ಭಾರತೀಯರಾದ ನಾವೆಲ್ಲರೂ ಒಂದೇ : ಶಹಾಜಹಾನ ಡೊಂಗರಗಾಂವ

ಅಥಣಿ : ಮೇ.29:ಭಾರತ ವಿವಿಧತೆಯಲ್ಲಿ ಏಕತೆಯನ್ನು ಹೊಂದಿರುವ ದೇಶ. ಭಾರತೀಯರಾದ ನಾವೆಲ್ಲರೂ ಪರಸ್ಪರ ಸೌಹಾರ್ದತೆ, ಸಹಬಾಳ್ವೆ, ಸಹನೆ ಹಾಗೂ ಜಾತಿ ಮತ ಪಂಥದ ಭೇದಭಾವವಿಲ್ಲದೆ ನಾವೆಲ್ಲರೂ ಒಂದೇ ಎಂಬ ಮನೋಭಾವನೆ ಬೆಳೆಸಿಕೊಂಡಾಗ ಮಾತ್ರ ಸಮಾಜ ಹಾಗೂ ದೇಶ ಅಭಿವೃದ್ಧಿ ಹೊಂದಲು ಸಾಧ್ಯ ಎಂದು ಮಾಜಿ ಶಾಸಕ ಶಹಾಜಹಾನ ಡೊಂಗರಗಾಂವ ಹೇಳಿದರು.
ಅವರು ತಾಲೂಕಿನ ಐಗಳಿ ಗ್ರಾಮದಲ್ಲಿ ಹಜರತ್ ಜಲಾಲಸಾಬ್ ದೇವರ ಉರುಸ್ ನಿಮಿತ್ತ ಸೋಮವಾರ ಆಯೋಜಿಸಲಾಗಿದ್ದ ಚೌಡಕಿ ಪದಗಳು ಮತ್ತು ಜಾನಪದ ಸಾಂಸ್ಕøತಿಕ ಕಲಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತಿದ್ದರು. ಈ ಭವ್ಯ ಭಾರತ ದೇಶದಲ್ಲಿ ಕಲೆ, ಸಾಹಿತ್ಯ, ಸಾಂಸ್ಕೃತಿಕ ಹಿರಿಮೆ ಇದೆ. ಇಲ್ಲಿ ಹಲವಾರು ಜಾತಿ ಜನಾಂಗಗಳಿದ್ದರೂ ಸೌಹಾರ್ದತೆಯಿಂದ ಬಾಳುವ ಕಲೆಯನ್ನು ಪ್ರತಿಯೊಬ್ಬರೂ ಕರಗತ ಮಾಡಿಕೊಂಡಿದ್ದಾರೆ
ಎಂದರು
ಜಾತ್ರೆಗಳು ಹಾಗೂ ಹಬ್ಬ, ಹರಿದಿನಗಳು ಮನುಷ್ಯನ ಸಂಬಂಧಗಳನ್ನು ಗಟ್ಟಿಗೊಳಿಸುತ್ತವೆ. ಗ್ರಾಮದಲ್ಲಿ ಅಪ್ಪಯ್ಯಸ್ವಾಮಿ, ಮಾಣಿಕಪ್ರಭು, ದುರ್ಗಾದೇವಿ ಸೇರಿದಂತೆ ಎಲ್ಲ ದೇವರ ಜಾತ್ರೆ, ಹನುಮ, ಬಸವೇಶ್ವರ ಹಾಗೂ ಡಾ. ಬಾಬಾಸಾಹೇಬ ಅಂಬೇಡ್ಕರ್ ಜಯಂತಿಗಳನ್ನು ಸಹ ಗ್ರಾಮದಲ್ಲಿ ಎಲ್ಲರೂ ಒಂದಾಗಿ ಆಚರಿಸುತ್ತಿರುವದು ಸಂತಸದ ಸಂಗತಿ.
ಹಜರತ್ ಜಲಾಲಸಾಬ್ ದೇವರ ಜಾತ್ರೆಯನ್ನು ಗ್ರಾಮದಲ್ಲಿ ಎಲ್ಲರೂ ಕೂಡಿ, ಸೂಫಿ ಸಂತರು, ಋಷಿಮುನಿಗಳು ಹಾಕಿಕೊಟ್ಟ ಸನ್ಮಾಮಾರ್ಗದಲ್ಲಿ ಶ್ರದ್ಧಾ ಭಕ್ತಿಯಿಂದ, ಗ್ರಾಮೀಣ ಕಲೆಗಳನ್ನು ಪೆÇ್ರೀತ್ಸಾಹಿಸಿ ಕಲಾವಿದರಿಗೆ ಗೌರವಿಸಿ ಆ ಕಲೆಗಳನ್ನು ಪರಿಚಯಿಸುವ ಮೂಲಕ ಆಚರಿಸುತ್ತಿರುವುದು ಸಂತೋಷದ ಸಂಗತಿ ಎಂದರು.
ಈ ವೇಳೆ ಕಾರ್ಯಕ್ರಮದ ಅಧ್ಯಕ್ಷತೆಯನ್ನ ಮುಖಂಡ ಎ.ಎಸ್. ಪಾಟೀಲ ವಹಿಸಿದ್ದರು.
ಹಳ್ಳೂರು ಹಾಗೂ ಹೊಸೂರು ಗ್ರಾಮಗಳ ಕಲಾವಿದರ ಚೌಡಕಿ ಪದಗಳು ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಜನಮನ ಸೆಳೆದವು.
ಈ ಸಂದರ್ಭದಲ್ಲಿ ಮುಖಂಡರಾದ ಡಾ. ಆರ್.ಡಿ.ವಾಘಮೋರೆ, ನೂರ್ ಅಹ್ಮದ್ ಡೊಂಗರಗಾಂವ, ಬಾಳ ಮುಜಾವರ, ಜಿ.ಎಸ್. ಬಿರಾದಾರ, ಅಪ್ಪಾಸಾಬ ತೆಲಸಂಗ, ಶೌಕತ್ ಅಲಿ ಮುಜಾವರ, ಎ ಸಿ ಹಿರೇಮಠ ಸೇರಿದಂತೆ ಉರುಸ್ ಕಮಿಟಿ ಸದಸ್ಯರು, ಹಲವಾರು ಗ್ರಾಮಗಳ ಕಲಾವಿದರು ಇದ್ದರು.


