ಭಾರತೀಯ ಜನತಾ ಪಾರ್ಟಿ, ಮಂಡಲ ಕಾರ್ಯಕಾರಣಿ ಸಭೆ

ಹುಮನಾಬಾದ್: ಫೆ.9:ತಾಲ್ಲೂಕಿನ ಹುಡಗಿ ಗ್ರಾಮದ ನಿಸರ್ಗ ಕಲ್ಯಾಣ ಮಂಟಪದಲ್ಲಿ ಭಾರತೀಯ ಜನತಾ ಪಾರ್ಟಿ ಮಂಡಳ ಕಾರ್ಯಕರ್ತರ ಸಭೆ ಜರುಗಿತು.
ಶಾಸಕ ಡಾ.ಸಿದ್ದಲಿಂಗಪ್ಪಾ ಪಾಟೀಲ ಅವರು ಮಾತನಾಡಿ, ಕಳೆದ ದಶಕದಲ್ಲಿ ಭಾರತ ಪ್ರಪಂಚದಾದ್ಯಂತ ಎಲ್ಲಾ ಕ್ಷೇತ್ರದಲ್ಲಿ ತನ್ನದೇ ಆದ ಛಾಪನ್ನು ಮೂಡಿಸಿ ಯಶಸ್ವಿಯಾಗಿ ಮುನ್ನಡೆಯುತ್ತಿದೆ. ವಿಶ್ವಗುರು ಭಾರತದ ಮುನ್ನುಡಿ ಬರೆದ ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವದ ಸರ್ಕಾರ ಮುಂದೆಯೂ ಗೆದ್ದು ಭಾರತದ ಯಶಸ್ಸಿಗೆ ಶ್ರಮಿಸಬೇಕಿದೆ. ಹಾಗಾಗಿ ಸಂಘಟನಾತ್ಮಕವಾಗಿ ಕಾರ್ಯಶೀಲರಾಗಿ ಕಾರ್ಯಕರ್ತರು ಪಕ್ಷ ಸಂಘಟನೆಗೆ ಹೆಚ್ಚಿನ ಒತ್ತು ನೀಡಬೇಕು ಎಂದು ಕರೆ ನೀಡಿದರು.
ಇದೇ ಸಂದರ್ಭದಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಲಾಗಿ ನೂತನವಾಗಿ ಆಯ್ಕೆಯಾದ ಕಿರಣ ಪಾಟೀಲ, ಪೀರಪ್ಪಾ ಯರನಳ್ಳಿ, ಮಾಧವ ಹೊಸುರೆ, ರವರನ್ನ ಅಭಿನಂದಿಸಿ ಪಕ್ಷದ ಆದೇಶ ಪತ್ರವನ್ನು ವಿತರಿಸಲಾಯಿತು.
ಈ ಸಂದರ್ಭದಲ್ಲಿ ನೂತನ ಬಿಜೆಪಿ ನೂತನ ಜಿಲ್ಲಾಧ್ಯಕ್ಷ ಸೋಮನಾಥ ಪಾಟೀಲ, ಅವರು ಮಾತನಾಡಿದರು. ಮಾಜಿ ಅಧ್ಯಕ್ಷ ಶಿವಾನಂದ ಮಂಠಾಳಕರ್, ರಾಜ್ಯ ಕಾರ್ಯಕಾರಿಣಿ ಸದಸ್ಯರಾದ ಅಭಿಮನ್ಯು ನಿರಗುಡಿ, ಅಂಬೇಡ್ಕರ ನಿಗಮ ಮಂಡಳಿಯ ಮಾಜಿ ನಿರ್ದೇಶಕ ಬಸವರಾಜ ಆರ್ಯ, ಜಿಲ್ಲಾ ಉಪಾಧ್ಯಕ್ಷ ವಿಶ್ವನಾಥ ಪಾಟೀಲ ಮಾಡಗೂಳ, ಲೋಕಸಭಾ ಚುನಾವಣೆಯ ಜಿಲ್ಲಾ ಸಂಚಾಲಕ ಅರಹಂತ ಸಾವಳೆ, ಮಾಯಾವತಿ ಸಿಂಧನಕೇರಾ, ಮಂಡಲದ ಅಧ್ಯಕ್ಷ ಪ್ರಭಾಕರ ನಾಗರಾಳೆ, ಮಂಡಲದ ಪ್ರಧಾನ ಕಾರ್ಯದರ್ಶಿ ಅನಿಲ ಪಸಾರ್ಗಿ, ಪ್ರಮುಖರಾದ ರಾಜಕುಮಾರ ಭಂಡಾರಿ, ಮತ್ತು ಪಕ್ಷದ ಮುಂಖಡರಾದ ಸಂತೋಷ ಪಾಟೀಲ, ಗಿರೀಶ ಪಾಟೀಲ, ಕರಬಸಪ್ಪಾ ಕಲ್ಲೂರ, ನಾರಾಯಣರಾವ ರಾಂಪೂರೆ, ಇದ್ದರು.