ಭಾರತೀಯರು ಒಗ್ಗೂಡಿ ಸಾಗಬೇಕು: ಉಜ್ಜಯಿನಿ ಶ್ರೀ ಸಲಹೆ

ಆಳಂದ:ಮಾ.28: ಗ್ರಾಮ, ಪಟ್ಟಣ, ರಾಜ್ಯ, ದೇಶದ ಎಲ್ಲ ಜಾತಿಯ ಜನಾಂಗದವರು ಧರ್ಮದವರು ಅನ್ನೋದಕ್ಕಿಂತ ಬದಲಾಗಿ ನಾವೆಲ್ಲರೂ ಈ ದೇಶದ ಪ್ರಜೆಗಳು ಭಾರತಮಾತೆ ಮಕ್ಕಳು ನಾವೆಲ್ಲರೂ ಭಾರತೀಯರು ಎಂಬುವ ಮಾರ್ಗದಲ್ಲಿ ಸಾಗಬೇಕು ಎಂದು ಉಜ್ಜಯಿನಿ ಪೀಠದ ಜಗದ್ಗುರು ಶ್ರೀ ಸಿದ್ಧಲಿಂಗ ಶಿವಾಚಾರ್ಯ ಭಗವತ್ಪಾದರು ಸಲಹೆ ನೀಡಿದರು.

ತಾಲೂಕಿನ ಧುತ್ತರಗಾಂವ ಗ್ರಾಮದ ಆರಾಧ್ಯದೈವ ಶ್ರೀ ವೀರೇಶ್ವರ ಶರಣರ ಜಾತ್ರಾ ಮಹೋತ್ಸವ ನಿಮಿತ್ತ ಭಾನುವಾರ ನೂತನ ಶಿಲಾಮಂಟ ಉದ್ಘಾಟನೆ ಹಾಗೂ ಲಕ್ಷ ದೀಪೋತ್ಸವ, ಬೃಹತ್ ಧಾರ್ಮಿಕ ಸಮಾರಂಭ ಉದ್ಘಾಟಿಸಿ ಅವರು ಆಶೀರ್ವಚನ ನೀಡಿದರು.

ನಾಡು ಸಮೃದ್ಧವಾಗಿ ಒಳ್ಳೆಯ ಮಳೆ, ಬೆಳೆಯಾಗಲಿ, ಬೆಳೆಗೆ ತಕ್ಕ ಮಾರುಕಟ್ಟೆ ಮೌಲ್ಯ ದೊರೆತು ಈ ದೇಶದ ಬೆನ್ನೆಲುಬು ಅನ್ನಿಸಿಕೊಂಡಂತಹ ಅನ್ನದಾತ ರೈತನ ಬದುಕು ಉತ್ತಮಗೊಳ್ಳಲಿ ಎಂದು ಹಾರೈಸಿದರು.

ಮಾನವರು ಸಂಕಷ್ಟದಿಂದ ಪಾರಾಗಿ ಎಲ್ಲರ ವ್ಯವಹಾರ, ವ್ಯಾಪಾರ ಉದ್ಯೋಗಗಳು ಅಭಿವೃದ್ಧಿಯಾಗಲಿ, ವಧು, ವರರ ಕಲ್ಯಾಣವಾಗಲಿ, ವಿದ್ಯಾರ್ಥಿಗಳ ಭವಿಷ್ಯ ಉತ್ತಮವಾಗಲಿ, ಸಂತಾನ ಹೀನ ದಂಪತಿಗಳಿಗೆ ದೇಶಭಕ್ತ ವಿದ್ಯಾಭ್ಯಾಲಯ ಸಂಸ್ಕಾರವಂತ ಮಕ್ಕಳು ಹುಟ್ಟುವಂತಾಗಲಿ ಎಂದು ಹೇಳಿದರು.