ತಾಲೂಕಿನ ಐಗಳಿ ಗ್ರಾಮದಲ್ಲಿರುವ ಹಜರತ್ ಜಲಾಲಸಾಬ್ ದೇವರ ಉರುಸ್ ಕಾರ್ಯಕ್ರಮ ಅತ್ಯಂತ ವಿಶೇಷವಾಗಿದ್ದು, ಇಲ್ಲಿಯ ಹಿಂದೂ ಮತ್ತು ಮುಸ್ಲಿಂ ಸಮುದಾಯದವರು ಒಂದಾಗಿ ಉರುಸ್ ಆಚರಣೆ ಮಾಡುತ್ತಿದ್ದು, ಇದು ಭಾವ್ಯಕ್ಯತೆ ಹಾಗೂ ಸೌಹಾರ್ದತೆ ಸಂಕೇತದ ಉರುಸ್ ಆಗಿದೆ. ಯಾವುದೇ ಬೇಧ ಭಾವವಿಲ್ಲದೆ ಒಂದಾಗಿ ನೂರಾರು ವರ್ಷಗಳಿಂದ ಹಜರತ್ ಜಲಾಲಸಾಬ್ ದೇವರ ಉರುಸ್ ಅಚರಿಸುತ್ತ ಬಂದಿದ್ದಾರೆ. ಇದೊಂದು ಐತಿಹಾಸಿಕ ಮತ್ತು ಮಾದರಿ ಉರುಸ್ ಆಗಿದೆ.

      ಶಹಾಜಹಾನ ಡೊಂಗರಗಾಂವ
       ಮಾಜಿ ಶಾಸಕರು ಅಥಣಿ