ಭಾರತೀಯರ ದೃಷ್ಠಿಯಲ್ಲಿ ವಿದ್ಯೆಗೆ ಉನ್ನತ ಸ್ಥಾನಮಾನ:ಬಿಇಓ ನಾಯಕ

ತಾಳಿಕೋಟೆ:ಜೂ.17: ಆಧುನಿಕ ಸಮಾಜದಲ್ಲಿ ಶಿಕ್ಷಣವೆಂಬುದು ಹಿಂದೆಂದಿಗಿಂತಲೂ ಮಹತ್ವಪೂರ್ಣ ಸಂಗತಿಯಾಗಿ ಪರಿಣಮಿಸಿದ್ದು ಬದಲಾಗುತ್ತಾ ಸಾಗಿರುವ ಇಂದಿನ ದಿನಮಾನದಲ್ಲಿ ಸಮಾಜದಲ್ಲಿ ಭಾವಾನಾತ್ಮಕತೆಗಿಂತಲೂ ಭೌತಿಕತೆಗೆ ಮಹತ್ವವಿದೆ ಕಾರಣ ಮಕ್ಕಳಿಗಾಗಿ ಆಸ್ತಿ ಮಾಡುವಂತೆ ಉತ್ತಮ ಶಿಕ್ಷಣ ಒದಗಿಸುವದು ಒಂದು ಮಹತ್ವದ ಆಸ್ತಿ ಎಂದು ಪರಿಗಣಿಸಿಕೊಳ್ಳಬೇಕೆಂದು ಮುದ್ದೇಬಿಹಾಳ ತಾಲೂಕಾ ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಜೆ.ನಾಯಕ ಅವರು ನುಡಿದರು.

ಶುಕ್ರವಾರರಂದು ಸ್ಥಳೀಯ ಎಸ್.ಎಸ್.ವಿದ್ಯಾ ಸಂಸ್ಥೆಯ ವತಿಯಿಂದ 2023-24ನೇ ಸಾಲಿನ ವಿದ್ಯಾರ್ಥಿಗಳಿಗೆ ಸ್ವಾಗತಕೊರುವ ಸಂಸ್ಥೆಯ ಅಧ್ಯಕ್ಷ ಎಚ್.ಎಸ್.ಪಾಟೀಲ ಅವರ ಜನ್ಮದಿನ ಹಾಗೂ ಆದರ್ಶ ಶಿಕ್ಷಕರ ಸನ್ಮಾನ ಸಮಾರಂಭದಲ್ಲಿ ವಿದ್ಯಾರ್ಥಿಗಳಿಗೆ ಶುಭ ಸಂದೇಶ ಸಾರಿದ ಅಧಿಕಾರಿ ನಾಯಕ ಅವರು ವಿದ್ಯ ಎಂಬುದಕ್ಕೆ ಪೂಜ್ಯತೆಯನ್ನು ಕೊಡುತ್ತಾ ಬರಲಾಗಿದೆ ಅದಕ್ಕೆ ಉನ್ನತ ಸ್ಥಾನಮಾನ ವಿದೆ ಮಾತೆಯಂತೆ ರಕ್ಷಣೆ ಒದಗಿಸುತ್ತದೆ ಪಿತನಂತೆ ಪಥದರ್ಶನ ಮಾಡುತ್ತದೆ ಎಂದ ಅವರು ಚಿಕ್ಕದಾಗಿದ್ದ ಸಂಗಮೇಶ್ವರ ವಿದ್ಯಾಸಂಸ್ಥೆ ಹೆಮ್ಮರವಾಗಿ ಬೆಳೆಯಲು ಸಂಸ್ಥೆಯ ಅಧ್ಯಕ್ಷ ಎಚ್.ಎಸ್.ಪಾಟೀಲ ಅವರ ನಿಷ್ಟಾವಂತಿಕೆ ಪ್ರಾಮಾಣಿಕ ಸೇವೆ ಅಲ್ಲಿ ಅಡಗಿದ್ದು ಈ ಕಾರಣದಿಂದಲೇ ಪಾಟೀಲ ಅವರ ವರ್ಚಸ್ಸು ಘನತೆ ಗೌರವ ಬೆಳೆಯಲು ಕಾರಣವಾಗಿದೆ ಮುಂದಿನ ದಿನಮಾನದಲ್ಲಿಯೂ ಬೇರೆ ಬೇರೆ ವಿದ್ಯಾ ಸಂಸ್ಥೆ ತೆಗೆದು ಮಕ್ಕಳಿಗೆ ಇನ್ನಷ್ಟು ವಿದ್ಯಾದಾನಕ್ಕೆ ಮುಂದಾಗಬೇಕೆಂದು ಅಧ್ಯಕ್ಷ ಪಾಟೀಲ ಅವರಿಗೆ ಸಲಹೆ ನೀಡಿದರು.

