ಭಾರತೀಯ ಕಲಾ ಸಾಂಸ್ಕೃತಿಕ ಅಕಾಡೆಮಿಯಿಂದ ಬಸವರತ್ನ ಪ್ರಶಸ್ತಿ

ದಾವಣಗೆರೆ.ನ.೭; ಇತ್ತೀಚಿಗೆ ದಾವಣಗೆರೆ ಸರ್ಕಾರಿ ನೌಕರರ ಭವನದಲ್ಲಿ ಭಾರತೀಯ ಕಲಾ ಸಾಂಸ್ಕೃತಿಕ ಅಕಾಡೆಮಿ ವತಿಯಿಂದ ಮಹಾತ್ಮಾಗಾoಧೀಜಿ ಮತ್ತು ಲಾಲ್ ಬಹುದ್ದೂರ್ ಶಾಸ್ತ್ರಿಜೀ  ಜನ್ಮ  ದಿನಾಚಾರಣೆಯ ಪ್ರಯುಕ್ತ  ಪ್ರಶಸ್ತಿ ಪ್ರಧಾನ ಸಮಾರಂಭ ಹಮ್ಮಿಕೊಳ್ಳಲಾಗಿತ್ತು.    ನಾರಾಯಣ ನೇತ್ರಾಲಯದಲ್ಲಿ ಕಾರ್ಯನಿರ್ವಹಿಸುತ್ತಿರುವ  ನಾಗೇಶ್ ಬಾಬು ಪಿಎಸ್. ಅವರಿಗೆ ಭಾರತಿಯ ಕಲಾ ಸಾಂಸ್ಕೃತಿಕ ಅಕಾಡೆಮಿ ವತಿಯಿಂದ  ಆರೋಗ್ಯ ಸೇವೆ ಗುರುತಿಸಿ  ಬಸವ ರತ್ನ ರಾಷ್ಟ್ರ ಪ್ರಶಸ್ತಿ ನೀಡಿ ಗೌರವಿಸಿದ್ದಾರೆ. ಈ ಸಂದರ್ಭದಲ್ಲಿ ದಿವ್ಯ ಸಾನ್ನಿಧ್ಯ ವಹಿಸಿದ್ದ  ಶ್ರೀ ಮುರಳಿದರ ಸ್ವಾಮೀಜಿ, ಸಂಸ್ಥೆಯ ಅಧ್ಯಕ್ಷರಾದ ಎನ್. ಮಲ್ಲೇಶಪ್ಪ ಕುಕ್ಕುವಾಡ, ಡಾ.ಗುಣವಂತ ಮಂಜು ಸಾಹಿತಿಗಳು, ನಿರ್ದೇಶಕರು, ಡಾ.ಹೆಚ್. ವಿಶ್ವನಾಥ್ , ಕೇಂದ್ರಸರ್ಕಾರಿ ವಕೀಲರಾದ ಮೋಹನ್ ಕುಮಾರ್ ದಾನಪ್ಪ. ಹಾಗೂ  ಡಾ. ಸಂತೋಷ್ ಕುಮಾರ್ ಇತರರು ಹಾಜರಿದ್ದರು