ಭಾರತೀಯರು ಎಂದು ಮರೆಯದ ಅವಿಸ್ಮರಣೀಯ ದಿನ

ಸೈದಾಪುರ:ಜು.29:ಕಾರ್ಗಿಲ್ ವಿಜಯ ಪ್ರತಿಯೊಬ್ಬ ಭಾರತೀಯ ಪ್ರಜೆಗಳು ಎಂದು ಮರೆಯದ ಅವಿಸ್ಮರಣೀಯ ದಿನ ಎಂದು ಗುರುಕುಲ ವಿದ್ಯಾಪೀಠ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕಿ ಮರಿಲಿಂಗಮ್ಮ ಅವರು ಅಭಿಪ್ರಾಯಪಟ್ಟರು.
ಪಟ್ಟಣದ ಗುರುಕುಲ ವಿದ್ಯಾಪೀಠ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಕಾರ್ಗಿಲ್ ವಿಜಯ ದಿವಸ್ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಜುಲೈ 26 ಎಂದರೆ ಭಾರತೀಯ ಸೇನೆಯ ಶಕ್ತಿ ಸಾಮಥ್ರ್ಯ ಸಾಹಸದ ಕ್ಷಣಗಳು ಪ್ರತಿಯೊಬ್ಬರಿಗೂ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿಯುವಂತ ದಿನವಾಗಿದೆ. ಭಾರತೀಯರು ಜಮ್ಮು ಕಾಶ್ಮೀರದ ಕಾರ್ಗಿಲ್ನಲ್ಲಿ ನಡೆದ ಈ ಯುದ್ಧದಲ್ಲಿ ಪಾಕಿಸ್ತಾನವನ್ನು ನಮ್ಮ ಭಾರತದ ವೀರ ಯೋಧರು ಸದೆ ಬಡೆದು ಅವರು ಆಕ್ರಮಿಸಿಕೊಂಡಿದ್ದ ಜಾಗವನ್ನು ವಶಕ್ಕೆ ಪಡೆದ ದಿನವಾಗಿದೆ. ಈ ದಿನವನ್ನು ಕಾರ್ಗಿಲ್ ವಿಜಯ ದಿವಸ್ ಎಂದು ಆಚರಿಸಲಾಗುತ್ತಿದೆ. ನಾವು ಕೂಡ ನೆಲ,ಜಲ ಮತ್ತು ದೇಶದ ರಕ್ಷಣೆಗಾಗಿ ಸೈನ್ಯವನ್ನು ಸೇರಬೇಕು ಎಂದರು
ಈ ಸಂದರ್ಭದಲ್ಲಿ ನೇತ್ರಾವತಿ, ಆಸೀಫಾ, ಮಧು, ಉಮಾದೇವಿ, ಸುಶ್ಮಿತಾ, ಭೂಮಿಕಾ, ಸಾನೀಯ ಸಮರೀನ್ ಹಾಗೂ ವಿದ್ಯಾರ್ಥಿಗಳು ಸೇರಿದಂತೆ ಇತರರಿದ್ದರು.