಂದ್ರಕಗಳು ಲಭ್ಯವಿದ್ದು ಇನ್ನೂ 8 ಸಾಂದ್ರಕಗಳು ಸದ್ಯದಲ್ಲಿ ಬರಲಿವೆ. ಕೇವಲ ಕೊರೊನಾ ರೋಗಿಗಳಲ್ಲದೆ ಆಮ್ಲಜನಕ ಕೊರತೆಯಿಂದ ಬಳಲುತ್ತಿರುವ ರೋಗಿಗಳು ಬಳಸಬಹುದಾಗಿದೆ. 200 ಸ್ಟೀಮರ್‍ಗಳನ್ನು ಕೊರೊನಾ ವಾರಿಯರ್ಸ್‍ಗಳಾದ ಪೊಲೀಸರಿಗೆ, ಮಾಧ್ಯಮದವರಿಗೆ ಹಾಗೂ ಇನ್ನಿತರರಿಗೆ ವಿತರಿಸಲಾಗಿದೆ. ಅವಶ್ಯಕತೆ ಇರುವವರು ಸಂಘದ ಪದಾಧಿಕಾರಿಗಳ ಮೊಬೈಲ್ ಸಂಖ್ಯೆ 9448022295,9448453148,9343660550ಗೆ ಸಂಪರ್ಕಿಸಬಹುದಾಗಿದೆ ಎಂದು ಭಾರತೀಯ ಜೈನ್ ಸಂಘಟನೆ ತಾಲೂಕು ಘಟಕದ ಅಧ್ಯಕ್ಷ ದಿನೇಶ ಜೈನ್ ತಿಳಿಸಿದ್ದಾರೆ.
ತಹಸೀಲ್ದಾರ ಜಗನ್ನಾಥರೆಡ್ಡಿ, ಟಿಹೆಚ್‍ಒ ಡಾ.ರಮೇಶ ಗುತ್ತೇದಾರ, ಜೈನ್ ಸಂಘದ ಜಿಲ್ಲಾ ಸಂಚಾಲಕ ರಾಜೇಶ ಜೈನ್, ನಗರಸಭೆ ಪರಿಸರ ಅಭಿಯಂತರ ಹರೀಶ ಸಜ್ಜನಶೆಟ್ಟಿ, ಬಸವರಾಜ ಆನೆಗುಂದಿ, ಮಾಂಗೀಲಾಲ್ ಜೈನ್, ಇಂದ್ರಮಲ್ ಸೋಲಂಕಿ, ದೇವಿಚಂದ ಭಂಡಾರಿ, ಕಾಂತೀಲಾಲ್ ಜೈನ್, ಗುಂಡಪ್ಪ ತುಂಬಗಿ, ಅಶೋಕರೆಡ್ಡಿ, ಜೀತೇಂದ್ರ ಜೈನ್, ಆನಂದ ಜೈನ್, ರಮೇಶ ಜೈನ್, ಧನಪಾಲ್ ಜೈನ್ ಇದ್ದರು.