ಭಾರತೀಯ ಜನತಾ ಪಾರ್ಟಿ ಸಂಸ್ಥಾಪನಾ ದಿನಾಚರಣೆ 

ದಾವಣಗೆರೆ.ಏ.೭; ನಗರದ ಕೆಬಿ ಬಡಾವಣೆಯಲ್ಲಿರುವ ಬಿಜೆಪಿ ಕಚೇರಿಯಲ್ಲಿ ಭಾರತೀಯ ಜನತಾ ಪಾರ್ಟಿ ಸಂಸ್ಥಾಪನ ದಿನವನ್ನು ಆಚರಿಸಲಾಯಿತು. ಈ ಕಾರ್ಯಕ್ರಮವನ್ನು ಉದ್ದೇಶಿಸಿ ಕೆ.ಎನ್‌. ಕಲ್ಲೇಶ್‌ ಭಾರತೀಯ ಜನತಾ ಪಾರ್ಟಿ ಬೆಳೆದು ಬಂದ ದಾರಿ ಹಾಗೂ ಸಂಘಟನೆ ಬಗ್ಗೆ ಸವಿವರವಾಗಿ ವಿವರಣೆ ನೀಡಿದರು. ಕಾರ್ಯಕ್ರಮದಲ್ಲಿ ದಾವಣಗೆರೆ ಜಿಲ್ಲಾ ಪ್ರದಾನ ಕಾರ್ಯದರ್ಶಿಯಾದ ಬಿ.ಎಸ್. ಜಗದೀಶ್‌, ರಾಜ್ಯ ಶಿಕ್ಷಣ ಪ್ರಕೋಷ್ಠದ ರಾಜ್ಯ ಸಹ ಸಂಚಾಲಕ ಕೆ.ಎಂ. ಸುರೇಶ್‌, ರಾಜ್ಯ ಪ್ರಕೋಷ್ಠದ ಪದಾಧಿಕಾರಿಗಳು ಬೈರಣ್ಣ .ಜಿ, ರವಿ .ಎಸ್‌, ಡಾ. ಪ್ರಕಾಶ್‌ ಜಿ.ಪಿ., ದಾವಣಗೆರೆ ಉತ್ತರ ಮಂಡಲದ ಅಧ್ಯಕ್ಷರು, ಪ್ರಧಾನ ಕಾರ್ಯದರ್ಶಿ ಬಸವರಾಜಯ್ಯ, ಜಿಲ್ಲಾ ವಕ್ತಾರರು ಡಿ.ಎಸ್. ಶಿವಶಂಕರ್‌, ಜಿಲ್ಲಾ ಸಾಮಾಜಿಕ ಜಾಲತಾಣ ಕೊಟ್ರೇಶ್‌ ಗೌಡ, ಕಿಶೋರ್‌ ಕುಮಾರ್‌ ಇನ್ನಿತರರು  ಉಪಸ್ಥಿತರಿದ್ದರು.