ಇನ್ನೋರ್ವ ಸಮಾರಂಭವನ್ನು ಉದ್ಘಾಟಿಸಿದ ಬಿಜೆಪಿ ಜಿಲ್ಲಾ ಅಧ್ಯಕ್ಷ ಆರ್.ಎಸ್.ಪಾಟೀಲ(ಕೂಚಬಾಳ) ಅವರು ಮಾತನಾಡಿ ಗ್ರಾಮಾಂತರ ಪ್ರದೇಶದಲ್ಲಿ ಸಾಮಾನ್ಯ ವ್ಯಕ್ತಿಯಾಗಿದ್ದ ಎಚ್.ಎಸ್.ಪಾಟೀಲರು ಉನ್ನತ ಶಿಕ್ಷಣ ಪಡೆಯುತ್ತಾ ಶಿಕ್ಷಣ ಸಂಸ್ಥೆಯನ್ನು ಬೆಳೆಸಿದ ಕೀರ್ತಿ ಅವರಿಗೆ ಸಲ್ಲುತ್ತದೆ ಎಂದರು. ಜೀವನ ಮಾದರಿಯಾಗಿದೆ ಯಾವುದೇ ಕ್ಷೇತ್ರದ ವೃತ್ತಿಯಲ್ಲಿರಲಿ ಅದರಲ್ಲಿ ಶ್ರಮ ಹಾಕಿದರೆ ಯಶಸ್ಸು ಕಾಣಬಹುದಾಗಿದೆ ಸಮಾಜದ ಜೊತೆ ಎಚ್.ಎಸ್.ಪಾಟೀಲರು ನಿಲ್ಲುತ್ತಾ ಸಾಗಿದ್ದಾರೆ ಅವರು ವಿದ್ಯಾರ್ಥಿಗಳೇ ದೇಶದ ಆಸ್ತಿ ಬೆನ್ನೇಲುಬು ಎಂದು ಅರೀತಿದ್ದರಿಂದ ವಿದ್ಯಾರ್ಜನೆಗೆ ಒತ್ತು ಕೊಡಲು ಕಾರಣವಾಗಿದೆ ಎಂದ ಅವರು ನುರಿತ ಶಿಕ್ಷಕರಿಂದ ನೀಡುತ್ತಿರುವ ಶಿಕ್ಷಣದಿಂದಲೇ ಈ ಸಂಸ್ಥೆಯ ವಿದ್ಯಾರ್ಥಿಗಳು ಆದರ್ಶ ವ್ಯಕ್ತಿಗಳಾಗಿ ಪರಿಣಮಿಸಲು ಕಾರಣವಾಗಿದೆ ಎಂದರು.

ಅಧ್ಯಕ್ಷತೆ ವಹಿಸಿದ ಸಂಗಮೇಶ್ವರ ವಿದ್ಯಾ ಸಂಸ್ಥೆಯ ಅಧ್ಯಕ್ಷ ಎಚ್.ಎಸ್.ಪಾಟೀಲರು ಉಪಸ್ಥಿತ ಅತಿಥಿ ಮಹೋದಯರಿಗೆ ಹಾಗೂ ವಿದ್ಯಾರ್ಥಿನಿಯರ, ಶಿಕ್ಷಕ ವೃಂದದವರ ಸಮ್ಮುಖದಲ್ಲಿ ಕೇಕ್ ಕತ್ತರಿಸುವ ಮೂಲಕ ಹುಟ್ಟು ಹಬ್ಬವನ್ನು ಆಚರಿಸಿಕೊಂಡು ಎಲ್ಲ ವಿದ್ಯಾರ್ಥಿಗಳಿಗೆ ಉಚಿತವಾಗಿ ನೋಟಬುಕ್‍ಗಳನ್ನು ವಿತರಿಸಿ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

