ಭಾರತೀಯ ಕೃಷಿ ಸಂಶೋಧನಾ ಪರೀಕ್ಷೆಯಲ್ಲಿ ರ‍್ಯಾಂಕ್‌


 ಚಿತ್ರದುರ್ಗ.ನ.೧೯; ನಗರದ ಎಸ್ ಆರ್ ಎಸ್ ಪಿಯು ಕಾಲೇಜಿನ ವಿದ್ಯಾರ್ಥಿಗಳು ಭಾರತೀಯ ಕೃಷಿ ಸಂಶೋಧನಾ ಪರಿಷತ್ ನಡೆಸುವ  ಪರೀಕ್ಷೆಯಲ್ಲಿ ಅತ್ಯುತ್ತಮ ರ‍್ಯಾಂಕ್‌ಗಳನ್ನು ಪಡೆದು ದಾಖಲೆ ನಿರ್ಮಿಸಿದ್ದಾರೆ.  ಭಾರತೀಯ ಕೃಷಿ ಸಂಶೋಧನಾ ತರಬೇತಿ ಪ್ರವೇಶ ಪರೀಕ್ಷೆಯ ರಾಷ್ಟ್ರಮಟ್ಟದ ರ‍್ಯಾಂಕ್‌ಗಳನ್ನು ಪ್ರಕಟಿಸಿಲಾಗಿದ್ದು, ಅದರಲ್ಲ್ಲಿ ಕಾಲೇಜಿನ ವಿದ್ಯಾರ್ಥಿ ಕು.ಧ್ವುವ ಎನ್ ಎಲ್ ಚೌಧರಿ, ರಾಷ್ಟçಮಟ್ಟದಲ್ಲಿ 354ನೇ ರ‍್ಯಾಂಕ್ ಪಡೆದು ಜಿಲ್ಲೆಗೆ ಕೀರ್ತಿ ತಂದಿದ್ದಾರೆ. ನಂತರದ ಸ್ಥಾನಗಳಲ್ಲಿ ಕು. ಭರತ್ ಆರ್ ಎಸ್, 700ನೇ ರ‍್ಯಾಂಕ್, ಕು. ಹರಿಪ್ರಿಯಾ, 3626ನೇ ರ‍್ಯಾಂಕ್‌ಗಳನ್ನು ಪಡೆದು ಚಿತ್ರದುರ್ಗ ಜಿಲ್ಲೆಯ ಕೀರ್ತಿಯನ್ನು ರಾಷ್ಟçಮಟ್ಟದÀಲ್ಲಿ ದಾಖಲಿಸಿದ್ದಾರೆ. ಉಳಿದಂತೆ ಒಟ್ಟು 36 ವಿದ್ಯಾರ್ಥಿಗಳು ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿರುವುದು ಕಾಲೇಜಿನ ವಿಶೇಷ.