ಯಾರ ಭಾವ ದೊಡ್ಡದಿರುತ್ತದೆ ಯಾರು ಮತ್ತೊಬ್ಬರ ಜೊತೆಗೆ ಸೇರಿ ನಾವು ಅವರಂತೆ ಅನ್ನುವಂತ ಬದುಕುವ ಭಾವ ಇರುತ್ತದೆ ಆ ವ್ಯಕ್ತಿ ದೊಡ್ಡವನಾಗುತ್ತಾನೆ ಅನ್ನೋದಕ್ಕೆ ಕೇವಲ ಈ ದೀಪ ಮಾತ್ರ ಉದಾಹರಣೆ, ಭಗವಂತ ಭಕ್ತರ ಎಲ್ಲ ಭವಣೆಗಳನ್ನ ದುಃಖಗಳನ್ನು ದೂರ ಮಾಡಯತ್ತಾನೆ. ಕಾಯ ಅಳಿದರು ಕಾಯಕದ ಕೀರ್ತಿ ಭಕ್ತರನ್ನು ಕಾಪಾಡಿದÀಂತ ಕೀರ್ತಿ ಧುತ್ತರಗಾಂವದ ವೀರೇಶ್ವರನ ಕೃಪೆ ಭಕ್ತರ ಮೇಲಿದೆ. ಮನುಷ್ಯನಿಗೆ ಸದ್ಗುಣ ಬರಬೇಕಾದರೆ ತುಳಿದು ಬೆಳೆಯುವುದು ನಾಯಕರ ಲಕ್ಷಣ ಅಲ್ಲ ತಿಳಿದು ಬೆಳೆಯುವುದು ಅವಾಗ ನಾವು ದೊಡ್ಡವರಾಗುತ್ತೇವೆ. ಸತಸಂಕಲ್ಪ ಮಾಡಿಬಿಟ್ಟರೆ ನಿಮ್ಮ ಮನಸ್ಸಿನಲ್ಲಿರುವ ಅಂಧಕಾರವನ್ನು ದೂರವಾಗಿ ನಿಮ್ಮ ಹೃದಯದಲ್ಲಿರತಕ್ಕಂಥ ಕೆಟ್ಟ ಗುಣಗಳು ಜ್ಞಾನದ ದೀಪವನ್ನು ಹಚ್ಚಿ ನಿಮ್ಮೆಲ್ಲರ ಬದುಕಿನೊಳಗೆ ಜ್ಞಾನದ ಬೆಳಕನ್ನು ಬೆಳಗುತ್ತದೆ ಎಂದು ಹೇಳಿದರು.

ಶಾಸಕ ಸುಭಾಷ ಗುತ್ತೇದಾರ ಅವರು ಮಾತನಾಡಿ, ವೀರೇಶ್ವರ ಶರಣರ ಭಕ್ತರ ಬಾಳು ಬೆಳಗಿದ್ದಾರೆ. ಉಜ್ಜನಿಯ ಜಗದ್ಗುರುಗಳ ಆಗಮನದಿಂದ ಈ ಭಕ್ತರ ಮೇಲೆ ಕರುಣೆ ಸಂಸ್ಕಾರ ದೊರೆತು ಬದುಕು ಹಸನಾಗಲಿದೆ. ದೇವಸ್ಥಾನ ಅಡಿಯಲ್ಲಿ ಕಲ್ಯಾಣ ಮಂಟಪ ಬೇಡಿಕೆಗೆ ಅಗತ್ಯ ಅನುದಾನ ಒದಗಿಸಲಾಗುವುದು. ಮುಂದೆಯೂ ಆಶೀರ್ವಾದಿಂದ ಬಂದರೆ ಎಲ್ಲ ಬೇಡಿಕೆ ಈಡೇರಿಸಲಾಗುವುದು ಎಂದು ಹೇಳಿದರು.

ಮಾಜಿ ಉಪಸಭಾಪತಿ ಬಿ.ಆರ್. ಪಾಟೀಲ, ಪುರಸಭೆ ಮಾಜಿ ಅಧ್ಯಕ್ಷ ವಿಠ್ಠಲರಾವ್ ಪಾಟೀಲ, ಕೃಷಿಕ ಸಮಾಜ ಅಧ್ಯಕ್ಷ ಸಿದ್ರಾಮಪ್ಪ ಪಾಟೀಲ ಧಂಗಾಪೂರ, ರಾಜಶೇಖರ ಮಲಶೆಟ್ಟಿ, ಚಂದುರಾವ್ ಕುಲಕರ್ಣಿ, ದಯಾನಂದ ಪಾಟೀಲ, ಜಗನಾಥ ಶೇಗಜಿ ಅತಿಥಿಗಳಾಗಿ ಪಾಲ್ಗೊಂಡಿದ್ದರು.