ಇನ್ನೋರ್ವ ಶುಭ ಸಂದೇಶ ಸಾರಿದ ಅಕ್ಷರದಾಸೋಹ ಸಹಾಯಕ ನಿರ್ದೇಶಕ ಸಂಗಮೇಶ ಹೊಲ್ದಾರ, ಸಾಹಿತಿ ಅಶೋಕ ಹಂಚಲಿ ಅವರು ಮಾತನಾಡಿ ಮಂದಿ ಮಕ್ಕಳೊಂದಿಗೆ ಚೆನ್ನಾಗಿ ಇರಬೇಕೆಂಬುದರ ಬಗ್ಗೆ ಹಂಚಲಿ ಜಾನಪದ ಗೀತೆಯೊಂದನ್ನು ಹಾಡಿ ತಿಳುವಳಿಕೆ ಮೂಡಿಸಿದರೆ ಇತ್ತ ವ್ಯಕ್ತಿಯ ಇಚ್ಚೆ ಸಹನೆ ಎಂಬುದು ಉದಾರ ಸಹಾಯ ಹಸ್ತ ಇವೇಲ್ಲವೂ ಎಚ್.ಎಸ್.ಪಾಟೀಲ ಅವರಲ್ಲಿ ಒಳಗೊಂಡಿದ್ದರಿಂದ ಶಿಕ್ಷಣ ಕ್ಷೇತ್ರದಲ್ಲಿ ಅವರು ಮುಂದುವರೆಯಲು ಕಾರಣವಾಗಿದೆ ಎಂದರು.

ಉಪನ್ಯಾಸಕ ಎಸ್.ಜಿ.ಜಾಮಗೊಂಡ ಪ್ರಾಸ್ಥಾವಿಕ ಮಾತನಾಡಿದರು. ಸಾನಿದ್ಯ ವಹಿಸಿದ ಶ್ರೀ ಖಾಸ್ಗತೇಶ್ವರ ಮಠದ ಬಾಲಶಿವಯೋಗಿ ಶ್ರೀ ಸಿದ್ದಲಿಂಗ ದೇವರು, ಗುಂಡಕನಾಳ ಹಿರೇಮಠ ಶ್ರೀ ಷ.ಬ್ರ.ಗುರುಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು ಆಶಿರ್ವಚನವಿತ್ತು ಎಚ್.ಎಸ್.ಪಾಟೀಲ ಶಿಕ್ಷಣ ಸಂಸ್ಥೆ ಉನ್ನತವಾಗಿ ಬೆಳೆಯಲಿ ಎಂದು ಆಶಿಸಿದರು.

ಇದೇ ಸಮಯದಲ್ಲಿ ಎಸ್.ಕೆ.ಹೈಸ್ಕೂಲ್ ನಿವೃತ್ತ ಶಿಕ್ಷಕ ಆರ್.ಎಲ್.ಕೊಪ್ಪದ, ನಿವೃತ್ತ ಉಪನ್ಯಾಸಕ ಎಸ್.ಡಿ.ಕರ್ಜಗಿ, ಹಾಗೂ ಸಹಕಾರಿ ಬ್ಯಾಂಕ್ ಮಿಣಜಗಿ ಶಾಖೆಯ ನಿವೃತ್ತ ವ್ಯವಸ್ಥಾಪಕ ಚನ್ನಪ್ಪ ಕಟ್ಟಿಮನಿ ಅವರಿಗೆ ಆದರ್ಶ ಶಿಕ್ಷಕರಾದ ಮೂಖ್ಯೋಪಾದ್ಯಾಯ ಅಶೋಕ ಕಟ್ಟಿ, ಪ್ರಾಚಾರ್ಯರಾದ ಎಂ.ಎಸ್.ಬಿರಾದಾರ, ಹಿರಿಯ ಪತ್ರಕರ್ತರಾದ ಜಿ.ಟಿ.ಘೋರ್ಪಡೆ ಅವರಿಗೆ ಸನ್ಮಾನಿಸಿ ಗೌರವಿಸಲಾಯಿತು.

ಈ ಸಮಯದಲ್ಲಿ ಎಚ್.ಎಸ್.ಪಾಟೀಲ ಅವರ ಧರ್ಮ ಪತ್ನಿ ಶಾಂತಮ್ಮ ಚೌದ್ರಿ, ಸಿ.ಆರ್.ಸಿ.ಆರ್.ಎ.ವಿಜಾಪೂರ, ನಿಕಟಪೂರ್ವ ಪ್ರಾಚಾರ್ಯ ವಾಯ್.ಎಸ್.ರಾಠೋಡ, ಶಿಕ್ಷಣ ಸಂಯೋಜಕ ಮೇಟಿ. ಮೊದಲಾದವರು ಇದ್ದರು.

ಕವಿತಾ ಬಿರಾದಾರ ಪ್ರಾರ್ಥಿಸಿದರು. ಉಪನ್ಯಾಸಕ ಪ್ರಕಾಶ ಪಾಟೀಲ ಸ್ವಾಗತಿಸಿದರು. ಶಿಕ್ಷಕ ಬಿ.ಆಯ್.ಹಿರೇಹೊಳಿ ನಿರೂಪಿಸಿದರು. ಪ್ರಕಾಶ ವಾಲಿಕಾರ ವಂದಿಸಿದರು.