ಭಾರತೀಯರೇಡ್‍ಕ್ರಾಸ್ ಸಂಸ್ಥೆಯ ಸೇವಾ ಕಾರ್ಯ ಮಹತ್ವದ್ದು :ಡಾ.ದೇಸಾಯಿ

ತಾಳಿಕೋಟೆ:ಜ.13: ಭಾರತೀಯ ರೇಡ್‍ಕ್ರಾಸ್ ಸಂಸ್ಥೆ ಅಂತರಾಷ್ಟ್ರೀಯ ಸಂಸ್ಥೆಯಾಗಿದ್ದು ಇದು 193 ದೇಶಗಳಲ್ಲಿ ಸ್ಥಾಪನೆಗೊಂಡಿದೆ ಈ ಸಂಸ್ಥೆಯ ಸಮಾಜಿಕ ಸೇವಾಕಾರ್ಯ ಎಲ್ಲಡೆ ಮಹತ್ವ ಪಡೆದುಕೊಂಡಿದೆ ಎಂದು ವಿಜಯಪೂರ ರೇಡ್ ಕ್ರಾಸ್ ಸಂಸ್ಥೆಯ ಮಾಜಿ ಕಾರ್ಯದರ್ಶಿ ಡಾ.ಎನ್.ಬಿ.ದೇಸಾಯಿ ಅವರು ನುಡಿದರು.

ಗುರುವಾರರಂದು ಸ್ಥಳೀಯ ಶ್ರೀ ಖಾಸ್ಗತೇಶ್ವರ ಕಲಾ ವಾಣಿಜ್ಯ ಹಾಗೂ ವಿಜ್ಞಾನ ಮಹಾವಿದ್ಯಾಲಯದ ವಿರಕ್ತಶ್ರೀ ಸಬಾಭವನದಲ್ಲಿ ಸ್ವಾಮಿ ವಿವೇಕಾನಂದರ 160ನೇ ಜಯಂತಿ ಅಂಗವಾಗಿ ವಾಯ್.ಆರ್.ಸಿ., ಎನ್.ಎಸ್.ಎಸ್. ಮತ್ತು ಭಾರತೀಯ ರೇಡ್‍ಕ್ರಾಸ್ ಸಂಸ್ಥೆ ತಾಳಿಕೋಟೆ ತಾಲೂಕಾ ಶಾಖೆಯ ಇವರ ಸಹಯೋಗದಲ್ಲಿ ಏರ್ಪಡಿಸಲಾದ ಸ್ವಯಂ ಪ್ರೇರಿತ ರಕ್ತದಾನ ಶಿಭಿರದಲ್ಲಿ ಮುಖ್ಯತಿಥಿಗಳಾಗಿ ಆಗಮಿಸಿ ಮಾತನಾಡುತ್ತಿದ್ದ ಅವರು ವಯೋಮಿತಿಯ ಅನುಗುಣವಾಗಿ ರಕ್ತದಾನ ಮಾಡಿದರೆ ಯಾವ ತೊಂದರೆ ಇಲ್ಲಾ ಆದರೆ 70ರ ಮೇಲ್ಪಟ್ಟು ವಯೋಮಿತಿ ಹೊಂದಿದವರು ರಕ್ತದಾನ ಮಾಡಬಾರದೆಂದರು. 3 ತಿಂಗಳಿಗೊಮ್ಮೆ ಪುರುಷರು ರಕ್ತದಾನ ಮಾಡಬಹುದು ರಕ್ತ ಹೊಸದಾಗಿ ಸಂಗ್ರಹವಾಗುತ್ತದೆ ರಕ್ತದಲ್ಲಿ ಆಯಾ ಸಂಬಂದಿತ ಗ್ರುಫ್‍ನವರಿಗೆ ಮಾತ್ರ ರಕ್ತಹಾಕಲಾಗುತ್ತದೆ ಇದರಿಂದ ಹೋಗುವ ಜೀವವನ್ನೇ ಉಳಿಸಿದಂತಾಗುತ್ತದೆ 45 ಕೀಲೋ ವಜ್ಜನಕ್ಕಿಂತ ಮೇಲ್ಪಟ್ಟವರು ರಕ್ತದಾನ ಮಾಡಿ ಕಡಿಮೆ ಇದ್ದವರು ಮಾಡುವದು ಬೇಡವೆಂದ ಅವರು ಎಚ್.ಆಯ್.ವ್ಹಿ. ಹೇಪೆಟ್ಸ್, ಲೈಂಗಿಕ ರೋಗ, ಕ್ರಾನಿಕ್, ಮಲೇರಿಯಾ ಇಂತವರ ರಕ್ತವನ್ನು ಬೇರೆಯವರಿಗೆ ಹಾಕುವದಿಲ್ಲ ಇಂತಹ ರಕ್ತವನ್ನು ಸಂಗ್ರಹಿಸಿಡಲಾಗುವದಿಲ್ಲಾವೆಂದರು.

ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಆರ್.ವ್ಹಿ.ಜಾಲವಾದಿ ಅವರು ಮಾತನಾಡಿ ಭಾರತದ ಶ್ರೀಮಂತ ಸಂಸ್ಕøತಿಯನ್ನು ಜಗತ್ತಿಗೆ ತೋರಿಸಿಕೊಟ್ಟವರು ಸ್ವಾಮಿ ವಿವೇಕಾನಂದ ಅವರು ಆಗಿದ್ದಾರೆ ಯುವ ಶಕ್ತಿಯು ಜ್ಞಾನದ ಮುಖಾಂತರ ಜಗತ್ತನ್ನು ಆಳುವಂತಹ ಕಾರ್ಯ ಮಾಡಿ ಯುವಜನತೆಗೆ ಅವರು ಸಲಹೆ ನೀಡಿದ್ದಾರೆಂದರು. ರಕ್ತದಾನವೆಂಬುದು ಎಲ್ಲ ದಾನಗಳಲ್ಲಿ ಮಹತ್ವದ ದಾನ ಇದಾಗಿದ್ದು ಇದು ಜೀವ ಉಳಿಸುವ ಕಾರ್ಯ ಮಾಡುತ್ತದೆ ಎಂದು ಪ್ರಪ್ರಥಮವಾಗಿ ತಾವೇ ರಕ್ತದಾನ ಮಾಡುವದಾಗಿ ಪ್ರಾಚಾರ್ಯ ಜಾಲವಾದಿ ಅವರು ಘೋಷಿಸಿದಂತೆ ರಕ್ತದಾನ ಮಾಡಿದರು.

ಇನ್ನೋರ್ವ ಅತಿಥಿ ಎನ್‍ಸಿಸಿ ಅಧಿಕಾರಿ ರಾಘವೇಂದ್ರ ಅವರು ಮಾತನಾಡಿ ದೇಶದ ಶಕ್ತಿ ಎಂದರೆ ಸಾಮಾನ್ಯವಲ್ಲಾ ಯುವ ಶಕ್ತಿ ರಕ್ತವೇ ದೇಶದ ಇತಿಹಾಸ ಕಾಪಾಡುವಂತಹದ್ದಾಗಿದೆ ಎಂದರು. ವೀರಸನ್ಯಾಸಿ ಬಿರುದುಗಳನ್ನು ಪಡೆದ ಸ್ವಾಮಿ ವಿವೇಕಾನಂದರು ಬ್ರಹ್ಮಚಾರಿಯಾಗಿಯೇ ಆರೋಗ್ಯವಂತರಾಗಿ ಬಾಳ ಬೆಳಗಿದರು ಅವರಂತೆ ಯುವಕರು ಅವರ ಆದರ್ಶವನ್ನು ಮೈಗೂಡಿಸಿಕೊಂಡು ಸಾಗಬೇಕೆಂದರು.

ವೀರಶೈವ ವಿದ್ಯಾವರ್ದಕ ಸಂಘದ ಅಧ್ಯಕ್ಷ ವ್ಹಿ.ಸಿ.ಹಿರೇಮಠ(ಹಂಪಿಮುತ್ಯಾ) ಅವರು ಸ್ವಾಮಿ ವಿವೇಕಾನಂದ ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡುವದರೊಂದಿಗೆ ರಕ್ತದಾನ ಶಿಭಿರವನ್ನು ಉದ್ಘಾಟಿಸಿದರು.

ಇದೇ ಸಮಯದಲ್ಲಿ ಶ್ರೀಶೈಲ ಜಗದ್ಗುರುಗಳಿಂದ ಪ್ರಚಾರ ಭಾಸ್ಕರ ಎಂಬ ಪ್ರಶಸ್ತಿ ಪಡೆದ ಹಿರಿಯ ಪತ್ರಕರ್ತರಾದ ಜಿ.ಟಿ.ಘೋರ್ಪಡೆ ಅವರಿಗೆ ಸನ್ಮಾನಿಸಿ ಗೌರವಿಸಲಾಯಿತು.

ಈ ಶಿಬಿರದಲ್ಲಿ 108 ಜನರು ತಪಾಸಣೆ ಮಾಡಿಸಿಕೊಂಡು 52 ಜನರು ಸ್ವಯಂ ಪ್ರೇರಿತ ರಕ್ತದಾನ ಮಾಡಿದರು.

ಈ ಸಮಯದಲ್ಲಿ ರೇಡ್‍ಕ್ರಾಸ್ ಸಂಸ್ಥೆ ತಾಳಿಕೋಟೆ ತಾಲೂಕಾ ಅಧ್ಯಕ್ಷ ವ್ಹಿ.ಬಿ.ಸಜ್ಜನ, ಹಾಗೂ ವಿಜಯಪುರ ರೇಡ್ ಕ್ರಾಸ್ ರಕ್ತಸಂಗ್ರಹಣಾಲಯದ ತಾಂತ್ರಿಕ ಪರಿಣಿತರಾದ ಲಾಲಸಾಬ, ಕುಶಾಲ, ಅಯ್ಯಪ್ಪ, ಪ್ರೀಯಾಂಕಾ ಹಾಗೂ ಉಪನ್ಯಾಸಕರಾದ ಡಿ.ಬಿ.ಮುಗಡ್ಲಿಮಠ, ಎ.ಎಸ್.ಆಲ್ಯಾಳಮಠ, ಡಿ.ಡಿ.ಮಳಗೆ, ಎಸ್.ಎ.ನಾವದಗಿ, ಆರ್.ಪಿ.ಜಾಧವ, ಎಚ್.ಆಯ್.ಜೈನಾಪೂರ, ಎಸ್.ಬಿ.ಪಾಟೀಲ, ಎ.ಆರ್.ರಾಠೋಡ, ಸುಜಾತಾ ಸಿ, ಎ.ಎ.ಅಬ್ಬಾರ, ಆರ್.ವ್ಜಿ.ಮಿಸಕಿನ್, ಮೊದಲಾದವರು ಉಪಸ್ಥಿತರಿದ್ದರು.

ಉಪನ್ಯಾಸಕ ರಮೇಶ ಜಾಧವ ಸ್ವಾಗತಿಸಿದರು. ಡಾ.ದೀಪಾ ಮಾಳಗಿ ನಿರೂಪಿಸಿದರು. ಅಶೋಕ ರಾಠೋಡ ವಂದಿಸಿದರು.