ಅಧ್ಯಕ್ಷತೆ ವಹಿಸಿದ್ದ ಕಡಗಂಚಿ ಕಟಿಮಠದ ಶ್ರೀ ವೀರಭದ್ರ ಶಿವಾಚಾರ್ಯರು, ಮಾದನಹಿಪ್ಪರಗಾ ಮಠದ ಶ್ರೀ ಅಭಿನವ ಶಿವಲಿಂಗ ಮಹಾಸ್ವಾಮೀಜಿ, ನರೋಣಾದ ಗುರುಮಹಾಂತ ಶ್ರೀ, ಭೂಸನೂರಿನ ಶ್ರೀ ಶಂಭುಸೋಮನಾಥ ಶ್ರೀ, ಮೋಲಕೂಡದ ಗುರುಲಿಂಗ ಶ್ರೀ, ಬಾವಿನಾಲಾದ ಶರಣೆ ಸಿದ್ಧಮ್ಮಾಂಬೆ ಇದ್ದರು.

ಜಾತ್ರಾ ಉತ್ಸವ ಸಮಿತಿ ಗೌರವ ಅಧ್ಯಕ್ಷ ಚಂದ್ರಶೇಖರ ಹಿರೇಮಠ ಪ್ರಸ್ತಾವಿಕ ಮಾತನಾಡಿದರು, ಅಧ್ಯಕ್ಷ ವೀರಣ್ಣಾ ಎಸ್. ಮಂಗಾಣೆ ಸ್ವಾಗತಿಸಸಿದರು. ಕಾಯಾಧ್ಯಕ್ಷ ವೀರಣ್ಣಾ ಜಿ. ಹೊನ್ನಶೆಟ್ಟಿ ವಂದಿಸಿದರು. ಗುರುಲಿಂಗಯ್ಯಾ ಸ್ವಾಮಿ ನಿರೂಪಿಸಿದರು.

ಈ ವೇಳೆ ಸಾಹಿತಿ ಡಾ. ಗುರುಲಿಂಗಯ್ಯಾ ಸ್ವಾಮಿ ಹೂವಿನಳ್ಳಿ ಮತ್ತು ಗುಲಾಬ ಶೇಖ ರಚಿಸಿದ ಶ್ರೀ ವೀರೇಶ್ವರ ಶರಣರ ಭಜನಾ ಪದಗಳ ಕೃತಯನ್ನು ಬಿಡುಗಡೆ ಗೊಳಿಸಲಾಯಿತು. ಸಹಸ್ರಾರು ಸಂಖ್ಯೆಯ ಪಾಲ್ಗೊಂಡಿದ್ದ ಭಕ್ತಾದಿಗಳಿಂದ ಲಕ್ಷದೀಪೋತ್ಸವ ಜರುಗಿತು.

27ರಂದು ಬೆಳಗಿನ ಜಾವ ಗ್ರಾಮದ ಪ್ರಮುಖ ಬೀದಿಗಳಲ್ಲಿ ಶ್ರೀ ವೀರೇಶ್ವರ ಶರಣರ ಪಲ್ಲಕ್ಕಿ ಉತ್ಸವ ಹೊರಟು ಮಧ್ಯಾಹ್ನ 4:00ಗಂಟೆಗೆ ದೇವಸ್ಥಾನಕ್ಕೆ ತಲುಪಿದ ಬಳಿಕ ಜಂಗಿ ಪೈಲ್ವಾನರ ಕುಸ್ತಿ ಪಂದ್ಯಾವಳಿ ಹಾಗೂ ರಾತ್ರಿ 8ಕ್ಕೆ ರಂಗು ರಂಗಿನ ಮದ್ದುಸುಡುವ ಕಾರ್ಯಕ್ರಮ ನಡೆಯಲಿದೆ.